ಬೆಂಗಳೂರು : ಕಾಂಗ್ರೆಸ್‌ನವರ ಆದ್ಯತೆ ಶಿಕ್ಷಣವಲ್ಲ. ಕಾಂಗ್ರೆಸ್ ಪಕ್ಷ ದೇಶಕ್ಕೆ ಮಾರಕ. ಚರ್ಚೆಗೆ ಬನ್ನಿ ಭಾಗವಹಿಸಿ ಅಂದರೆ ಕುಂಟು ನೆಪ ಹೇಳ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಾದೇಶಿಕ ಭಾಷೆ ಬೆಳೆಯೋದಕ್ಕೆ ಕಾಂಗ್ರೆಸ್ ನವರೇ ಕೊಡಲಿಲ್ಲ. ಎಲ್ಲರಿಗೂ ಸಮಾನತೆ ಸಿಗಬೇಕೆಂದರೆ ಅದಕ್ಕೆ ಈ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕವಾಗಿದೆ ಎಂದರು.
ನಮ್ಮ ದೇಶದಲ್ಲಿ ತ್ರಿಭಾಷ ನೀತಿ ತಂದವರು, ಹಿಂದಿ ಕಡ್ಡಾಯವಾಗಿ ಕಲಿಯಯವಂತೆ ಒತ್ತಾಯ ಮಾಡಿದ್ದು ಕಾಂಗ್ರೆಸ್. ಕನ್ನಡ ಕಡ್ಡಾಯವಾಗಿ ಕಲಿಯಬೇಕು ಅಂತಾ ಹೇಳಿದ್ದು ನಮ್ಮ ಸರ್ಕಾರ. ಪ್ರತಿ ಹಂತದಲ್ಲೂ ಗೊಂದಲ ಸೃಷ್ಟಿಸಿ, ಸಮಾಜ ಹೀಗೆ ಇರಬೇಕೆಂದು ನಿರ್ಧರಿಸಿದ್ದಾರೆ.
ಸುಶಿಕ್ಷಿತರಾಗಬಾರದು ಅನ್ನುವುದೇ ಕಾಂಗ್ರೆಸ್ ಇಚ್ಛೆಯಾಗಿದೆ. ಎಲ್ಲರಿಗೂ ಸಮಾನತೆ ಸಿಗಬೇಕು ಅನ್ನೋದು ನಮ್ಮ ಗುರಿ. ಅದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಬೇಕು ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತರಬೇಕು ಎಂಬ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ತರಲಾಗಿದೆ.
ನವ ಭಾರತ 21ನೇ ಶತಮಾನದಲ್ಲಿ ನೀಡಬೇಕು ಎಂಬ ಕಾರಣಕ್ಕಾಗಿ ಎನ್ಇಪಿ ತರಲಾಗಿದೆ. ಎಲ್ಲಾ ಕಡೆ ಎನ್ಇಪಿ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಪ್ರತಿಪಕ್ಷ ನಾಯಕರು ಮೆಕಾಲೆ ಸಿದ್ಧಾಂತವನ್ನು ಸರಿ ಇದೆ ಅಂತಾರೆ ಎಂದು ಟೀಕಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಈಗಾಗಲೇ ಸಮಾಜದಲ್ಲಿ ಪ್ರಧಾನಿ ಮಾತನಾಡಿದ್ದಾರೆ. 2014ರಲ್ಲಿ ಅಧಿಕಾರ ವಹಿಸಿಕೊಂಡಾಗ, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಬೇಕು. ಈಗಿನ ಶಿಕ್ಷಣದಲ್ಲಿ ಸುಧಾರಣೆ ತರಬೇಕು. ಗುಣಮಟ್ಟ, ಮೌಲ್ಯ ಶಿಕ್ಷಣ ನೀಡಬೇಕು. ಶಿಕ್ಷಣ ನೀತಿ ಸುಧಾರಣೆ ತಂದು 34 ವರ್ಷಗಳಾಗಿದೆ ಎಂದ ಸಚಿವರು, ಐದೂವರೆ ವರ್ಷಗಳ ಕಾಲ ಎಲ್ಲರ ಜೊತೆ ಸಮಾಲೋಚನೆ ಮಾಡಿ ಈ ನೀತಿ ತರಲು ಮುಂದಾಗಿದ್ದೇವೆ ಎಂದರು.
ಎರಡೂವರೆ ಲಕ್ಷ ಗ್ರಾಮ ಪಂಚಾಯತ್‌ಗಳಲ್ಲಿ ಚರ್ಚೆ ಮಾಡಲಾಗಿದೆ. ತಜ್ಞರ ಜೊತೆ ಚರ್ಚೆ ಮಾಡಿ, ಸಭೆಗಳನ್ನು ಮಾಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ರಚನೆ ಮಾಡಬೇಕು. ಆದರೆ, ಇಂದು ವಿಪಕ್ಷದ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೆಕಾಲೆ ಶಿಕ್ಷಣ ಸರಿ ಇದೆ ಅಂತಾ ಸಮರ್ಥಿಸಿಕೊಳ್ಳುತ್ತಿದ್ದಾರೆ. ಮೆಕಾಲೆ ಶಿಕ್ಷಣ ನಮ್ಮ ದೇಶಕ್ಕೆ ಒಳ್ಳೆಯದು ಅಂತಾ ಹೇಳಿದ್ದಾರೆ.
ಕೊನೆ ದಿನ, ಕೊನೆ ಆಟ ಶಿಕ್ಷಣವೇ ಪ್ರಮುಖ. ಇಂದು ಪ್ರತಿಯೊಬ್ಬರೂ ಸಭೆಯಲ್ಲಿ ಚರ್ಚೆ ಮಾಡಲು, ಶಿಕ್ಷಣವೇ ಮುಖ್ಯವಾಗಿದೆ. ಇಂದು ಶಿಕ್ಷಣ ಅವರಿಗೆ ಮುಖ್ಯವಾಗಿಲ್ಲ. ಗೊಂದಲ, ದ್ವೇಷ, ಅಸೂಯೆ ಮೂಡಿಸಲು ನಿಂತಿದ್ದಾರೆ.
ಪ್ರಾರಂಭದಲ್ಲೇ ನಿಲುವಳಿ ಚರ್ಚೆ ಮಾಡಬೇಕಿತ್ತು. ಕೊನೆಗೆ ಶಿಕ್ಷಣ ವಿಚಾರದಲ್ಲಿ ಚರ್ಚೆ ಮಾಡದೆ ಕಾಲ ಕಳೆದಿದೆ. ಇಂತಹ ಕಾಂಗ್ರೆಸ್ ಪಕ್ಷ ಶಿಕ್ಷಣಕ್ಕೆ ಮಾರಕವಾಗಿದೆ. ಚರ್ಚೆಗೆ ಬನ್ನಿ ಅಂತಾ ಸ್ವಾಗತ ಮಾಡಿದ್ದರೂ, ಸದನದಲ್ಲಿ ಚರ್ಚೆಗೆ ಬರಲಿಲ್ಲ ಎಂದು ಟೀಕಿಸಿದರು.