ETV Bharat / state

ಆಸಕ್ತಿಯ ಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆ ಮುಖ್ಯ: ಡಾ ಸಿ ಎನ್​ ಅಶ್ವತ್ಥ್​ ನಾರಾಯಣ್​ - ಆರ್ಯವೈಶ್ಯ ಸಮಾಜ

ಜಗತ್ತು ಯಾವಾಗಲೂ ಸ್ಪರ್ಧಾತ್ಮಕವಾಗಿರುತ್ತದೆ. 21ನೇ ಶತಮಾನದಲ್ಲಂತೂ ಇದು ತೀವ್ರವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್​ ಅಶ್ವತ್ಥ್​ ನಾರಾಯಣ್​ ಅವರು ಹೇಳಿದ್ದಾರೆ.

ಆರ್ಯವೈಶ್ಯ ಸಮಾಜದಿಂದ ಪ್ರಶಸ್ತಿ ಪ್ರದಾನ ಸಮಾರಂಭ

author img

By

Published : Sep 4, 2022, 7:49 PM IST

Updated : Sep 4, 2022, 9:51 PM IST

ಬೆಂಗಳೂರು: ನಾವು ಆರಿಸಿಕೊಳ್ಳುವ ಆಸಕ್ತಿಯ ಕ್ಷೇತ್ರಗಳಲ್ಲಿ ಉತ್ಕೃಷ್ಟ ಸಾಧನೆ ಮಾಡುವುದು ಮುಖ್ಯವಾಗುತ್ತದೆ. ಇದಕ್ಕೆ ನಾಯಕರಾದ ಡಿ. ಹೆಚ್ ಶಂಕರಮೂರ್ತಿ ಮಾದರಿಯಾಗಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ್​ ನಾರಾಯಣ್​ ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವತ್ಥ್​​ ನಾರಾಯಣ್ ಅವರು ಮಾತನಾಡಿದರು

ಆರ್ಯವೈಶ್ಯ ಸಮಾಜ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಶ್ವತ್ಥ್​ ನಾರಾಯಣ್​ ಮಾತನಾಡಿದ ಅವರು, ಜಗತ್ತು ಯಾವಾಗಲೂ ಸ್ಪರ್ಧಾತ್ಮಕವಾಗಿರುತ್ತದೆ. 21ನೇ ಶತಮಾನದಲ್ಲಂತೂ ಇದು ತೀವ್ರವಾಗಿದೆ. ಆದ್ದರಿಂದ ನಾವು ಸದಾ ಖಚಿತತೆ, ಪರಿಣತಿ ಮತ್ತು ಉತ್ಕೃಷ್ಟತೆ ಸಾಧಿಸುವ ಗುರಿಗಳನ್ನು ಇಟ್ಟುಕೊಂಡಿರಬೇಕು ಎಂದು ಆಶಿಸಿದರು.

ರಾಜ್ಯ ರಾಜಕಾರಣದಲ್ಲಿ ರಾಜ್ಯ ಶಂಕರಮೂರ್ತಿಯವರು ಆರು ದಶಕಗಳ ಕಾಲ ನಿಷ್ಠೆಯಿಂದ ದುಡಿದಿದ್ದಾರೆ. ಅವರು ಈ ವಿಷಯದಲ್ಲಿ ನಮ್ಮೆಲ್ಲರಿಗೂ ಆದರ್ಶ ಮತ್ತು ಮೌಲ್ಯಗಳಿಂದ ಕೂಡಿರುವ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ಸಾಧನೆ ಶಾಶ್ವತ: ಮನುಕುಲದಲ್ಲಿ ಸಾಧನೆಯನ್ನು ಮಾಡಿದವರು ಶಾಶ್ವತವಾಗಿ ಉಳಿಯುತ್ತಾರೆ. ಸುದ್ದಿ ವಾಹಿನಿಗಳು ಮತ್ತು ಮಾಧ್ಯಮಗಳು ಇಂಥವರನ್ನು ಗುರುತಿಸುವುದು ಒಳ್ಳೆಯದು ಎಂದರು.

ಸಮಾಜಮುಖಿ ವ್ಯಕ್ತಿತ್ವ: ಸಮಾಜಸೇವೆ, ಉದ್ಯಮಶೀಲತೆ, ರಾಜಕಾರಣ ಮತ್ತು ಸಮುದಾಯದ ಹಿತ ಹೀಗೆ ಎಲ್ಲವನ್ನೂ ಬೆಳೆಸಿಕೊಂಡಿರುವ ಶಂಕರ ಮೂರ್ತಿಯವರು ತಮ್ಮ ಅನುಪಮ ಮತ್ತು ಸಮಾಜಮುಖಿ ವ್ಯಕ್ತಿತ್ವದಿಂದ ಚಿರಂತನವಾಗಿ ಉಳಿಯಲಿದ್ದಾರೆ. ಸಾರ್ವಜನಿಕ ಬದುಕಿಗೆ ಬರುವವರು ಇಂಥವರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂದು ನುಡಿದರು. ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಮಾಜದ ಶ್ರೀಗಳು, ಪತ್ರಕರ್ತ ಅಜಿತ್ ಹನಮಕ್ಕನವರ್ ಮುಂತಾದವರು ಇದ್ದರು.

ಓದಿ: ಗಡಿ ರಕ್ಷಣೆಗೆ ರಾಜ್ಯಸರ್ಕಾರ ಬದ್ಧ.. ಸಿಎಂ ಬೊಮ್ಮಾಯಿ

Last Updated : Sep 4, 2022, 9:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.