ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ತೀವ್ರತೆ ನೋಡಿ ಸರ್ಕಾರ ಮೂರನೇ ಅಲೆಗೆ ಮುಂಜಾಗೃತಾ ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಮೂರನೇ ಅಲೆಯ ತೀವ್ರತೆಯನ್ನು ತಡೆಯಲು ಸರ್ಕಾರ ಎಲ್ಲಾ ರೀತಿಯಿಂದಲೂ ಸಿದ್ಧವಾಗಿದೆ. ಮೂರನೇ ಅಲೆಯ ತೀವ್ರತೆ ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಊಹಿಸಲಾಗಿದ್ದು, ಮಕ್ಕಳಿಗಾಗಿಯೇ ಪ್ರತ್ಯೇಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.

ಆದರೆ ಮೂರನೇ ಅಲೆಯ ಎಂಟ್ರಿಗೂ ಮುನ್ನವೇ ರಾಜಧಾನಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ದಿನದಿಂದ ದಿನಕ್ಕೆ ನಿಧಾನವಾಗಿ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಮೊದಲ ಅಲೆಯಿಂದಲೂ ಈ ಹತ್ತು ವಾರ್ಡ್‌ಗಳೇ ಬೆಂಗಳೂರಿಗೆ ಕಂಟಕವಾಗುತ್ತಿದೆ. ಹತ್ತು ದಿನದಿಂದ ಹತ್ತು ವಾರ್ಡ್‌ಗಳಲ್ಲಿ ಸೋಂಕು ಏರಿಕೆಯಾಗುತ್ತಿದೆ. ಇದರ ಜೊತೆಗೆ ಅಪಾರ್ಟ್‌ಮೆಂಟ್‌ಗಳಲ್ಲಿ ಮತ್ತೊಮ್ಮೆ ಕೊರೊನಾ ಭೀಕರವಾಗಿ ಸ್ಫೋಟಗೊಳ್ಳುತ್ತಿದೆ.
ಎಲ್ಲದಕ್ಕಿಂತ ಹೆಚ್ಚಾಗಿ ನಗರದಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್‌ಗಳು ಶತಕ ದಾಟುತ್ತಿವೆ. ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚು ಕಂಟೈನ್ಮೆಂಟ್ ಪ್ರದೇಶಗಳನ್ನು ಗುರುತಿಸಲಾಗಿದೆ. ಬಿಬಿಎಂಪಿಯ ಎಂಟು ವಲಯಗಳಲ್ಲಿ ಬರೋಬ್ಬರಿ 101 ಕಂಟೈನ್ಮೆಂಟ್ ಪ್ರದೇಶಗಳು ಎಂದು ಗುರುತಿಸಲಾಗಿದೆ.
ವಲಯದಲ್ಲಿ ಕಂಟೈನ್ಮೆಂಟ್ ಪ್ರದೇಶಗಳ ಪಟ್ಟಿ:
ಮಹಾದೇವಪುರ : 29
ಬೊಮ್ಮನಹಳ್ಳಿ : 27
ಬೆಂಗಳೂರು ಪೂರ್ವ : 19
ರಾಜರಾಜೇಶ್ವರಿ ನಗರ : 8
ಯಲಹಂಕ : 6
ಬೆಂಗಳೂರು ಪಶ್ಚಿಮ :3
ಬೆಂಗಳೂರು ದಕ್ಷಿಣ : 4
ದಾಸರಹಳ್ಳಿ : 5