ETV Bharat / state

ಚುನಾವಣೆ ಮುನ್ನ ದೊಡ್ಡ ಸದ್ದು ಮಾಡಿದ್ದ ಮೇಕೆದಾಟು, ಚುನಾವಣೆ ಬರ್ತಿದ್ದಂತೆ ಮರೆತೋಯ್ತೇ? - ಪ್ರತಿಪಕ್ಷಗಳು ಬಿಜೆಪಿ ಸರ್ಕಾರ ವಿರುದ್ಧ ಸಮರ

ಮೇಕೆದಾಟು ಯೋಜನೆ‌ ಜಾರಿ ವಿಚಾರದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಗುದ್ದಾಟ ನಡೆದಿತ್ತು. ಯೋಜನೆ ಜಾರಿ ವಿಳಂಬ ವಿರೋಧಿಸಿ ಪ್ರತಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಸಮರ ಸಾರಿದ್ದವು.

Congress Padayatra
ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಕೈಗೊಂಡ ಪಾದಯಾತ್ರೆ
author img

By

Published : Apr 19, 2023, 6:32 PM IST

Updated : Apr 20, 2023, 11:19 AM IST

ಬೆಂಗಳೂರು: ಮೇಕೆದಾಟು ಕರ್ನಾಟಕದ ಬಹುನಿರೀಕ್ಷಿತ ಮತ್ತು ಮಹತ್ವಾಕಾಂಕ್ಷೆಯ ಯೋಜನೆ‌. ಹಳೆಮೈಸೂರು ಹಾಗೂ ಬೆಂಗಳೂರಿಗರಿಗೆ ನೆಚ್ಚಿನ ಯೋಜನೆ.‌ ಚುನಾವಣೆ ಪೂರ್ವ ಭಾರಿ ಸದ್ದು ಮಾಡಿದ್ದ ಮೇಕೆದಾಟು ವಿಚಾರ ಚುನಾವಣೆ ಸಮಿಪಿಸುತ್ತಿದ್ದಂತೆ ಸೈಲೆಂಟಾಗಿದೆ.

ಮೇಕೆದಾಟು ಯೋಜನೆ ಬಗ್ಗೆ..: ಇದು ಕುಡಿಯುವ ನೀರು, ನೀರಾವರಿ ಹಾಗೂ ವಿದ್ಯುತ್‌ ಉತ್ಪಾದನೆ ಉದ್ದೇಶಕ್ಕಾಗಿ 9,000 ಕೋಟಿ ರೂ. ವೆಚ್ಚದ ಅಣೆಕಟ್ಟು ಯೋಜನೆಯಾಗಿದೆ. ರಾಮನಗರದ ಜಿಲ್ಲೆಯ ಮುಗ್ಗೂರು ಅರಣ್ಯ ವಲಯದ ವಾಚಿಂಗ್‌ ಟವರ್‌ ಗುಡ್ಡೆಯಿಂದ ಹನೂರು ಅರಣ್ಯ ವಲಯದ ಗುಡ್ಡೆಯ ನಡುವೆ ಒಂಟಿಗುಂಡು ಸ್ಥಳದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಆಗಲಿದೆ ಎನ್ನಲಾಗುತ್ತಿದೆ. ಈ ಒಂಟಿಗುಂಡು ಸ್ಥಳ ಮೇಕೆದಾಟು ಮತ್ತು ಸಂಗಮದ ಮಧ್ಯದಲ್ಲಿದೆ. ಅಣೆಕಟ್ಟೆ ನಿರ್ಮಾಣವಾಗುವ ಸ್ಥಳದಿಂದ ಎರಡು ಕಿ.ಮೀ ದೂರದಲ್ಲಿರುವ ಮೇಕೆದಾಟು ಬಳಿ ಜಲ ವಿದ್ಯುತ್‌ ಕೇಂದ್ರ ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ.

