ಬೆಂಗಳೂರು: ಮೂರು ಹಾಲು ಒಕ್ಕೂಟಗಳು ಒಂದು ದಿನದ ಮಟ್ಟಿಗೆ ತಾತ್ಕಾಲಿಕವಾಗಿ ಹಾಲು ಖರೀದಿ ಸ್ಥಗಿತಗೊಳಿಸಿದ್ದರಿಂದ ರಾಜ್ಯದಲ್ಲಿ ಹಾಲು ಖರೀದಿಗೆ ಬ್ರೇಕ್ ಬೀಳುವ ಆತಂಕ ಉಂಟಾಗಿತ್ತು. ಆದ್ರೀಗ ಹಾಲು ಉತ್ಪಾದಕರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಲು ಖರೀದಿ ಸ್ಥಗಿತವಾಗಲ್ಲ ಎಂದು ಅಭಯ ನೀಡಿದ್ದಾರೆ. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಸಿಎಂ.
![ಕೆಎಂಎಫ್‌ಗೆ ಸಿಎಂ ಸೂಚನೆ](https://etvbharatimages.akamaized.net/etvbharat/prod-images/kn-bng-09-cm-tweet-about-kmf-script-9021933_31032020225532_3103f_1585675532_527.jpg)
ಹಾಲು ಖರೀದಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರಿಂದ, ರೈತ ಸಮೂಹ ಆತಂಕಕ್ಕೆ ಸಿಲುಕಿದೆ. ಹಾಗಾಗಿ ಹಾಲಿನ ಖರೀದಿ ಪ್ರಕ್ರಿಯೆಯನ್ನು ಅಬಾಧಿತವಾಗಿ ಮುಂದುವರಿಸಲು ಯಡಿಯೂರಪ್ಪ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಸೂಚನೆಯಂತೆ ಹಾಲು ಖರೀದಿಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.