ETV Bharat / state

ಚುನಾವಣೆಗೆ ಸಿದ್ಧತೆ, ಅಧಿವೇಶನದಲ್ಲಿ ಹೋರಾಟ: ಮಹತ್ವದ ಸಭೆಗೆ ಕೈ ನಾಯಕರ ನಿರ್ಧಾರ

ಮುಂಬರುವ ವಿಧಾನಸಭೆ ಚುನಾವಣೆಗೆ ರಣತಂತ್ರ ಮತ್ತು ಬಜೆಟ್‌ ಅಧಿವೇಶನದಲ್ಲಿ ಹೋರಾಟದ ಕುರಿತಾಗಿ ಚರ್ಚಿಸಲು ಕಾಂಗ್ರೆಸ್ ನಾಯಕರು ಮಹತ್ವದ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

Important meeting of congress leaders
ಕಾಂಗ್ರೆಸ್ ನಾಯಕರ ಮಹತ್ವದ ಸಭೆ
author img

By

Published : Feb 5, 2023, 11:13 AM IST

ಬೆಂಗಳೂರು : ವಿಧಾನ ಮಂಡಲ ಅಧಿವೇಶನ ಆರಂಭಕ್ಕೆ ಮುನ್ನ ಸರ್ಕಾರದ ವಿರುದ್ಧದ ಸದನದ ಒಳಗಿನ ಹೋರಾಟ ಕುರಿತು ಚರ್ಚಿಸಲು ಕಾಂಗ್ರೆಸ್ ನಾಯಕರು ಮಹತ್ವದ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಹಿರಿಯ ನಾಯಕರು ಒಂದೆಡೆ ಸೇರಿ ಅಧಿವೇಶನ ಸಂದರ್ಭ ಮೇಲ್ಮನೆ ಹಾಗೂ ಕೆಳಮನೆಯಲ್ಲಿ ಪಕ್ಷದ ಹೋರಾಟ ಯಾವ ರೀತಿ ಇರಬೇಕು ಎಂಬ ಕುರಿತು ಮಾತುಕತೆ ನಡೆಸಲಿದ್ದಾರೆ.

ಸದನದ ಒಳಗೆ ಹಾಗೂ ಹೊರಗೆ ಕೈಗೊಳ್ಳುವ ಹೋರಾಟಗಳು ಮತ್ತು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೆಲವು ಸಂಘಟನೆಗಳು ಅಧಿವೇಶನದ ಸಂದರ್ಭದಲ್ಲಿ ನಡೆಸುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವ ವಿಚಾರವಾಗಿ ಕೈ ನಾಯಕರು ಚರ್ಚಿಸಲಿದ್ದಾರೆ. ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಯಾವ್ಯಾವ ನಾಯಕರು ಯಾವ ವಿಚಾರದ ಕುರಿತು ತಮ್ಮ ವಿಚಾರ ಮಂಡಿಸಬೇಕು ಎಂಬುದನ್ನೂ ಸಹ ನಿರ್ಧರಿಸಲು ಕಾಂಗ್ರೆಸ್ ನಾಯಕರು ಯೋಚಿಸಿದ್ದಾರೆ ಎನ್ನಲಾಗಿದೆ.

