ETV Bharat / state

ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಗಟ್ಟಿ MBBS ವಿದ್ಯಾರ್ಥಿನಿ ಸಾವು - ಗ್ಯಾಸ್ ಗೀಸರ್ ಸೋರಿಕೆಯಿಂದ ವಿದ್ಯಾರ್ಥಿನಿ ಸಾವು

ತಕ್ಷಣವೇ ವಿದ್ಯಾರ್ಥಿನಿ ಸಂಪದಾಳನ್ನು ಆಸ್ಪತ್ರೆಗೆ ಕರೆತಂದರೂ ಮಾರ್ಗಮಧ್ಯೆಯೇ ಆಕೆ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ..

MBBS ವಿದ್ಯಾರ್ಥಿನಿ ಸಾವು
MBBS student died
author img

By

Published : Sep 6, 2021, 8:46 PM IST

Updated : Sep 6, 2021, 10:58 PM IST

ಬೆಂಗಳೂರು : ಗ್ಯಾಸ್ ಗೀಸರ್​ ಸೋರಿಕೆಯಾಗಿ ಎಂಬಿಬಿಎಸ್​ ವಿದ್ಯಾರ್ಥಿನಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಗರದ ಮಹಾಲಕ್ಷ್ಮಿಲೇಔಟ್‌ನಲ್ಲಿ ನಡೆದಿದೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಪೊಲೀಸ್​

ಸಂಪದ (23) ಮೃತ ಯುವತಿ. ಈಕೆ ಅಂತಿಮ ವರ್ಷದ ಎಂಬಿಬಿಎಸ್​​​ ವ್ಯಾಸಂಗ ಮಾಡುತ್ತಿದ್ದಳು. ಸ್ನಾನಕ್ಕೆ ತೆರಳಿದ್ದ ವೇಳೆ ಗೀಸರ್​ನಿಂದ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ಉಸಿರುಗಟ್ಟಿ ಸ್ನಾನದ ಕೋಣೆಯಲ್ಲಿ ಕುಸಿದು ಬಿದ್ದಿದ್ದಳು.

ಸ್ನಾನಕ್ಕೆ ತೆರಳಿ 2 ಗಂಟೆ ಕಳೆದರೂ ಬಾತ್​​ರೂಮ್​ನಿಂದ ಹೊರಬಾರದೆ ಇದ್ದಾಗ ಅನುಮಾನದಿಂದ ಬಾತ್​ರೂಮ್​ ಬಾಗಿಲು ಒಡೆದು ನೋಡಿದಾಗ ಪ್ರಜ್ಞೆತಪ್ಪಿ ಬಿದ್ದಿರುವುದು ಕಂಡಿತ್ತು.

ತಕ್ಷಣವೇ ವಿದ್ಯಾರ್ಥಿನಿ ಸಂಪದಾಳನ್ನು ಆಸ್ಪತ್ರೆಗೆ ಕರೆತಂದರೂ ಮಾರ್ಗಮಧ್ಯೆಯೇ ಆಕೆ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಓದಿ: ಹಾಸನ: ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕ ಸಾವು

Last Updated : Sep 6, 2021, 10:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.