ETV Bharat / state

ನಂದಿನಿ ಹಾಲು ಮೊಸರು ದರ ಏರಿಕೆಗೆ ಏಕಪಕ್ಷೀಯ ನಿರ್ಧಾರ: ಮುಖ್ಯಮಂತ್ರಿ - ಕೆಎಂಎಫ್ ಅಧ್ಯಕ್ಷರ ನಡುವೆ ಕ್ಷೀರ ಸಮರ..? - kmf

ಸಾಮಾನ್ಯವಾಗಿ ಬೆಲೆ ಏರಿಕೆ ಮಾಡುವ ಮುನ್ನ ಕೆಎಂಎಫ್ ಆಡಳಿತ ಮಂಡಳಿ ರಾಜ್ಯ ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟು ಒಪ್ಪಿಗೆ ಪಡೆದು ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಹೆಚ್ಚಳ ಮಾಡುವುದು ರೂಢಿಯಲ್ಲಿದೆ. ಇತ್ತೀಚಿನ ಬೆಳವಣಿಗೆಯಿಂದ ಕೆಎಂಎಫ್ ಮತ್ತು ರಾಜ್ಯ ಸರ್ಕಾರದ ನಡುವೆ ಸಮನ್ವಯತೆ ಕೊರತೆ ಇರುವುದನ್ನು ತೋರಿಸುತ್ತದೆ.

ಮುಖ್ಯಮಂತ್ರಿ ಕೆಎಂಎಫ್ ಅಧ್ಯಕ್ಷರ ನಡುವೆ ಕ್ಷೀರ ಸಮರ

author img

By

Published : Nov 19, 2022, 10:16 PM IST

ಬೆಂಗಳೂರು: ರಾಜ್ಯದಲ್ಲಿ ಕೋಟ್ಯಂತರ ಗ್ರಾಹಕರನ್ನು ಹೊಂದಿರುವ ನಂದಿನಿ ಹಾಲಿನ ಉತ್ಪನ್ನಗಳ ಬೆಲೆಯನ್ನು ಕೆಎಂಎಫ್ ಆಡಳಿತ ಮಂಡಳಿಯು ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯದೇ ಏಕಪಕ್ಷೀಯವಾಗಿ ಹೆಚ್ಚಳ ಮಾಡುತ್ತಿರುವುದು ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತು ಕೆಎಂಎಫ್ ನಡುವೆ ಬೆಲೆ ಎರಿಕೆ ಬಗ್ಗೆ ಕ್ಷೀರ ಸಮರ ನಡೆಯುತ್ತಿರುವುದನ್ನು ಖಚಿತಪಡಿಸಿದೆ.

ಸಾಮಾನ್ಯವಾಗಿ ಬೆಲೆ ಏರಿಕೆ ಮಾಡುವ ಮುನ್ನ ಕೆಎಂಎಫ್ ಆಡಳಿತ ಮಂಡಳಿ ರಾಜ್ಯ ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟು ಒಪ್ಪಿಗೆ ಪಡೆದು ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಹೆಚ್ಚಳ ಮಾಡುವುದು ರೂಢಿಯಲ್ಲಿದೆ. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರದ ಅನುಮತಿ ಪಡೆಯದೇ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳವು ಬೆಲೆ ಏರಿಕೆ ಕುರಿತು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಿರುವುದು ಕೆಎಂಎಫ್ ಮತ್ತು ರಾಜ್ಯ ಸರ್ಕಾರದ ನಡುವೆ ಸಮನ್ವಯತೆ ಕೊರತೆ ಇರುವುದನ್ನು ತೋರಿಸುತ್ತದೆ.

ನಂದಿನಿ ಹಾಲು ಮತ್ತು ಮೊಸರಿನ ಬೆಲೆಯನ್ನು ಪ್ರತಿ ಲೀಟರ್​​ಗೆ 3 ರೂಪಾಯಿ ಹೆಚ್ಚಳ ಮಾಡಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಆದೇಶಿಸಿರುವುದು ಮತ್ತು ಈ ಆದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣವೇ ದರ ಏರಿಕೆ ಜಾರಿಗೆ ಬರದಂತೆ ಅದಕ್ಕ ತಡೆ ನೀಡಿರುವುದು ಒಂದೇ ಪಕ್ಷದ ಆಡಳಿತ ವೇದಿಕೆಗಳಲ್ಲಿ ಸಮನ್ವಯದ ಕೊರತೆ ಇರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಲಾಗುತ್ತಿದೆ.

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಹಾಗೂ ಅಗತ್ಯ ಬೆಲೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬೇಸತ್ತಿರುವಾಗ ಹಾಲಿನಂತಹ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿದರೆ ಬಿಜೆಪಿ ಪಕ್ಷ ಮತ್ತು ಬಿಜೆಪಿ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವ ಆತಂಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದ್ದಾಗಿದೆ.