2023ರ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ರಾಜ್ಯ ಸರ್ಕಾರ ಈ ಸಾರಿಯ ಬಜೆಟ್ ಮಂಡಿಸಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೈ ನಾಯಕರು ಸರ್ಕಾರದ ಖರ್ಚು ವೆಚ್ಚಗಳು ಹಾಗೂ ಸಾಲದ ಹೊರೆಯ ನಡುವೆ ಜನಪ್ರಿಯ ಘೋಷಣೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂಬ ವಾದ ಮಂಡಿಸಲು ತೀರ್ಮಾನಿಸಿದ್ದಾರೆ.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ: 2018ರ ವಿಧಾನಸಭೆ ಚುನಾವಣೆ ಸಂದರ್ಭ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 600ಕ್ಕೂ ಹೆಚ್ಚು ಬೇಡಿಕೆಗಳಲ್ಲಿ ಶೇ 10ರಷ್ಟು ಬೇಡಿಕೆಯನ್ನೂ ಸಹ ಇದುವರೆಗೂ ಈಡೇರಿಸಿಲ್ಲ. ಈ ವಿಚಾರವನ್ನು ಅಧಿವೇಶನದಲ್ಲಿ ದೊಡ್ಡ ಹೋರಾಟದ ರೂಪದಲ್ಲಿ ಕೈಗೆತ್ತಿಕೊಳ್ಳಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಹಾಗೂ ಮುಜುಗರಕ್ಕೆ ಒಳಪಡಿಸುವ ಮಾದರಿಯ ದೊಡ್ಡಮಟ್ಟದ ಹೋರಾಟಕ್ಕೆ ಕಾಂಗ್ರೆಸ್ ಅಣಿಯಾಗುತ್ತಿದೆ.

ಸದನದ ಕಲಾಪಕ್ಕೆ ಅಡ್ಡಿಯಾಗದಂತೆ ಜನರ ದೃಷ್ಟಿಯಲ್ಲಿಯೂ ಉತ್ತಮರೆನಿಸಿಕೊಳ್ಳುವ ಮಾದರಿಯ ಹೋರಾಟಕ್ಕೆ ರೂಪುರೇಷೆ ಹೆಣೆಯುವ ಯೋಚನೆಯಲ್ಲಿದ್ದಾರೆ ಕಾಂಗ್ರೆಸ್ ನಾಯಕರು. ಮುಂಬರುವ ವಿಧಾನಸಭೆ ಚುನಾವಣೆಯ ಗೆಲುವು ಪಕ್ಷಕ್ಕೆ ಅತ್ಯಂತ ಮಹತ್ವದ್ದಾಗಿದ್ದು ಶತಾಯಗತಾಯ ಜನರ ವಿಶ್ವಾಸ ಗಳಿಸುವ ಮಾದರಿಯ ಹೋರಾಟವನ್ನು ಮಾತ್ರ ನಡೆಸಬೇಕು ಎಂಬುದು ಪಕ್ಷಕ್ಕೆ ಮನವರಿಕೆಯಾದಂತೆ ಕಾಣುತ್ತಿದೆ.

ವಿವಾದಾತ್ಮಕ ಹೇಳಿಕೆ ಬೇಡ: ಚುನಾವಣೆ ಸಂದರ್ಭದಲ್ಲಿ ಯಾವುದೇ ಭಾವನಾತ್ಮಕ ವಿಚಾರ ಇಲ್ಲವೇ, ಯಾವುದೇ ನಾಯಕರ ವಿರುದ್ಧ ವೈಯಕ್ತಿಕ ಅವಹೇಳನ ಮಾಡಿ ಜನರ ವಿಶ್ವಾಸ ಕಳೆದುಕೊಳ್ಳಬಾರದು. ಪ್ರತಿಯೊಬ್ಬ ನಾಯಕರು ಯಾವ ರೀತಿಯಲ್ಲಿ ಮಾತನಾಡಬೇಕು ಎಂಬ ಕುರಿತು ಹಿರಿಯ ನಾಯಕರ ಸಭೆಯಲ್ಲೇ ಚರ್ಚಿಸಲು ತೀರ್ಮಾನಿಸಲಾಗಿದೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ನಾಯಕರಿಗೆ ಸುಮ್ಮನಿರುವಂತೆಯೂ ಸೂಚಿಸುವ ಸಾಧ್ಯತೆ ಹೆಚ್ಚಿದೆ.

