ETV Bharat / state

ಮೆಟ್ರೋ ಪ್ರಯಾಣಿಕರ ಗಮನಕ್ಕೆ.. ಸೋಮವಾರದಿಂದ ಮೆಟ್ರೋ ರೈಲು ಈ ಸಮಯದಲ್ಲೂ ಓಡಾಡುತ್ತೆ..

ನಮ್ಮ ಮೆಟ್ರೋ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಡಿಸೆಂಬರ್​ 20ರಿಂದ ರೈಲು ಸೇವೆಗಳ ಕಾರ್ಯಾಚರಣೆಯ ಸಮಯವನ್ನು ಹೆಚ್ಚಿಸಿದೆ. ‌ಈ ಕುರಿತಂತೆ ಪ್ರಕಟಣೆ ಹೊರಡಿಸಿದೆ..

Metro extended operating timing of train services
ಕಾರ್ಯಾಚರಣೆಯ ಸಮಯ ಹೆಚ್ಚಿಸಿದ ನಮ್ಮ ಮೆಟ್ರೋ
author img

By

Published : Dec 18, 2021, 4:09 PM IST

ಬೆಂಗಳೂರು : ನಮ್ಮ ಮೆಟ್ರೋ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಡಿಸೆಂಬರ್‌ 20ರಿಂದ ರೈಲು ಸೇವೆಗಳ ಕಾರ್ಯಾಚರಣೆಯ ಸಮಯವನ್ನು ಹೆಚ್ಚಿಸಿದೆ. ಭಾನುವಾರ ಹೊರತುಪಡಿಸಿ ಸೋಮವಾರದಿಂದ ಶನಿವಾರದವರೆಗೆ ಎಲ್ಲಾ ದಿನಗಳಂದು ಒಂದು ಗಂಟೆ ಮುಂಚಿತವಾಗಿ ಪ್ರಾರಂಭಿಸುತ್ತಿದೆ ಎಂದು ಮೆಟ್ರೋ ಪ್ರಕಟಣೆ ಹೊರಡಿಸಿದೆ.

ವಾರದ ದಿನಗಳಲ್ಲಿ ಅಂದರೆ ಸೋಮವಾರದಿಂದ ಶನಿವಾರದವರೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಾದ ನಾಗಸಂದ್ರ, ರೇಷ್ಮೆ ಸಂಸ್ಥೆ ಹಾಗೂ ಕೆಂಗೇರಿ ಮತ್ತು ಬೈಯಪ್ಪನಹಳ್ಳಿಯಿಂದ ಮೊದಲನೇ ಮೆಟ್ರೋ ರೈಲು ಸೇವೆಯು ಬೆಳಗ್ಗೆ 5:00 ಗಂಟೆಯಿಂದ ಲಭ್ಯವಿರಲಿದೆ. ಭಾನುವಾರದಂದು ಯಾವುದೇ ಬದಲಾವಣೆಯಿಲ್ಲದೆ ರೈಲುಗಳ ಸೇವೆಯು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ.

ಇನ್ನು ಕೊನೆಯ ಮೆಟ್ರೋ ರೈಲು ಸೇವೆಯು ವಾರದ ಎಲ್ಲಾ ದಿನಗಳಲ್ಲಿ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11 ಗಂಟೆಗೆ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಿಂದ 11:30 ಗಂಟೆಗೆ ಹೊರಡಲಿದೆ.

ಇದನ್ನೂ ಓದಿ: ಬೆಳಗಾವಿ ಗಲಭೆ ಪ್ರಕರಣ.. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ : ಬಿಎಸ್​ವೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.