ಬೆಂಗಳೂರು: ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಹುಳಿಮಾವು ಕೆರೆ ಕಟ್ಟೆ ಒಡೆದು ಅವಾಂತರ ಸಂಭವಿಸಿದ ಸ್ಥಳಕ್ಕೆ ಸಚಿವ ಆರ್.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿರುವ ಸಚಿವರು, ಯಾರೇ ಇದ್ರು ಅವರನ್ನು ಸಂತ್ರಸ್ತರ ಕೇಂದ್ರದ ಬಳಿ ಬರಲಿಕ್ಕೆ ಹೇಳಿ. ಇಲ್ಲ ಅಂದ್ರೆ ಸರಿ ಹೋಗಲ್ಲ. ಎಲ್ಲದಕ್ಕೂ ನೀವೇ ಹೊಣೆ ಆಗ್ತೀರಾ ಎಂದು BBMP ವಿಶೇಷ ಆಯುಕ್ತರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಐದು ನಿಮಿಷದ ಕೆಲಸ ಇದು. BWSSB ಚೀಫ್ ಎಂಜಿನಿಯರ್ ಎಲ್ಲೇ ಇದ್ರು ಬೇಗ ಕರೆಸಿ. ಇಲ್ಲಿಗೆ ಬಂದ ಕೊಡಲೇ ಸ್ಟೇಷನ್ನಲ್ಲಿ ಕೂರಿಸಿ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ಗೆ ಅಶೋಕ್ ವಾರ್ನಿಂಗ್ ಕೊಟ್ಟರು. ಇನ್ನು ಈ ಅವಾಂತರಕ್ಕೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ ಎಂದುಹೇಳಿದ್ರು.