ಪ್ರಣಾಳಿಕೆ ರಚನೆ: ಚುನಾವಣೆಯ ಗೆಲುವಿಗೆ ವ್ಯವಸ್ಥಿತ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ಪ್ರಣಾಳಿಕೆ ರಚನೆಗೂ ವಿಶೇಷ ಒತ್ತು ಕೊಟ್ಟಿದೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜನರಿಗಾಗಿ ಕೈಗೊಳ್ಳುವ ಕಲ್ಯಾಣ ಕಾರ್ಯಕ್ರಮಗಳ ಕುರಿತು ಸರಳ ಹಾಗೂ ಮನದಟ್ಟಾಗುವ ರೀತಿಯಲ್ಲಿ ಪ್ರಣಾಳಿಕೆಯಲ್ಲಿ ತೋರಿಸಲು ಕಾಂಗ್ರೆಸ್ ನಿರ್ಧರಿಸಿದೆ. ಮಾಜಿ ಡಿಸಿಎಂ ಜಿ.ಪರಮೇಶ್ವರ ನೇತ್ರತ್ವದ ಪ್ರಣಾಳಿಕೆ ರಚನಾ ಸಮಿತಿ ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದೆ.

2013 ರಿಂದ 18ರವರೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ ನೀಡಿದ ಕೊಡುಗೆಗಳ ಜೊತೆಗೆ ಹೊಸದಾಗಿ ಒಂದಿಷ್ಟು ಕೊಡುಗೆಗಳನ್ನು ಘೋಷಿಸುವ ತಯಾರಿಯನ್ನೂ ನಡೆಸಲಾಗುತ್ತಿದೆ. ಈಗಾಗಲೇ ಪಾದಯಾತ್ರೆ, ಬಸ್ ​ಯಾತ್ರೆ ಸೇರಿದಂತೆ ವಿವಿಧ ಹೋರಾಟಗಳ ಮೂಲಕ ಕಳೆದ ಒಂದೆರಡು ತಿಂಗಳಿಂದ ಜನರ ಮಧ್ಯೆ ಕಾಂಗ್ರೆಸ್ ನಾಯಕರು ಓಡಾಡಿಕೊಂಡಿದ್ಧಾರೆ. ಮುಂದಿನ ಎರಡು ತಿಂಗಳು ಸಹ ಇದೇ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದ್ದಾರೆ. ಈ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರುವ ಮೂಲಕ ಕಾಂಗ್ರೆಸ್ ಪಕ್ಷದ ಬಲ ಹೆಚ್ಚಿಸುವ ಹಾಗೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ಸಿಗೆ ಹೊಸ ಚೈತನ್ಯ ತುಂಬುವ ಪ್ರಯತ್ನ ಮಾಡಲು ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಅಧಿವೇಶನದಲ್ಲಿ ಕೈಗೊಳ್ಳುವ ಹೋರಾಟ ಸೇರಿದಂತೆ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಕೈಗೊಳ್ಳಬೇಕಾಗಿರುವ ಹೋರಾಟಗಳ ಕುರಿತು ಚರ್ಚಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಕಾಂಗ್ರೆಸ್ ಮಹತ್ವದ ಸಭೆ ಇನ್ನೊಂದು ವಾರದಲ್ಲಿ ನಡೆಯಲಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, "ನಮ್ಮ ನಾಯಕರು ಬಸ್ ​​ಯಾತ್ರೆಯಲ್ಲಿ ತೊಡಗಿದ್ದು ಸಭೆಯ ದಿನಾಂಕ ಇನ್ನೂ ನಿಗದಿ ಆಗಿಲ್ಲ. ನಾಯಕರ ಲಭ್ಯತೆ ಆಧರಿಸಿ ದಿನಾಂಕ ನಿಗದಿ ಆಗಲಿದೆ. ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು ಸ್ಥಳ ಹಾಗೂ ಸಮಯ ನಿರ್ಧಾರವಾಗಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ಇದರಿಂದ ಮುಂದೆ ಕಾಂಗ್ರೆಸ್ ಕೈಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ" ಎಂದು ಹೇಳಿದರು.

ಇದನ್ನೂ ಓದಿ :ಕಾಂಗ್ರೆಸ್‌ ನಾಯಕರ ಪ್ರವಾಸ ಸಮಿತಿ ಸಭೆ; ಮಹತ್ವದ ವಿಚಾರಗಳ ಚರ್ಚೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.