ETV Bharat / state

ಬಿಸಿಯೂಟ ಸ್ಥಗಿತ ವಿಚಾರ: ಖುದ್ದು ಹಾಜರಾಗಲು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ಸೂಚನೆ - Education Department News

ಲಾಕ್​​ಡೌನ್ ಬಳಿಕ ಸಾರ್ವಜನಿಕರಿಗೆ ಉಂಟಾಗಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ಮಾರ್ಚ್ 24ರಿಂದ ನವೆಂಬರ್ 30ರವರೆಗೆ ಅಂಗನಾಡಿ ಮಕ್ಕಳಿಗೆ ಪೂರೈಸಿರುವ ಆಹಾರ ಧಾನ್ಯಗಳ ವಿವರಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದೆ.

Bisi Oota breakdown; HC notice to Secretary General of the Department of Education
ಹೈಕೋರ್ಟ್
author img

By

Published : Nov 30, 2020, 10:05 PM IST

ಬೆಂಗಳೂರು: ಲಾಕ್​​ಡೌನ್ ಬಳಿಕ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಳಿಸಿರುವುದಕ್ಕೆ ಹೆಚ್ಚುವರಿ ಪಡಿತರದ ಜೊತೆಗೆ ಪರಿಹಾರ ಭತ್ಯೆಯನ್ನು ನೀಡಬೇಕೆಂದು ತಾಕೀತು ಮಾಡಿರುವ ಹೈಕೋರ್ಟ್, ಈ ಸಂಬಂಧ ವಿವರಣೆ ನೀಡಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಿಸೆಂಬರ್ 8ರಂದು ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿದೆ.

ಲಾಕ್​​ಡೌನ್ ಬಳಿಕ ಸಾರ್ವಜನಿಕರಿಗೆ ಉಂಟಾಗಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಜೊತೆಗೆ ಮಾರ್ಚ್ 24ರಿಂದ ನವೆಂಬರ್ 30ರವರೆಗೆ ಅಂಗನಾಡಿ ಮಕ್ಕಳಿಗೆ ಪೂರೈಸಿರುವ ಆಹಾರ ಧಾನ್ಯಗಳ ವಿವರಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದೆ.

ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರ ವಾದಿಸಿದ ವಕೀಲ ವಿಕ್ರಂ ಹುಯಿಲ್ಗೋಳ, ಕೇಂದ್ರ ಸರ್ಕಾರದ ಆದೇಶದಂತೆ ಬಿಸಿಯೂಟಕ್ಕೆ ಪರ್ಯಾಯವಾಗಿ ಪಡಿತರ ಕೊಡಲಾಗುತ್ತಿದೆ. ಇದರಲ್ಲಿ ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೇಂದ್ರ ಸರ್ಕಾರ ಜುಲೈ 31ರಂದು ರಾಜ್ಯಗಳಿಗೆ ನೀಡಿರುವ ನಿರ್ದೇಶನವನ್ನು ರಾಜ್ಯ ಸರ್ಕಾರ ತಪ್ಪಾಗಿ ಅರ್ಥೈಸಿಕೊಂಡಿದೆ. ಅದರಂತೆ ಪಡಿತರದ ಜೊತೆಗೆ ಅದನ್ನು ಬೇಯಿಸಲು ಆಗುವ ಹಣವನ್ನೂ ಸಹ ಪರಿಹಾರದ ರೂಪದಲ್ಲಿ ನೀಡಬೇಕಾಗುತ್ತದೆ ಎಂದಿತ್ತು. ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲರು, ಅಡುಗೆ ಬೇಯಿಸುವ ವೆಚ್ಚಕ್ಕೆ ಬದಲಾಗಿ ತೊಗರಿ ಬೇಳೆ ನೀಡಲಾಗುತ್ತಿದೆ ಎಂದರು.

ಇದನ್ನೂ ಓದಿ: ಎಸ್ಸಿ-ಎಸ್ಟಿ ಆಯೋಗಕ್ಕೆ ಅಧ್ಯಕ್ಷ-ಸದಸ್ಯರ ನೇಮಕ ವಿಳಂಬ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಹೇಳಿಕೆ ಒಪ್ಪದ ಪೀಠ, ನೀವು ಕೇಂದ್ರದ ನಿರ್ದೇಶನವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಹೀಗಾಗಿ ವಿವರಣೆ ನೀಡಲು ಅಧಿಕಾರಿಯನ್ನು ಕರೆಸುತ್ತೇವೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ಮಾತೃ ವಂದನೆ ಹಣ ನೀಡಿಲ್ಲ:

ವಿಚಾರಣೆ ಸಂದರ್ಭದಲ್ಲಿ ಹಿರಿಯ ವಕೀಲೆ ಜಯ್ನಾ ಕೊಠಾರಿ ವಿವರಿಸಿ, ಮಕ್ಕಳಿಗೆ ಹಿಂದೆ ನೀಡುತ್ತಿದ್ದ ಹಾಲು ಹಾಗೂ ಮೊಟ್ಟೆಗಳನ್ನೂ ಸ್ಥಗಿತಗೊಳಿಸಲಾಗಿದೆ. ಅಂಗನವಾಡಿ ಮಕ್ಕಳಿಗೆ ನೀಡಿರುವ ಪಡಿತರದ ಬಗ್ಗೆ ವಿವರ ನೀಡಿಲ್ಲ. ಜೊತೆಗೆ ಮಾತೃ ವಂದನಾ ಯೋಜನೆಯಲ್ಲಿ ಎಷ್ಟು ಗರ್ಭಿಣಿಯರಿಗೆ ಪ್ರೋತ್ಸಾಹಧನ ವಿತರಣೆ ಮಾಡಲಾಗಿದೆ ಎಂಬ ಮಾಹಿತಿಯನ್ನೂ ಸಹ ನೀಡಿಲ್ಲ. ಲಾಕ್​​ಡೌನ್ ಬಳಿಕ ಮಾತೃ ವಂದನೆ ಯೋಜನೆ ಅಡಿ ನೀಡುವ ಹಣ ಸರಿಯಾಗಿ ತಲುಪುತ್ತಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.