ಆನೇಕಲ್: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಪೂರ್ವ, ಅಧ್ಯಕ್ಷ-ಸದಸ್ಯರ ಅನುಪಸ್ಥಿತಿಯಲ್ಲಿ ಕುಂಠಿತಗೊಂಡಿರುವ ಯೋಜನೆಗಳ ವಿಳಂಬಕ್ಕೆ ವೇಗ ಹೆಚ್ಚಿಸಲು ಇಂದು ತಾಲೂಕು ಪಂಚಾಯ್ತಿಯಲ್ಲಿ ಸಭೆ ನಡೆಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಥಾನದ ಅಧಿಕಾರದಲ್ಲಿರುವ ಆಡಳಿತಾಧಿಕಾರಿ ತಂಡಕ್ಕೆ ಅಧ್ಯಕ್ಷರ ಕಾರ್ಯವ್ಯಾಪ್ತಿ ಗೊತ್ತಿಲ್ಲದಿರುವುದರಿಂದ ಯೋಜನೆಗಳ ಮುಂದುವರಿಕೆ ಕುರಿತು ಹಣಕಾಸು ಚೆಕ್ ವಿನಿಮಯ ಇತ್ಯಾದಿ ಅಧಿಕಾರದ ಪರಿಚಯ ನೀಡಿ ಯೋಜನೆಗಳ ನಿರ್ವಹಣೆ ಕುರಿತು ತರಬೇತಿ ನೀಡಲಾಯಿತು.
ಇನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ದೇವರಾಜ್ ಗೌಡ, ತಹಶೀಲ್ದಾರ್, ಸಿ ಮಹದೇವಯ್ಯ ಮುಂತಾದ ಅಧಿಕಾರಿಗಳ ಸಮ್ಮುಖದಲ್ಲಿ ಯೋಜನೆಗಳ ರೂಪುರೇಷೆಗಳನ್ನು ಪರಿಚಯಿಸಿ ಕೂಡಲೇ ಯೋಜನೆಗಳ ವೇಗ ಹೆಚ್ಚಿಸಲು ಆದೇಶಿಸಿದರು.