ETV Bharat / state

ನಾಳೆಯಿಂದ ಪಿಯು ಪರೀಕ್ಷೆ.. ಎಕ್ಸಾಂನಲ್ಲಿ ಅಕ್ರಮ ನಡೆಯದಂತೆ ಕ್ರಮ: ಸಚಿವ ಬಿ.ಸಿ.ನಾಗೇಶ್

ಪಿಯು ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ - ಪರೀಕ್ಷೆಯ ಅಕ್ರಮ ತಡೆಗೆ ಸೂಕ್ತ ಕ್ರಮ - ಕೋರ್ಟ್​ ಆದೇಶದಂತೆ ಸಿಇಟಿ ಫಲಿತಾಂಶ - ಬಿ.ಸಿ. ನಾಗೇಶ್​

b c nagesh
ಬಿ.ಸಿ. ನಾಗೇಶ್​
author img

By

Published : Mar 8, 2023, 5:43 PM IST

Updated : Mar 8, 2023, 6:40 PM IST

ಎಕ್ಸಾಂನಲ್ಲಿ ಅಕ್ರಮ ನಡೆಯದಂತೆ ಕ್ರಮ: ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ಈ ಬಾರಿಯೂ ಕಳೆದ ಸಾಲಿನಂತೆ ದ್ವಿತೀಯ ಪಿಯು‌ ಪರೀಕ್ಷೆಗೆ ಸಮವಸ್ತ್ರ ನೀತಿ ಜಾರಿಯಾಗಿದ್ದು, ಹಿಜಾಬ್ ಧರಿಸಿ ಬಂದರೆ ದ್ವಿತೀಯ ಪಿಯು ಪರೀಕ್ಷೆಗೆ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಮವಸ್ತ್ರ ನಿಯಮ ಪಾಲನೆ ಕಡ್ಡಾಯ. ಸಮವಸ್ತ್ರ ನಿಯಮ ಈಗಲೂ ಅನ್ವಯ. ಕಳೆದ ವರ್ಷದ ನಿಯಮವೇ ಈ ಬಾರಿಯೂ ಜಾರಿಯಲ್ಲಿರಲಿದೆ. ಆ ಮಕ್ಕಳು ಪರೀಕ್ಷೆಯಿಂದ ವಂಚಿತರಾಗುವುದು ಬೇಡ. ಕಳೆದ ವರ್ಷ 6 ವಿದ್ಯಾರ್ಥಿನಿಯರು ಹಿಜಾಬ್ ವಿವಾದದಿಂದ ಪರೀಕ್ಷೆ ಬರೆದಿಲ್ಲ. ಮಾಧ್ಯಮದ ಮೂಲಕ ಅವರಿಗೆ ಪರೀಕ್ಷೆ ಬರೆಯುವಂತೆ ಮನವಿ ಮಾಡಿಕೊಳ್ಳುತ್ತೇನೆ. ಸಮವಸ್ತ್ರದ ನಿಯಮ ಪಾಲಿಸಿ ಪರೀಕ್ಷೆಗೆ ಹಾಜರಾಗಿ ಎಂದು ಮನವಿ ಮಾಡಿದರು.

ಪಿಯು ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಕ್ರಮ: ನಾಳಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಟ್ಟು 7,26,195 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಲಾ ವಿಭಾಗದಲ್ಲಿ 2,34,815, ವಾಣಿಜ್ಯ 2,47,260, ವಿಜ್ಞಾನ ವಿಭಾಗದಲ್ಲಿ 2,44,120 ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದು ಸಚಿವರು ತಿಳಿಸಿದರು.

ಒಟ್ಟು 5,716 ಕಾಲೇಜುಗಳ ಪೈಕಿ 1,109 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 1,109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತ ದಳ, 525 ತಾಲೂಕು ಜಾಗೃತ ದಳ, 2,373 ವಿಶೇಷ ಜಾಗೃತ ದಳ ರಚಿಸಲಾಗಿದೆ. ಯಾವುದೇ ಅಕ್ರಮ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಮೊಬೈಲ್, ವಾಚ್ ತರುವುದನ್ನು ನಿಷೇಧಿಸಲಾಗಿದೆ. ವೈದ್ಯರ ಸಲಹಾ ಪತ್ರ ತರುವ ವಿಶೇಷಚೇತನ ಮಕ್ಕಳಿಗೆ ಪರೀಕ್ಷೆ ಬರೆಯಲು ಈ ಬಾರಿ ಹೆಚ್ಚು ಸಮಯ ನೀಡುತ್ತೇವೆ ಎಂದರು.