67 ಟಿಎಂಸಿ ನೀರು ಸಂಗ್ರಹಿಸುವ ಯೋಜನೆ: 5252.40 ಹೆಕ್ಟೇರ್ ಪ್ರದೇಶದಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಉದ್ದೇಶಿಸಲಾಗಿದೆ. 99 ಮೀಟರ್‌ ಎತ್ತರ, 674.5 ಮೀಟರ್ ಉದ್ದದ ಅಣೆಕಟ್ಟೆಯಲ್ಲಿ 67.2 ಟಿಎಂಸಿ ನೀರು ಸಂಗ್ರಹಿಸುವ ಯೋಜನೆ ಇದಾಗಿದೆ. 4.75 ಟಿಎಂಸಿ ಹೆಚ್ಚುವರಿ ನೀರನ್ನು ಬೆಂಗಳೂರಿನ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲಾಗುವುದು. ಇದರೊಂದಿಗೆ 400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಗುರಿ ಹೊಂದಲಾಗಿದೆ. ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಸರ್ಕಾರ ಕ್ಯಾತೆ ತೆಗೆದರೆ, ಇನ್ನೊಂದೆಡೆ ಕೇಂದ್ರ ಪರಿಸರ ಇಲಾಖೆಯಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ. ಹೀಗಾಗಿ ಯೋಜನೆ ಜಾರಿ ಇನ್ನೂ ವಿಳಂಬವಾಗಿದೆ.

ಕಾಂಗ್ರೆಸ್‌ನಿಂದ ಮೇಕೆದಾಟು ಪಾದಯಾತ್ರೆ: ಕಾಂಗ್ರೆಸ್ ಕಳೆದ ವರ್ಷ ಜನವರಿ ಹಾಗೂ ಫೆಬ್ರವರಿಯಲ್ಲಿ ಮೇಕೆದಾಟು ಯೋಜನೆ ಜಾರಿಗಾಗಿ ಸಂಗಮದಿಂದ ಬೆಂಗಳೂರುವರೆಗೆ ಸುಮಾರು 100 ಕಿ.ಮೀ. ಪಾದಯಾತ್ರೆ ನಡೆಸಿತು. ರಾಜ್ಯದ ಘಟಾನುಘಟಿ ಕೈ ನಾಯಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಡಿಕೆಶಿ ಸಹೋದರರು ಪಾದಯಾತ್ರೆಯ ರೂವಾರಿಗಳಾಗಿದ್ದರು. ಕೋವಿಡ್ ನಿರ್ಬಂಧಗಳ ಮಧ್ಯೆ ಮೊದಲ‌ ಹಂತದ ಪಾದಯಾತ್ರೆ ಮೊಟಕುಗೊಂಡು ಬಳಿಕ ಎರಡನೇ ಸುತ್ತಿನ ಪಾದಯಾತ್ರೆಯನ್ನು ನಡೆಸಲಾಯಿತು.

ರಾಜ್ಯ ಸರ್ಕಾರದ ಕಠಿಣ ನಿರ್ಬಂಧದ ನಡುವೆಯೂ 2022 ಜ.9ರಿಂದ 12ರ ವ​ರೆಗೆ ಮೊದಲ ಸುತ್ತಿನ ಮೇಕೆದಾಟು ಪಾದಯಾತ್ರೆ ನಡೆಯಿತು. ಫೆ.27ರಂದು ರಾಮನಗರದಿಂದ ಎರಡನೇ ಹಂತದ ಪಾದಯಾತ್ರೆ ನಡೆಸಿ ಮಾ.3ಕ್ಕೆ ಬೆಂಗಳೂರಿನ ಬಸವನಗುಡಿಯಲ್ಲಿ ಬೃಹತ್ ಸಮಾವೇಶ ನಡೆಸಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿದ್ದರು. ಘಟಾನುಘಟಿ ಕೈ ನಾಯಕರು ಯೋಜನೆ ವಿಳಂಬಕ್ಕೆ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿ​ಎಸ್‌ ಭದ್ರ​ಕೋಟೆ ಹಾಗೂ ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಕರ್ಮ​ಭೂಮಿ ರಾಮ​ನ​ಗರ ಕ್ಷೇತ್ರ​ದಲ್ಲಿ ಮೇಕೆ​ದಾಟು ಪಾದ​ಯಾತ್ರೆ ಮೂಲಕ ಕಾಂಗ್ರೆಸ್‌ನ ಶಕ್ತಿ ಪ್ರದ​ರ್ಶನ ನಡೆಸಲಾಯಿತು. ಅಷ್ಟೇ ಅಲ್ಲ, ಡಿಕೆಶಿ ತಮ್ಮ ಶಕ್ತಿ ಪ್ರದರ್ಶನ ಹಾಗೂ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟು ಮೇಕೆದಾಟು ಪಾದಯಾತ್ರೆ ನಡೆಸಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿತ್ತು.

