ETV Bharat / state

ಕಾಂಗ್ರೆಸ್ ಪಕ್ಷದಿಂದ ಯಾವುದೇ ಸಲಹೆ ನಮಗೆ ಬೇಕಿಲ್ಲ: ಸಚಿವ ಅಶ್ವತ್ಥ ನಾರಾಯಣ

author img

By

Published : Dec 3, 2022, 10:42 AM IST

ರೌಡಿಶೀಟರ್​​ಗಳ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​​ ಹೇಳಿಕೆಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ರಿಯಾಕ್ಟ್ ಮಾಡಿದ್ದಾರೆ. ಆ ಪಕ್ಷದ ಯಾವುದೇ ಸಲಹೆ ನಮಗೆ ಬೇಕಿಲ್ಲ ಎಂದಿದ್ದಾರೆ.

Minister Ashwath Narayan
ಸಚಿವ ಡಾ. ಅಶ್ವತ್ಥ ನಾರಾಯಣ

ನೆಲಮಂಗಲ: ಆಪರೇಷನ್ ಕಮಲದಂತೆ ರೌಡಿಶೀಟರ್​​ಗಳ ಆಪರೇಷನ್ ನಡೆಯುತ್ತಿದ್ಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಡಾ. ಅಶ್ವತ್ಥ ನಾರಾಯಣ ಈಗಾಗಲೇ ನಮ್ಮ ಪಕ್ಷ ಹಾಗೂ ಸರ್ಕಾರ ಈ ವಿಚಾರದಲ್ಲಿ ನಿಲುವನ್ನು ತಿಳಿಸಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಯಾವುದೇ ಸಲಹೆ ನಮಗೆ ಬೇಕಿಲ್ಲ ಎಂದರು.

ನೆಲಮಂಗಲ ನಗರದ ಚಿಕ್ಕಲ್ಲೆಯ್ಯ ಸಮುದಾಯ ಭವನದಲ್ಲಿ ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ನಿರ್ಮಿಸಲು ಶ್ರಮಿಸಿದ ಗಣ್ಯರಿಗೆ ಜನಾಭಿನಂದನೆ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, 'ಕಾಂಗ್ರೆಸ್​ನವರ ಹಿನ್ನೆಲೆ, ಅವರ ಸಂಸ್ಕೃತಿ ಎಲ್ಲವೂ ತಿಳಿದಿದೆ. ನಮ್ಮ ಪಕ್ಷದ ಸ್ಪಷ್ಟ ಉದ್ದೇಶ ಜನಪರ ಕೆಲಸ ಮಾಡುವುದು' ಎಂದರು.

ಕಾಂಗ್ರೆಸ್ ವಿರುದ್ಧ ಸಚಿವ ಡಾ. ಅಶ್ವತ್ಥ ನಾರಾಯಣ ವಾಗ್ದಾಳಿ

ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತ, ಪ್ರಜಾಪ್ರಭುತ್ವದಲ್ಲಿ ಮತದಾರನ ಹಕ್ಕು ಬಹಳ ಮುಖ್ಯ. ಇದನ್ನು ನಮ್ಮ ಸರ್ಕಾರ ಗೌರವಿಸುತ್ತದೆ. ಮತದಾನದ ಹಕ್ಕಿನಲ್ಲಿ ಸಣ್ಣದೊಂದು ಲೋಪವಾಗದಂತೆ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಮೊದಲು ಆಪರೇಷನ್ ಕಮಲ ಮಾಡಿದ್ರು, ಈಗ ರೌಡಿಗಳ ಆಪರೇಷನ್ ಮಾಡುತ್ತಿದ್ದಾರೆ: ಡಿ ಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.