ಬೆಂಗಳೂರು : ಲೈಂಗಿಕ ತಜ್ಞೆ ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ನಕಲಿ ಅಕೌಂಟ್ ಕ್ರಿಯೇಟ್ ಮಾಡಿದ ಕಾಮುಕನೊಬ್ಬ ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಚಾರ ತಿಳಿದ ವೈದ್ಯೆ ಪದ್ಮಿನಿ ಪ್ರಸಾದ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ವೃತ್ತಿಯಲ್ಲಿ ವೈದ್ಯೆಯಾಗಿರುವ ಪದ್ಮಿನಿ ಪ್ರಸಾದ್ ಎಂಬುವರು ಅದೆಷ್ಟೋ ಪುರುಷ ಹಾಗೂ ಮಹಿಳೆಯರ ಲೈಂಗಿಕ ಸಮಸ್ಯೆಗಳನ್ನ ನಿವಾರಿಸಿದ್ದಾರೆ. ಇವರ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ, ಅದನ್ನೇ ಬಂಡವಾಳ ಮಾಡಿಕೊಂಡ ಕಾಮುಕನೊಬ್ಬ ವೈದ್ಯೆಯ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದಿದ್ದಾನಂತೆ. ನಿಜವಾಗಿಯೂ ವೈದ್ಯೆ ಎಂದು ನಂಬಿದ ಜನ, ತಾವು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮೆಸೆಂಜರ್ ಮೂಲಕ ಹೇಳಿಕೊಂಡಿದ್ದಾರಂತೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಸರಣಿ ಅಪಘಾತ : 6 ಜನರಿಗೆ ಗಂಭೀರ ಗಾಯ
ಬಳಿಕ ಖಾಸಗಿ ವಿಡಿಯೋ ಮಾಡಿ ಕಳಿಸುವಂತೆ ಮಹಿಳೆಯರ ಜೊತೆ ಆರೋಪಿ ಚಾಟಿಂಗ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನೇರವಾಗಿ ಭೇಟಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಲು ಕ್ಲಿನಿಕ್ಗೆ ಬರುತ್ತೇವೆ ಎಂದು ಮಹಿಳೆಯರು ಹೇಳಿದ್ರೆ ಕೊರೊನಾ ಕಾರಣ ಕೊಟ್ಟಿದ್ದಾನಂತೆ. ಇದರಿಂದ ಅನುಮಾನ ಬಂದು ಕೆಲ ಮಹಿಳೆಯರು ಪದ್ಮಿನಿ ರಾವ್ ಅವರನ್ನೇ ಕೇಳಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.