ಈ ಕಾರಣದಿಂದಲೇ ಮುಖ್ಯಮಂತ್ರಿ ಬೊಮ್ಮಾಯಿಯವರು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಲೆ ಏರಿಕೆ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ಮಧ್ಯಪ್ರವೇಶಿಸಿ ನಂದಿನಿ ಹಾಲು - ಮೊಸರು ಬೆಲೆ ಹೆಚ್ಚಳಕ್ಕೆ ಬ್ರೇಕ್ ಹಾಕಿದ್ದಾರೆ. ಕೆಎಂಎಫ್ ಆಡಳಿತ ಮಂಡಳಿ ಜತೆ ಸಮಾಲೋಚಿಸಿ ಈ ತಿಂಗಳ 20 ರ ನಂತರ ಬೆಲೆ ಏರಿಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲದೆ ನಂದಿನಿ ಉತ್ಪನ್ನಗಳ ಬೆಲೆ ಹೆಚ್ಚಳ ಮಾಡುತ್ತಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಸರಗೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇದೇ ಮೊದಲಲ್ಲ... ಕೆಎಂಎಫ್ ಹಾಲು - ಮೊಸರು ದರವನ್ನು ಏಕಪಕ್ಷೀಯವಾಗಿ ಹೆಚ್ಚಳ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವಾರು ಬಾರಿ ಹೆಚ್ಚಳ ಮಾಡಿದೆ. ದರ ಏರಿಕೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ಮತ್ತು ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಬೆಲೆ ಏರಿಕೆ ಪ್ರಮಾಣ ಕಡಿಮೆ ಮಾಡಿದ ನಿದರ್ಶನಗಳು ಸಾಕಷ್ಟಿವೆ.

ಕಳೆದ ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರ ಪ್ಯಾಕ್ಡ್ ಮೊಸರು ಮತ್ತು ಮಜ್ಜಿಗೆ, ಲಸ್ಸಿ ಸೇರಿದಂತೆ ನಂದಿನಿ ಡೈರಿ ಉತ್ಪನ್ನಗಳಿಗೆ ಜಿಎಸ್​​ಟಿ ದರ ಹೆಚ್ಚಳ ಮಾಡಿರುವುದನ್ನು ಸರಿದೂಗಿಸಲು ಕರ್ನಾಟಕ ಹಾಲು ಉತ್ಪಾದಕರ ಮಂಡಳಿಯು ಮೊಸರು, ಮಜ್ಜಿಗೆ, ಲಸ್ಸಿ ಮತ್ತು ನಂದಿನಿ ಡೈರಿ ಉತ್ಪನ್ನಗಳ ಬೆಲೆಯನ್ನು 2 ರಿಂದ 3 ರೂಪಾಯಿ ಹೆಚ್ಚಳ ಮಾಡಿತ್ತು.

(ಓದಿ: ಹಾಲಿನ ದರ ಹೆಚ್ಚಳದ ಬೆನ್ನಲೇ ಮತ್ತೊಂದು ಶಾಕ್: ಹೋಟೆಲ್​ನಲ್ಲಿ ಟೀ, ಕಾಫಿ, ತಿಂಡಿ ಮತ್ತಷ್ಟು ದುಬಾರಿ ಸಾಧ್ಯತೆ)

ಜಿಎಸ್​ಟಿ ತೆರಿಗೆ ಸರಿದೂಗಿಸಲು ಇಷ್ಟೊಂದು ಪ್ರಮಾಣದ ಬೆಲೆ ಏರಿಕೆಗೆ ಸಾರ್ವಜನಿಕರಿಂದ ತೀರ್ವ ಪ್ರತಿರೋಧ ವ್ಯಕ್ತವಾದಾಗ ಮತ್ತು ಸರ್ಕಾರದ ಸೂಚನೆ ಮೇರೆಗೆ ಕೆಎಂಎಫ್ ಮರುದಿನವೇ ದರ ಹೆಚ್ಚಳವನ್ನು ಹಿಂದಕ್ಕೆ ಪಡೆದು 2 ರಿಂದ 3 ರೂಪಾಯಿ ಹೆಚ್ಚಳದ ಬದಲಿಗೆ 50 ಪೈಸೆಯಿಂದ 1.50 ರೂ ವರೆಗೆ ದರ ಪರಿಷ್ಕರಣೆ ಮಾಡಿ ಟೀಕೆಗಳಿಂದ ಪಾರಾಯಿತು.

ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ದರವನ್ನು ಹೆಚ್ಚಳ ಮಾಡಿದ ಕೇವಲ ನಾಲ್ಕು ತಿಂಗಳಲ್ಲಿ ಮತ್ತೆ ನಂದಿನಿ ಹಾಲು, ಮೊಸರು ದರವನ್ನು 3 ರೂಪಾಯಿ ಹೆಚ್ಚಳ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಹೆಚ್ಚಳದ 3 ರೂಪಾಯಿ ದರವನ್ನು ಹಾಲು ಉತ್ಪಾದಕರಿಗೆ ನೀಡಲಾಗುತ್ತದೆ. ಆ ಕಾರಣಕ್ಕೆ ಹಾಲು - ಮೊಸರು ಬೆಲೆ ಹೆಚ್ಚಳ ಮಾಡಲಾಗುತ್ತದೆ ಎಂದು ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಳ ತಿಳಿಸಿದೆ.

ರೈತರಿಗೆ ಹೆಚ್ಚಿನ ದರ ನೀಡುವ ಉದ್ದೇಶಕ್ಕಾಗಿ ಹಾಲು - ಮೊಸರು ಬೆಲೆ ಏರಿಕೆಗೆ ಸರ್ಕಾರ ಅನುಮತಿ ನೀಡದಿದ್ದರೆ ಕೆಎಂಎಫ್ ಹಾಲು ಉತ್ಪಾದಕರ ಪರವಾಗಿ ಸರ್ಕಾರದ ಮಟ್ಟದಲ್ಲಿ ದೊಡ್ಡ ಧ್ವನಿ ಎತ್ತುವ ಸಾಧ್ಯತೆಗಳಿವೆ.

ಶೀತಲ ಸಮರಕ್ಕೆ ಕಾರಣವೇನು..? ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಹೋದರರಾದ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡದಿರುವುದರಿಂದ ಬಿಜೆಪಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದ ಬಗ್ಗೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ನಂದಿನಿ ಹಾಲು, ಮೊಸರಿನ ಬೆಲೆ ಹೆಚ್ಚಳ ಮಾಡುವ ಬಗ್ಗೆ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಮುಖ್ಯಮಂತ್ರಿಗಳ ಒಪ್ಪಿಗೆ ಪಡೆಯದೇ ಏಕಪಕ್ಷೀಯವಾಗಿ ದರ ಏರಿಕೆ ಬಗ್ಗೆ ಕೆಎಂಎಫ್​​ನಲ್ಲಿ ತೀರ್ಮಾನಗಳಾಗುತ್ತವೆ ಎಂದು ತಿಳಿದುಬಂದಿದೆ.

ಲೈಂಗಿಕ ಸಿಡಿ ಪ್ರಕರಣದಲ್ಲಿ ಸಹೋದರ ರಮೇಶ ಜಾರಕಿಹೊಳಿ ಸಚಿವ ಪದವಿಗೆ ರಾಜೀನಾಮೆ ನೀಡಿದ ನಂತರ ರಮೇಶ ಜಾರಕಿಹೊಳಿ ಬದಲಿಗೆ ತಮ್ಮನ್ನು ಸಚಿವರನ್ನಾಗಿ ನೇಮಕ ಮಾಡಬೇಕು ಮತ್ತು ರಮೇಶ ನಿಭಾಯಿಸುತ್ತಿದ್ದ ಜಲಸಂಪನ್ಮೂಲ ಖಾತೆ ನೀಡಬೇಕೆನ್ನುವ ಬೇಡಿಕೆಯನ್ನೂ ಕೆಎಂಎಫ್ ಅಧ್ಯಕ್ಷರಾಗಿರುವ ಬಾಲಚಂದ್ರ ಜಾರಕಿಹೊಳಿ ಪಕ್ಷದ ವರಿಷ್ಠರಲ್ಲಿ ಇಟ್ಟಿದ್ದರೆನ್ನಲಾಗಿದೆ.

ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸದಿರುವುದು ಸಹ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೇಸರ ತರಿಸಿದೆ ಎಂದು ಹೇಳಲಾಗುತ್ತಿದೆ. ಲೈಂಗಿಕ ಸಿಡಿ ಪ್ರಕರಣದಲ್ಲಿ ರಮೇಶ ಜಾರಕಿಹೊಳಿ ಅವರ ಪಾತ್ರವಿಲ್ಲವೆಂದು ಸಿಸಿಬಿ ಬಿ ರಿಪೋರ್ಟ್ ನೀಡಿದ ನಂತರವೂ ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೊಡದಿರುವುದು ಜಾರಕಿಹೊಳಿ ಸಹೋದರರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.

ಈ ಬೇಸರದಿಂದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಲೆ ಏರಿಕೆಯಂಥ ಪ್ರಮುಖ ನಿರ್ಧಾರಗಳನ್ನು ಸರ್ಕಾರದ ಒಪ್ಪಿಗೆ ಪಡೆಯದೇ ತೆಗೆದುಕೊಳ್ಳಲಾಗುತ್ತಿದೆ.

(ಓದಿ: ನಂದಿನಿ ಹಾಲು, ಮೊಸರಿನ ದರ ಏರಿಕೆ ವಿಚಾರ: ನ. 20ರ ನಂತರ ತೀರ್ಮಾನ ಎಂದ ಸಿಎಂ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.