ಬೆಂಗಳೂರು: ಲಾಕ್ಡೌನ್ ಪ್ರಾರಂಭವಾದ ದಿನದಿಂದ ನಿತ್ಯ ಹಗಲಿರುಳು ಸಾರ್ವಜನಿಕರಿಗಾಗಿ ಸೇವೆ ಮಾಡುತ್ತಿರುವ ಪೊಲೀಸರಿಗೆ ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ಚೆಕ್ ಅಪ್ ಕಾರ್ಯಕ್ರಮವನ್ನು ಈಶಾನ್ಯ ವಿಭಾಗ ವ್ಯಾಪ್ತಿಯಲ್ಲಿ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಡಿಸಿಪಿ ಭೀಮಾಶಂಕರ್ ಗುಳೇದ್, ಯಲಹಂಕ ಶಾಸಕ ವಿಶ್ವನಾಥ್ ಕೂಡ ಹೆಲ್ತ್ ಕ್ಯಾಂಪ್ನಲ್ಲಿ ಭಾಗಿಯಾಗಿದ್ದರು. ಯಲಹಂಕ ,ನ್ಯೂ ಟೌನ್,ವಿದ್ಯಾರಣ್ಯಪುರ, ಕೊಡಿಗೆಹಳ್ಳಿ, ಅಧಿಕಾರಿ ಮತ್ತು ಸಿಬ್ಬಂದಿ, ಸಾರ್ವಜನಿಕರು, ಸ್ವಯಂ ಸೇವಕರು ಒಟ್ಟು 300 ಜನರಿಗೆ ಚಿಕಿತ್ಸೆ ನಡೆಸಿದ್ದು ಕಾರ್ಯಕ್ರಮದಲ್ಲಿ ವೈದ್ಯರು ಪೊಲೀಸರಿಗೆ ಕೆಲ ಕಿವಿ ಮಾತು ತಿಳಿಸಿದ್ದಾರೆ.
ಕೊರೊನಾ ಹಾಟ್ಸ್ಪಾಟ್ನಲ್ಲಿ ಹೆಚ್ಚು ಎಚ್ಚರ ವಹಿಸಿ, ರೋಗ ನಿರೋಧಕ ಆಹಾರವನ್ನು ಸೇವಿಸಿ , ರೋಗ ಯಾವಾಗ ಹೇಗೆ ಬರುತ್ತಿದೆ ಅನ್ನೋದು ಗೊತ್ತಾಗಲ್ಲ. ಸೋಂಕಿತ ವ್ಯಕ್ತಿಗಳಿಂದ ದೂರ ಇರಿ ಎಂದಿದ್ದಾರೆ. ಇನ್ನು ಚೆಕ್ ಅಪ್ ನಂತರ ಎಂದಿನಂತೆ ಮತ್ತೆ ಸಿಬ್ಬಂದಿಗಳು ಕರ್ತವ್ಯಕ್ಕೆ ಮರಳಿದ್ದಾರೆ.