ETV Bharat / state

ಹಾಲಿನ ಬೆಲೆ 3 ರೂ ಹೆಚ್ಚಳ ಬಗ್ಗೆ ಪರಿಷತ್​​ನಲ್ಲಿ ಚರ್ಚೆ.. ಸಿಎಂ ಜೊತೆ ಸಮಾಲೋಚಿಸಿ ನಿರ್ಧಾರ ಎಂದ ಸಚಿವರು - milk rate in Karnataka

ವಿಧಾನ ಪರಿಷತ್​ನಲ್ಲಿ ಹಾಲಿನ ದರ ಹೆಚ್ಚಳ ಚರ್ಚೆ. ಹಾಲಿನ ದರ 3 ರೂ ಹೆಚ್ಚಿಸುವ ಬಗ್ಗೆ ಚರ್ಚೆ.

ಹಾಲಿನ ಬೆಲೆ 3 ರೂ ಹೆಚ್ಚಳ
ಹಾಲಿನ ಬೆಲೆ 3 ರೂ ಹೆಚ್ಚಳ
author img

By

Published : Sep 13, 2022, 8:49 PM IST

ಬೆಂಗಳೂರು: ರಾಜ್ಯದ ಹಾಲು ಒಕ್ಕೂಟಗಳು ಎಲ್ಲ ಕಡೆಗಳಲ್ಲಿ ಹಾಲಿನ ದರ 3 ರೂ ಹೆಚ್ಚಿಸುವ ತೀರ್ಮಾನ ಆಗಿದೆ. ಈ ಬಗ್ಗೆ ಸಿಎಂ ಜೊತೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಹಾಲಿನ ದರ ಹೆಚ್ಚಳ ಚರ್ಚೆ: ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಎಸ್. ರವಿ ಗಮನ ಸೆಳೆದ ಹಿನ್ನೆಲೆ ಉತ್ತರ ನೀಡಿದ ಸೋಮಶೇಖರ್, ಈಗಾಗಲೇ ಹಾಲು ಒಕ್ಕೂಟದ ಮನವಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಗಮನಕ್ಕೆ ತರಲಾಗಿದೆ. ನಾನು ಸಮಾಲೋಚಿಸುತ್ತೇನೆ. ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇನೆ. ಹೆಚ್ಚಿಸಿದ ಬೆಲೆ ರೈತರಿಗೆ ನೀಡುವ ಭರವಸೆ ಸಹ ಒಕ್ಕೂಟ ನೀಡಿದೆ. ಇದರಿಂದ ಬೇಗ ಕ್ರಮ ಆಗಲಿದೆ ಎಂದು ಭರವಸೆ ನೀಡಿದರು.

ರವಿ ಮಾತನಾಡಿ, ಕೋವಿಡ್ ಮುನ್ನ 20 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡುತ್ತಿದ್ದೆವು. 12 ಲಕ್ಷ ಲೀಟರ್ ಮಾರಾಟ ಆಗುತ್ತಿತ್ತು. ಉಳಿದದ್ದು ಹಾಲಿನ ಪುಡಿ ಹಾಗೂ ಉಪ ಉತ್ಪನ್ನ ಮಾಡಿದೆವು. ಕೋವಿಡ್ ಸಂದರ್ಭ ಕೇವಲ ಐದು ಲಕ್ಷ ಲೀಟರ್ ಹಾಲು ಮಾತ್ರ ಮಾರಾಟವಾಯಿತು. ಆಗ ಉಳಿದ ಹಾಲನ್ನು ಉಪ ಉತ್ಪನ್ನವಾಗಿ ಪರಿವರ್ತಿಸಿ ಒಕ್ಕೂಟವನ್ನು ಜೀವಂತವಾಗಿರಿಸಿದೆ.

ನಮ್ಮ ಶ್ರಮ ಅಪಾರ. ಮಲೆನಾಡು ಮಾದರಿಯಲ್ಲಿ ಈ ಸಾರಿ ಭಾರಿ ಮಳೆ ಆಗಿದೆ. ಇದರ ಪರಿಣಾಮ ಹಸುವನ್ನು ಆಚೆ ಬಿಡಲು ಆಗುತ್ತಿಲ್ಲ. ಮೇವಿನಲ್ಲಿ ನೀರಿನಂಶ ಹೆಚ್ಚಾಗಿದೆ. ಇದರಿಂದ ಹಾಲಲ್ಲಿ ಜಿಡ್ಡು, ಕೊಬ್ಬಿನ ಪ್ರಮಾಣ ಕಡಿಮೆಯಾಗಿದೆ. ಈಗ ಹಾಲು ಉತ್ಪಾದನೆ 20 ರಿಂದ 16 ಲಕ್ಷ ಲೀಟರ್​​ಗೆ ಕುಸಿದಿದೆ. ರೈತರು ಜಾನುವಾರುಗಳನ್ನು ಮಾರುತ್ತಿದ್ದಾರೆ. ಬೆಲೆ ಹೆಚ್ಚಾಗಿದೆ. ಇದರಿಂದ ಹಾಲಿನ ಬೆಲೆ ಹೆಚ್ಚಳ ಅನಿವಾರ್ಯ ಎಂದರು.

ಸಚಿವ ಸೋಮಶೇಖರ್ ಉತ್ತರಿಸಿ, ಹಾಲು ಒಕ್ಕೂಟಕ್ಕೆ ಅನ್ಯಾಯ ಆಗಬಾರದು, ರೈತರಿಗೆ ಅನುಕೂಲ ಆಗಬೇಕು. ಗ್ರಾಹಕರ ಜೇಬಿಗೆ ಹೊರೆ ಆಗಬಾರದು. ಇದರಿಂದ ಸಿಎಂ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದರು.

(ಇದನ್ನೂ ಓದಿ: ಕತ್ತೆಗಳ ಸಾಕಾಣಿಕೆಯಲ್ಲಿ ಸೈ ಎನಿಸಿಕೊಂಡ ಟೆಕ್ಕಿ​​: ಲಕ್ಷಗಟ್ಟಲೆ ಆದಾಯ!)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.