ETV Bharat / state

ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡ್ತಿದೆ : ಸಚಿವ ಅಶ್ವತ್ಥ್‌ ನಾರಾಯಣ - Minister Ashwath Narayan reaction on congress protest

ಪ್ರತಿಪಕ್ಷಗಳು ಅವರ ಅಧಿಕಾರಾವಧಿಯಲ್ಲಿ ಮೇಕೆದಾಟು ವಿಚಾರದಲ್ಲಿ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ರಾಜಕೀಯ ಲಾಭಕ್ಕಾಗಿ ಹಾಗೂ ಜನರ ದಿಕ್ಕನ್ನು ತಪ್ಪಿಸುವ ಸಲುವಾಗಿ ಕಾಂಗ್ರೆಸ್​ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಹಾಗಾಗಿ, ಪಾದಯಾತ್ರೆಯನ್ನು ಹಮ್ಮಿಕೊಂಡಿದೆ..

Minister Ashwath Narayan reaction on congress protest
ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ ಬಗ್ಗೆ ಅಶ್ವತ್ಥನಾರಾಯಣ ಪ್ರತಿಕ್ರಿಯೆ
author img

By

Published : Jan 1, 2022, 5:36 PM IST

ಬೆಂಗಳೂರು : ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್​ ಪಾದಯಾತ್ರೆ ಮಾಡುತ್ತಿದೆ ಎಂದು ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವತ್ಥ್‌ ನಾರಾಯಣ ಹೇಳಿದರು.

ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ ಬಗ್ಗೆ ಸಚಿವ ಅಶ್ವತ್ಥ್‌ ನಾರಾಯಣ ಪ್ರತಿಕ್ರಿಯೆ ನೀಡಿರುವುದು..

ಮಲ್ಲೇಶ್ವರಂ ಲಸಿಕಾ ಕೇಂದ್ರ ಉದ್ಘಾಟನೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸಿಎಂ ಬಸವರಾಜ ಬೊಮ್ಮಾಯಿಯವರು ನೀರಾವರಿ ಯೋಜನೆ, ಈ ವಿಚಾರದ ಬಗ್ಗೆ ಜ್ಞಾನ, ತಿಳುವಳಿಕೆ ಇರುವ ವ್ಯಕ್ತಿ. ಮೇಕೆದಾಟು ವಿಚಾರವಾಗಿ ಎರಡು ಉಭಯ ಸದನದಲ್ಲಿ ಸರ್ಕಾರದ ನಿಲುವು ಮತ್ತು ಯೋಚನೆ ಬಗ್ಗೆ ತಿಳಿಸಲಾಗಿದೆ. ಯಾವ ರೀತಿ ಕಾರ್ಯ ರೂಪಕ್ಕೆ ತರುತ್ತೇವೆ ಎಂಬುದು ಸ್ಪಷ್ಟವಾಗಿದೆ ಎಂದರು.

ಪ್ರತಿಪಕ್ಷಗಳು ಅವರ ಅಧಿಕಾರಾವಧಿಯಲ್ಲಿ ಮೇಕೆದಾಟು ವಿಚಾರದಲ್ಲಿ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ರಾಜಕೀಯ ಲಾಭಕ್ಕಾಗಿ ಹಾಗೂ ಜನರ ದಿಕ್ಕನ್ನು ತಪ್ಪಿಸುವ ಸಲುವಾಗಿ ಕಾಂಗ್ರೆಸ್​ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಹಾಗಾಗಿ, ಪಾದಯಾತ್ರೆಯನ್ನು ಹಮ್ಮಿಕೊಂಡಿದೆ ಎಂದು ವ್ಯಂಗ್ಯವಾಡಿದರು.

ಮೇಕೆದಾಟು ನಮ್ಮ ನಾಡಿಗೆ ಮುಖ್ಯವಾಗಿದೆ. ಅದರಲ್ಲೂ ಹೆಚ್ಚಾಗಿ ನಮ್ಮ ಬೆಂಗಳೂರಿಗೆ ಅಗತ್ಯವಾಗಿದೆ. ನಮ್ಮ ಸರ್ಕಾರ ಈ ಯೋಜನೆ ಅನುಷ್ಠಾನಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ. ಮಾಜಿ ಸಿಎಂ ಬಿಎಸ್​ವೈ ಹಾಗೂ ಬೊಮ್ಮಾಯಿಯವರು ಸೇರಿದಂತೆ ನಮ್ಮ ಸರ್ಕಾರ ಸ್ಪಷ್ಟವಾದ ನಿಲುವು ಹೊಂದಿದೆ ಎಂದರು.

ಮುಖ್ಯಮಂತ್ರಿಗಳು ಜನವರಿ 3ರಂದು ರಾಮನಗರ ಪ್ರವಾಸ ಕೈಗೊಂಡಿದೆ. ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಗದಗಿನ ನಂತರ ಎಲ್ಲಾ ಮನೆ ಮನೆಗೂ ಕುಡಿಯುವ ನೀರಿನ ಯೋಜನೆ ಮಾಡಿದೆ. ಬಯಲುಸೀಮೆಯ ಎಲ್ಲಾ ಪ್ರದೇಶದ ಎಲ್ಲಾ ಭಾಗಗಳಿಗೂ ಕೆರೆ ತುಂಬಿಸುವ ಯೋಜನೆಗಳಿಗೆ ನಮ್ಮ ಸರ್ಕಾರ ಬದ್ಧವಾಗಿದೆ‌ ಎಂದರು.

ಇದನ್ನೂ ಓದಿ: ಕಟ್ಟಡ ಕಾಮಗಾರಿ ವೇಳೆ ದುರಂತ.. ಹಿಟಾಚಿ ಹರಿದು 3 ವರ್ಷದ ಮಗು ದುರ್ಮರಣ..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.