ETV Bharat / state

ಪ್ರಯಾಣಿಕರೇ ಗಮನಿಸಿ: ನಮ್ಮ ಮೆಟ್ರೋ ನೇರಳೆ ಮಾರ್ಗದ ಸಂಚಾರದಲ್ಲಿ ವ್ಯತ್ಯಯ

Namma Metro: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ನಾಳೆ ಎರಡು ಗಂಟೆ ಮೆಟ್ರೋ ಸೇವೆ ವಿಳಂಬ ಆಗಲಿದೆ.

Namma metro service
ಬೆಂಗಳೂರು ಮೆಟ್ರೋ ಸೇವೆಯಲ್ಲಿ ವಿಳಂಬ
author img

By ETV Bharat Karnataka Team

Published : Nov 4, 2023, 7:26 AM IST

Updated : Nov 4, 2023, 12:22 PM IST

ಬೆಂಗಳೂರು: ನಮ್ಮ ಮೆಟ್ರೋದ ನೇರಳೆ ಮಾರ್ಗದ ಸಂಚಾರದಲ್ಲಿ ಭಾನುವಾರ ವ್ಯತ್ಯಯವಾಗಲಿದೆ. ಎಂ.ಜಿ. ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ರೈಲುಗಳ ಸೇವೆಯಲ್ಲಿ ಎರಡು ಗಂಟೆ ವಿಳಂಬವಾಗಲಿದೆ. ಈ ಎರಡು ನಿಲ್ದಾಣಗಳ ನಡುವಿನ ರೈಲು ಸೇವೆ ನಾಳೆ ಬೆಳಗ್ಗೆ 7 ಗಂಟೆಯ ಬದಲಾಗಿ 9 ಗಂಟೆಗೆ ಆರಂಭವಾಗಲಿದೆ.

ನೇರಳೆ ಮಾರ್ಗದ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ನಿರ್ವಹಣ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಎಂ. ಜಿ. ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ಸೇವೆ ಎರಡು ಗಂಟೆ ತಡವಾಗಿ ಲಭ್ಯವಾಗಲಿದೆ. ಭಾನುವಾರ ಬೆ. 7 ಗಂಟೆಯಿಂದ ಮೆಟ್ರೋ ಸೇವೆ ಸಿಗುತ್ತಿತ್ತು. ಆದ್ರೆ ಕಾಮಗಾರಿಯಿಂದಾಗಿ ಬೆ. 9 ಗಂಟೆಯಿಂದ ಸೇವೆ ಆರಂಭವಾಗಲಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್‌, ಮೆಟ್ರೋ ನೇರಳೆ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಎಂ ಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ಮಧ್ಯೆ ಬೆಳಗ್ಗೆ ಎರಡು ಗಂಟೆ ವಿಳಂಬವಾಗಿ ಮೆಟ್ರೋ ಸೇವೆ ಪ್ರಾರಂಭವಾಗಲಿದೆ. ಬೆಳಗ್ಗೆ 9 ಗಂಟೆಯ ಬಳಿಕ ರೈಲುಗಳು ಎಂದಿನಂತೆ ಸಂಚರಿಸಲಿವೆ. ಚಲ್ಲಘಟ್ಟ ಮತ್ತು ಎಂ. ಜಿ. ರಸ್ತೆ ಮತ್ತು ವೈಟ್‌ಫೀಲ್ಡ್‌ ನಾಗಸಂದ್ರ ಮತ್ತು ರೇಷ್ಮೇ ಸಂಸ್ಥೆ ನಡುವಿನ ಮಾರ್ಗದಲ್ಲಿ ಎಂದಿನಂತೆ ರೈಲುಗಳ ಸಂಚಾರ ವೇಳಾಪಟ್ಟಿಯಂತೆ ಇರಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಸರ್ಕಸ್ ಮಾಡಿದ ನಾಲ್ವರು ವಿದ್ಯಾರ್ಥಿಗಳಿಗೆ ದಂಡ: ಖಡಕ್​ ವಾರ್ನಿಂಗ್​​

ಇತ್ತೀಚೆಗಷ್ಟೇ ನೇರಳ ಮಾರ್ಗದಲ್ಲಿ ಕೆ ಆರ್ ಪುರ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಮಧ್ಯೆ ಮೆಟ್ರೋ ಸೇವೆ ಅಕ್ಟೋಬರ್ 9ರಿಂದ ಆರಂಭವಾಗಿತ್ತು. ಆದ್ರೆ ಈ ವಿಸ್ತೃತ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 20 ರಂದು ಅಧಿಕೃತವಾಗಿ ವರ್ಚುವಲ್ ಮೂಲಕ ಚಾಲನೆ ನೀಡಿದ್ದರು. ವಿಸ್ತೃತ ಮಾರ್ಗದಿಂದಾಗಿ ವೈಟ್​ಫೀಲ್ಡ್​ನಿಂದ ಚಲ್ಲಘಟ್ಟದವರೆಗೆ ಪ್ರಯಾಣಿಕರು ಯಾವುದೇ ಮಾರ್ಗ ಬದಲಾವಣೆ ಇಲ್ಲದೇ ಒಂದೇ ರೈಲಿನಲ್ಲಿ ಸಂಚರಿಸುತ್ತಿದ್ದಾರೆ. ವೈಟ್​ಫೀಲ್ಡ್ - ಚಲ್ಲಘಟದ ಮಧ್ಯೆ 43.49 ಕಿಮೀ ದೂರುವನ್ನು 80 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದೆ.

ಈ ಎರಡು ಪ್ರಮುಖ ಮಾರ್ಗಗಳನ್ನು ಲೋಕಾರ್ಪಣೆಗೊಳಿಸಿದ್ದರಿಂದ ನಗರದ ಪೂರ್ವದಿಂದ ಪಶ್ಚಿಮಕ್ಕೆ ತಡೆ ರಹಿತ ಮೆಟ್ರೋ ಸಂಪರ್ಕ ಸಿಕ್ಕಂತಾಗಿ, ಮೆಟ್ರೋ ಜಾಲ 74 ಕಿ.ಮೀ.ಗಳಿಗೆ ವಿಸ್ತರಿಸಿದಂತಾಗಿದೆ. ಈ ಮಾರ್ಗದಲ್ಲಿ ಪ್ರತಿದಿನ ಅಂದಾಜು 7 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ. ವೈಟ್​ಫೀಲ್ಡ್​ನಿಂದ ಚಲ್ಲಘಟ್ಟದವರೆಗಿನ ಮಾರ್ಗ ವಿಸ್ತರಿಸುವಂತೆ ಭಾರೀ ಒತ್ತಾಯ ಕೇಳಿಬಂದಿತ್ತು. ಮಾರ್ಗ ಉದ್ಘಾಟನೆಯಾದ ಬಳಿಕ ಬೆಂಗಳೂರಿಗರು ಫುಲ್ ಖುಷ್ ಆಗಿದ್ದಾರೆ.

Last Updated : Nov 4, 2023, 12:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.