ಕಾಂಗ್ರೆಸ್ ಪಾದಯಾತ್ರೆಗೆ ಬಿಜೆಪಿಗಿಂತ ಜೆಡಿಎಸ್ ಆಕ್ಷೇಪ: ಮೇಕೆದಾಟು ಯೋಜನೆ ಕಾಂಗ್ರೆಸ್ ಪಾದಯಾತ್ರೆ ಬಿಜೆಪಿಗಿಂತ ಹೆಚ್ಚಿಗೆ ಕಣ್ಣು ಕೆಂಪಾಗಿಸಿದ್ದು ಜೆಡಿಎಸ್ ನಾಯಕರನ್ನು. ಹಳೆ ಮೈಸೂರು ಭಾಗದಲ್ಲಿ ಈ ಪಾದಯಾತ್ರೆ ನಡೆಸಲಾಗಿತ್ತು. ಪ್ರಮುಖವಾಗಿ ರಾಮನಗರ, ಕನಕಪುರ, ಬೆಂಗಳೂರಿನ ಮೇಲೆ ಈ ಪಾದಯಾತ್ರೆಯ ಪ್ರಭಾವ ಬೀರಲಿದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿತ್ತು. ಹಳೆ ಮೈಸೂರು ಭಾಗದ ಅದರಲ್ಲೂ ವಿಶೇಷವಾಗಿ ಒಕ್ಕಲಿಗ ಪ್ರಾಬಲ್ಯದ ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಹಾಸನ, ತುಮಕೂರು ಹಾಗೂ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದ ಒಟ್ಟಾರೆ ನಾಯಕತ್ವದ ಮೇಲೆ ಪಾದಯಾತ್ರೆ ಪ್ರಭಾವ ಬೀರಲಿದೆ ಎಂದು ವಿಶ್ಲೇಷಿಸಲಾಗಿತ್ತು.

ಒಕ್ಕಲಿಗರ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದಲ್ಲಿ ವರ್ಚಸ್ಸು ವೃದ್ಧಿ ಮಾಡಿಕೊಳ್ಳುವುದಕ್ಕೆ ಡಿ.ಕೆ.ಶಿವಕುಮಾರ್‌ ಈ ಯಾತ್ರೆಯ ಮೂಲಕ ಮುಂದಾಗಿರುವುದು ಜೆಡಿಎಸ್‌ನ್ನು ಕೆರಳಿಸಿತ್ತು. ಮೇಕೆದಾಟು ಹೆಸರು ಹೇಳಿಕೊಂಡು ಕಾಂಗ್ರೆಸ್‌ ನಾಯಕರು ನಡೆಸುತ್ತಿರುವ ಪಾದಯಾತ್ರೆಯ ಉದ್ದೇಶ ಬೇರೆ.ಮತಕ್ಕಾಗಿ ನಡೆಸುತ್ತಿರುವ ಪಾದಯಾತ್ರೆಯೇ ಹೊರತು ಕುಡಿಯುವ ನೀರಿಗಾಗಿ ಅಲ್ಲ. ಮೇಕೆದಾಟು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕನಸಿನ ಕೂಸು. 1996ರಲ್ಲಿ ಗೌಡರು ಮುಖ್ಯಮಂತ್ರಿ ಯಾಗಿದ್ದಾಗಲೇ ಇದಕ್ಕೆ ನೀಲನಕ್ಷೆ ರೂಪಿಸಿದ್ದರು. ನಾನು ಸಿಎಂ ಆಗಿದ್ದಾಗ ಯೋಜನೆಯ ಡಿಪಿಆರ್‌ ತಯಾರಿಸಲಾಗಿದ್ದು, ಈ ಸಂಬಂಧ ಹಲವು ಬಾರಿ ಪ್ರಧಾನಿ ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ನಮ್ಮ ಶ್ರಮವನ್ನು ತಮ್ಮ ಕೊಡುಗೆ ಎಂದು ಬಿಂಬಿಸಿಕೊಳ್ಳಲು ಕಾಂಗ್ರೆಸ್‌ ಹೊರಟಿದೆ. ಇದು ಪಾದಯಾತ್ರೆ ಹೆಸರಲ್ಲಿ ಮಾಡಿದ ಜಾತ್ರೆ ಅಷ್ಟೇ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದರು. ಇತ್ತ ಬಿಜೆಪಿ ಯೋಜನೆ ಡಿಪಿಆರ್ ಕಾಂಗ್ರೆಸ್ ಅವಧಿಯಲ್ಲೇ ಸಿದ್ಧವಾಗಿದ್ದರೂ ಕಾಂಗ್ರೆಸ್ ಸರ್ಕಾರ ಯೋಜನೆ ಜಾರಿಗೆ ಏಕೆ ಮುಂದಾಗಿಲ್ಲ ಎಂದು ಕಾಂಗ್ರೆಸ್ ಪಾದಯಾತ್ರೆಯನ್ನು ಪ್ರಶ್ನಿಸಿತ್ತು.