ಮಕ್ಕಳ ಭವಿಷ್ಯದಲ್ಲಿ ತುಂಬಾ ಪ್ರಮುಖವಾದದ್ದು ದ್ವಿತೀಯ ಪಿಯುಸಿ ಪರೀಕ್ಷೆ. ಎಲ್ಲ ರೀತಿಯ ತಯಾರಿ ಮಾಡಿಕೊಂಡು ಮೌಲ್ಯನಿರ್ಣಯ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಭಗವಂತ ಒಳ್ಳೆ ಬುದ್ಧಿ ಕೊಟ್ಟು‌ ಕಾಂಗ್ರೆಸ್‌ನವರು ಬಂದ್ ವಾಪಸ್ ಪಡೆದಿದ್ದಾರೆ. ಪ್ರತಿ ಪ್ರಶ್ನೆ ಪತ್ರಿಕೆಯಲ್ಲಿ 20 ಅಂಕಗಳ ಎಂಸಿಕ್ಯೂ ಮಾದರಿ ಪ್ರಶ್ನೆಗಳು ಇರುತ್ತವೆ. ಮೌಲ್ಯಮಾಪನ ಬಳಿಕ ಐದು ಅಂಕಕ್ಕಿಂತ ಕಡಿಮೆ ಆದರೂ ಮಾರ್ಕ್ಸ್ ಕಾರ್ಡ್‌ನಲ್ಲಿ ಎಂಟ್ರಿ ಮಾಡಿಕೊಡುತ್ತೇವೆ. ಇದು ಹೊಸದಾಗಿ ಜಾರಿ ಎಂದರು.

ಸಿಇಟಿ ಪರೀಕ್ಷೆಯನ್ನು ಅನೇಕರು ಬರೆದಿದ್ದರು. ಕೋರ್ಟ್ ಕೊಟ್ಟ ಡೈರಕ್ಷನ್ ಆದ ನಂತರ ಫೈನಲ್ ಲಿಸ್ಟ್ ಬಿಡಲಿದ್ದೇವೆ. 1:1 ಅಂತರದಲ್ಲಿ ರಿಸಲ್ಟ್ ಇರಲಿದೆ. ಇಲಾಖೆ ವೆಬ್ ಸೈಟ್​ನಲ್ಲಿ ಬಿಡುಗಡೆ ಆಗಲಿದೆ. ಮುಂದಿನ ಅಕಾಡೆಮಿಕ್ ವರ್ಷಕ್ಕೆ 13,600 ಶಿಕ್ಷಕರು ಸಿಗಲಿದ್ದಾರೆ ಎಂದರು.

ಡಿಕೆಶಿಗೆ ಜಾಮೀನು ಸಿಕ್ಕಾಗ ನಾವು ಸಪೋರ್ಟ್ ಮಾಡಿದ್ವಾ?: ಮಾಡಾಳ್‌‌ ಜಾಮೀನು ಬಗ್ಗೆ ವಿಪಕ್ಷಗಳ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಶಿವಕುಮಾರ್ ಜಾಮೀನು ಸಿಕ್ಕಾಗ ನಾವು ಸಪೋರ್ಟ್ ಮಾಡಿದ್ವಾ?. ಈ ರೀತಿಯ ಬೇಕಾದಷ್ಟು ಕೇಸ್‌ಗಳಲ್ಲಿ ಜಾಮೀನು ಸಿಕ್ಕಿದೆ. ಕೋರ್ಟ್ ತೀರ್ಪಿನ ಬಗ್ಗೆ ನಾವು ಮಾತನಾಡೋದು ಅಷ್ಟು ಸರಿಯಲ್ಲ ಎಂದು ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಪಿಯು ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ: 1 ಅಂಕದ 20 ಬಹುಮಾದರಿಯ ಪ್ರಶ್ನೆಗೆ ಆದ್ಯತೆ

Last Updated : Mar 8, 2023, 6:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.