ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರ ಅನೇಕರ ಅಚ್ಚುಮೆಚ್ಚಿನ ನಗರ. ವಾತಾವರಣದಿಂದ ಜೀವನ ಶೈಲಿಯವರೆಗೆ ಬೆಂಗಳೂರು ಎಲ್ಲಾ ರೀತಿಯ ಅನುಕೂಲಕರ ವಾತಾವರಣವನ್ನು ಹೊಂದಿದೆ. ಈಗಾಗಲೇ ಹಲವು ಕಾರಣದಿಂದ ಪ್ರಮುಖ ನಗರಗಳಲ್ಲಿ ಬೆಸ್ಟ್ ಸಿಟಿಯಾಗಿ ರೂಪುಗೊಂಡಿರುವ ಬೆಂಗಳೂರು ನಗರಕ್ಕೆ ಇದೀಗ ಮತ್ತೊಂದು ಗರಿ ಮೂಡಿದೆ. ದೇಶದ ಅತ್ಯುತ್ತಮ ಶಾಪಿಂಗ್ ಸ್ಟ್ರೀಟ್ನಲ್ಲಿ ಬೆಂಗಳೂರಿನ ನಾಲ್ಕು ರಸ್ತೆಗಳು ಮೊದಲ ಹತ್ತು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಎಂಜಿ ರೋಡ್ ಮೊದಲ ಸ್ಥಾನ ಪಡೆದಿದೆ.
ಉನ್ನತ ರಸ್ತೆಗಳಲ್ಲಿ ಗ್ರಾಹಕರಿಗೆ ಅತ್ಯುತ್ತಮ ಶಾಪಿಂಗ್ ಅನುಭವ ಒದಗಿಸುವ ಗುಣಮಟ್ಟ ನಿರ್ಧರಿಸುವ ಕುರಿತು ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ಈ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ದೇಶದ ಅತ್ಯುತ್ತಮವಾದ ಹೈ ಸ್ಟ್ರೀಟ್ಗಳ ಪಟ್ಟಿ ಮಾಡಲಾಗಿದೆ. ಅದರಲ್ಲಿ ಬೆಂಗಳೂರಿನ ಎಂಜಿ ರೋಡ್ ಪ್ರಥಮ ಸ್ಥಾನ ಗಳಿಸಿದೆ.
ಥಿಂಕ್ ಇಂಡಿಯಾ: ಥಿಂಕ್ ರಿಟೇಲ್ 2023- ಹೈ ಸ್ಟ್ರೀಟ್ ರಿಯಲ್ ಎಸ್ಟೇಟ್ ಔಟ್‌ಲುಕ್’ ಎನ್ನುವ ಶೀರ್ಷಿಕೆಯೊಂದಿಗೆ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ. ಪಾರ್ಕಿಂಗ್, ಸಾರ್ವಜನಿಕ ಸಾರಿಗೆ, ಅಂಗಡಿಗಳು, ಖರ್ಚು ಪ್ರಮಾಣ, ಸರಾಸರಿ ವ್ಯಾಪಾರ ಸಾಂದ್ರತೆ, ಚಿಲ್ಲರೆ ವ್ಯಾಪಾರ ಯಂತ್ರ ಪ್ರಮುಖ ಅಂಶಗಳನ್ನು ಇದಕ್ಕೆ ಮಾನದಂಡವಾಗಿರಿಸಿಕೊಳ್ಳಲಾಗಿದೆ.