ಬಿಜೆಪಿ ಸರ್ಕಾರದಿಂದ ಕೌಂಟರ್: ಕಳೆದ ವರ್ಷ ಬಜೆಟ್ ಅಧಿವೇಶನದಲ್ಲಿ ಬೊಮ್ಮಾಯಿ ಸರ್ಕಾರ ಮೇಕೆದಾಟು ಯೋಜನೆಗೆ 1,000 ಕೋಟಿ ಅನುದಾನ ನೀಡಿ ಕಾಂಗ್ರೆಸ್ ಪಾದಯಾತ್ರೆಗೆ ಕೌಂಟರ್ ಕೊಟ್ಟಿದ್ದರು. ಇತ್ತ ಕಾಂಗ್ರೆಸ್ ಈ ಅನುದಾನ ಘೋಷಣೆ ಮೇಕೆದಾಟು ಪಾದಯಾತ್ರೆಯ ಫಲಶೃತಿ ಎಂದು ಬಿಂಬಿಸಿತು. ಆದರೆ ಬಿಜೆಪಿ ಮೇಕೆದಾಟು ಯೋಜನೆ ಜಾರಿಗೆ ಬಿಜೆಪಿ ಸರ್ಕಾರ ಬದ್ಧವಾಗಿದ್ದು, ಅದಕ್ಕೆ ಬೇಕಾದ ಎಲ್ಲ ತಯಾರಿಗಳನ್ನು ನಡೆಸಲಾಗುತ್ತದೆ ಎಂದು ಭರವಸೆ ನೀಡಿತ್ತು. ಸಿಎಂ ಬೊಮ್ಮಾಯಿ ಈ ಸಂಬಂಧ ಸರ್ವಪಕ್ಷಗಳ ಸಭೆ ಕರೆದು ಅಂತರ ರಾಜ್ಯ ಜಲವಿವಾದಗಳ ಬಗ್ಗೆ ಚರ್ಚೆ ನಡೆಸಿದ್ದರು. ಜೊತೆಗೆ ಸಚಿವರ ನಿಯೋಗ ಕೇಂದ್ರದ ಸಚಿವರನ್ನು ಭೇಟಿಯಾಗಿ ಯೋಜನೆ ಜಾರಿಗೆ ಒತ್ತಾಯಿಸಿದ್ದರು. ಬಳಿಕ ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರ ಕೈಗೊಂಡಿದ್ದ ನಿರ್ಣಯ‌ ಖಂಡಿಸಿರುವ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿತ್ತು. ಮೇಕೆದಾಟು ಯೋಜನೆಗೆ ಈ ಕೂಡಲೇ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗ ಹಾಗೂ ಪರಿಸರ ಮತ್ತು ಅರಣ್ಯ ಮಂತ್ರಾಲಯವನ್ನು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿತ್ತು.

