ETV Bharat / state

ಶ್ರಮಿಕ್​ ರೈಲಿನಿಂದ  ತವರಿಗೆ ಮರಳಿದ 21 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು - Bangalore latest news

ವಲಸೆ ಕಾರ್ಮಿಕರಿಗಾಗಿಯೇ ರಾಜ್ಯದಿಂದ ವಿಶೇಷ ರೈಲು ಸೇವೆ ಕಲ್ಪಿಸಲಾಗಿತ್ತು. ಮೇ 3 ರಿಂದ ಈ ವರೆಗೆ ನೈರುತ್ಯ ರೈಲ್ವೆ ಇಲಾಖೆಯಿಂದ ಬರೋಬ್ಬರಿ 102 ವಿಶೇಷ ಶ್ರಮಿಕ್ ರೈಲುಗಳು ಹೊರ ರಾಜ್ಯಕ್ಕೆ ಹೋಗಿವೆ.

Migrant Workers Returned to their native place From Shramik Train
ವಲಸೆ ಕಾರ್ಮಿಕರು
author img

By

Published : May 20, 2020, 11:26 PM IST

ಬೆಂಗಳೂರು: ಲಾಕ್​ಡೌನ್​ ಹಿನ್ನೆಲೆ ಸಂಕಷ್ಟದಲ್ಲಿ ಸಿಲುಕಿದ್ದ ಸುಮಾರು 21 ಲಕ್ಷ ಶ್ರಮಿಕರನ್ನ ಈ ವರೆಗೆ ಅವರ ತವರೂರಿಗೆ ಕಳುಹಿಸುವ ಕೆಲಸವನ್ನು ಭಾರತದಾದ್ಯಂತ ಶ್ರಮಿಕ್ ರೈಲು ಮಾಡಿವೆ.

ಇತ್ತ ವಲಸೆ ಕಾರ್ಮಿಕರಿಗಾಗಿಯೇ ರಾಜ್ಯದಿಂದ ವಿಶೇಷ ರೈಲು ಸೇವೆ ಕಲ್ಪಿಸಲಾಗಿತ್ತು. ಮೇ 3 ರಿಂದ ಈ ವರೆಗೆ ನೈರುತ್ಯ ರೈಲ್ವೆ ಇಲಾಖೆಯಿಂದ ಬರೋಬ್ಬರಿ 102 ವಿಶೇಷ ಶ್ರಮಿಕ್ ರೈಲುಗಳು ಹೊರ ರಾಜ್ಯಕ್ಕೆ ಹೋಗಿವೆ. ರಾಜ್ಯದಿಂದ ಈ ವರೆಗೆ 1,40,473 ಮಂದಿ ತಮ್ಮ ತವರೂರಿಗೆ ತೆರಳಿದ್ದಾರೆ.

ಮೊದ ಮೊದಲು ದಿನಕ್ಕೆ ನಾಲ್ಕು ರೈಲು ಸಂಚರಿಸುತ್ತಿದ್ದವು. ಬೇಡಿಕೆ ಹೆಚ್ಚಾದ ಕಾರಣ ನಿತ್ಯ ಹತ್ತಾರು ವಿಶೇಷ ರೈಲು ಸಂಚಾರದ ವ್ಯವಸ್ಥೆ ಮಾಡಲಾಗಿತ್ತು. ಇಂದು ಕೂಡ ಪಶ್ಚಿಮ ಬಂಗಾಳ, ಬಿಹಾರದ ಸಾವಿರಾರು‌ ವಲಸಿಗರು ಪ್ರಯಾಣ ಬೆಳೆಸಿದ್ದಾರೆ. ಇಂದಿನಿಂದ ಸುಮಾರು 200 ವಿಶೇಷ ಶ್ರಮಿಕ್​ ರೈಲುಗಳ ಸಂಚಾರವೂ ಆರಂಭವಾಗಿದ್ದು, ಮತ್ತಷ್ಟು ವಲಸಿಗರಿಗೆ ಇದು ಸಹಾಯಕವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.