ಇನ್ನು ಎರಡನೇ ಸ್ಥಾನವನ್ನು ಹೈದರಾಬಾದ್ನ ಸೋಮಾಜಿಗುಡ, ಮೂರನೇ ಸ್ಥಾನ ಮುಂಬೈನ ಲಿಂಕಿಂಗ್ ರಸ್ತೆ, ನಾಲ್ಕನೇ ಸ್ಥಾನವನ್ನು ದೆಹಲಿಯ ಸೌತ್ ಎಕ್ಸ್ಟೆನ್ಷನ್ ರಸ್ತೆ ಪಡೆದಿದೆ. ಇನ್ನು ನಂತರದಲ್ಲಿ ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್ ಮತ್ತು ಕ್ಯಾಮಕ್ ಸ್ಟೀಟ್ ಪಡೆದರೆ, ಆರನೇ ಸ್ಥಾನ ಚೆನ್ನೈನ ಅಣ್ಣಾನಗರ, ಏಳನೇ ಸ್ಥಾನ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್, ಎಂಟನೇ ಸ್ಥಾನ ನೋಯ್ಡಾದ ಸೆಕ್ಟರ್ 18 ಮಾರ್ಕೆಟ್, ಒಂಭತ್ತನೇ ಸ್ಥಾನ ಬೆಂಗಳೂರಿನ ಬ್ರಿಗೇಡ್ ರೋಡ್, ಹತ್ತನೇ ಸ್ಥಾನವನ್ನು ಚರ್ಚ್ ಸ್ಟ್ರೀಟ್ ಪಾಲಾಗಿದೆ.
ಇನ್ನು ಈ ಕುರಿತು ಮಾನಾಡಿರುವ ನೈಟ್ ಫ್ರಾಂಕ್ ಇಂಡಿಯಾದ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಶಿಶಿರ್ ಬೈಜಾಲ್, ಭಾರತದ ನಗರಗಳು ಆಧುನೀಕರಣಗೊಳ್ಳುತ್ತಿದೆ. ಈ ವೇಳೆ ನಾವು ಈ ಹೈ ಸ್ಟ್ರೀಟ್ಗಳಲ್ಲಿ ಲಭ್ಯತೆ, ಪಾರ್ಕಿಂಗ್, ಅಂಗಡಿಗಳ ಗೋಚರತೆ ಕೂಡ ಸುಧಾರಿಸಿದೆ. ಈ ರಸ್ತೆಗಳಲ್ಲಿ 2023-24ರ ಆರ್ಧಿಕ ವರ್ಷದಲ್ಲಿ ಚದರ ಅಡಿಗಳಿಗೆ ಹೆಚ್ಚಿನ ಆದಾಯವನ್ನು ಗಳಿಸುತ್ತಿದೆ. ಕಡಿಮೆ ನಿರ್ವಹಣಾ ವೆಚ್ಚಗಳಿಂದಾಗಿ ಹೈ ಸ್ಟ್ರೀಟ್‌ಗಳು ಶೇಕಡಾ 100 ರಷ್ಟು ಪರಿಣಾಮ ಕಾರಿತ್ವವನ್ನು ನೀಡುತ್ತವೆ. ಮತ್ತೊಂದು ವಿಶೇಷತೆ ಎಂದರೆ ಈ ಹೈಸ್ಟ್ರೀಟ್ಗಳು ಶಾಪಿಂಗ್ ಮಾಲ್ಗಳಿಗೆ ಹೋಲಿಸಿದರೆ, ಇವು ಕಡಿಮೆ ಮಟ್ಟದ ಕೌಟುಂಬಿಕ ಮನರಂಜನೆ ವಿಷಯಗಳನ್ನು ಹೊಂದಿರುತ್ತದೆ. ಸಾಂಕ್ರಾಮಿಕತೆ ಬಳಿಕ ಚಿಲ್ಲರೆ ಉದ್ಯಮಕ್ಕೆ ಮತ್ತೆ ಆದ್ಯತೆಯನ್ನು ನೀಡುತ್ತಿವೆ. ಇದನ್ನು ಈ ಹೈ ಸ್ಟ್ರೀಟ್ಗಳಲ್ಲಿ ಅವುಗಳ ವಿವಿಧ ಅವಕಾಶವನ್ನು ಕಾಣಬಹುದಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಧಾರಾಕಾರ ಮಳೆಗೆ ವಿದ್ಯುತ್ ಕಂಬಗಳು ಧರೆಗೆ.. ಅಲ್ಲಲ್ಲಿ ಹಾನಿ