ಚುನಾವಣೆ ಸಮಯದಲ್ಲಿ ಮೇಕೆದಾಟು ಸೈಲೆಂಟ್: ಚುನಾವಣೆ ಪೂರ್ವ ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ನಡೆಸಿ ದೊಡ್ಡದಾಗಿ ಸದ್ದು ಮಾಡಿತ್ತು. ಚುನಾವಣೆ ಸಮಯದಲ್ಲಿ ಮೇಕೆದಾಟು ಯೋಜನೆ ಮತ್ತಷ್ಟು ದೊಡ್ಡದಾಗಿ ಸದ್ದು ಮಾಡಲಿದೆ ಎಂದು ನಂಬಲಾಗಿತ್ತು. ಆದರೆ, ಚುನಾವಣೆ ರಣಕಣ ತಾರಕಕ್ಕೇರಿದ್ದು ಈ ವರೆಗೆ ಮೇಕೆದಾಟು ವಿಚಾರ ಚುನಾವಣಾ ಅಜೆಂಡಾವಾಗಿ ಮುನ್ನೆಲೆಗೆ ಬಂದಿಲ್ಲ. ಡಿಕೆಶಿ ಮೇಕೆದಾಟು ಪಾದಯಾತ್ರೆ ವೇಳೆ ಯೋಜನೆ ಜಾರಿಯಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಇದು ಆರಂಭವಷ್ಟೇ ಯೋಜನೆ ಜಾರಿ ಆಗುವವರೆಗೂ ಹೋರಾಟ ನಿಲ್ಲಲ್ಲ ಎಂದಿದ್ದರು‌. ಆದರೆ ಇದೀಗ ಯೋಜನೆ ಬಗ್ಗೆ ಚುನಾವಣೆ ಅಖಾಡದಲ್ಲಿ ಯಾವುದೇ ಸದ್ದು ಮಾಡುತ್ತಿಲ್ಲ. ರಾಜಕೀಯ ಪಕ್ಷಗಳು ಈ ವರೆಗೆ ಮೇಕೆದಾಟು ಯೋಜನೆಯನ್ನು ಚುನಾವಣಾ ವಿಚಾರವಾಗಿ ಜನರ ಮುಂದೆ ಚರ್ಚಿಸುತ್ತಿಲ್ಲ.‌

ಬೆಂಗಳೂರು ಸೇರಿದಂತೆ ಹಳೆ ಮೈಸೂರಿನ ಮೂರು ಜಿಲ್ಲೆಗಳಿಗೆ ಮೇಕೆದಾಟು ಯೋಜನೆಯಿಂದ ಲಾಭವಾಗಲಿದೆ. ಆದರೆ, ಈ ಯೋಜನೆ ಚುನಾವಣಾ ಅಂಶವಾಗುವ ಲಕ್ಷಣ ಕಾಣುತ್ತಿಲ್ಲ. ಕಾನೂನು ತೊಡಕು, ಪರಿಸರ ಇಲಾಖೆಯ ಅನುಮತಿ, ತಮಿಳುನಾಡಿನ ಕ್ಯಾತೆಯ ಮಧ್ಯೆ ಮೇಕೆದಾಟು ಜಾರಿ ಬಗ್ಗೆ ಚುನಾವಣಾ ಘೋಷಣೆ ಮಾಡಲು ರಾಜಕೀಯ ಪಕ್ಷಗಳು ಹಿಂದೇಟು ಹಾಕುತ್ತಿದೆಯಾ ಎಂಬ ಪ್ರಶ್ನೆಗಳು ಮೂಡಿವೆ. ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವೇಳೆ ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ ಎಂಬ ಮಾತುಗಳೂ ಆವಾಗ ಕೇಳಿಬಂದಿತ್ತು.‌ ಚುನಾವಣಾ ಸಂದರ್ಭದಲ್ಲಿ ಮೇಕೆದಾಟು ಯೋಜನೆ ವಿಚಾರವನ್ನು ಯಾವ ರಾಜಕೀಯ ಪಕ್ಷಗಳು ಪ್ರಸ್ತಾಪಿಸುತ್ತಿಲ್ಲ.

ಇದನ್ನೂಓದಿ: ರಾಜ್ಯದಲ್ಲಿ ಮೂರು ಪಕ್ಷಗಳ ಪ್ರಾದೇಶಿಕವಾರು ಬಲಾಬಲ ಹೇಗಿದೆ?

Last Updated : Apr 20, 2023, 11:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.