ETV Bharat / state

ಲಿಂಗಾಯತ ಸಮುದಾಯ ಸಿಡಿದೇಳುತ್ತೆ ಎಂದಾಗ ಬೊಮ್ಮಾಯಿಯನ್ನು ಸಿಎಂ ಮಾಡಿದ್ರು: ಎಂಬಿಪಿ - Etv Bharat Kannada

ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿ ಇದೀಗ ಅವರ ಮುಖಾಂತರ ಲಿಂಗಾಯತ ಸಮುದಾಯದ ಮತ ಪಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಎಂಬಿ ಪಾಟೀಲ್​
ಎಂಬಿ ಪಾಟೀಲ್​
author img

By

Published : Feb 28, 2023, 7:19 PM IST

Updated : Feb 28, 2023, 10:47 PM IST

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪದಲ್ಲಿ ಹುರುಳಿಲ್ಲ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದರು. ಇಂದು ಮಧ್ಯಾಹ್ನ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರುಗಳ ಸಭೆಗೆ ತೆರಳುವ ಮುನ್ನ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಕಾಂಗ್ರೆಸ್‌ನಿಂದ ಲಿಂಗಾಯತರಿಗೆ ಅವಮಾನ ಆಗಿದೆ ಎಂದು ಮೋದಿ ಆರೋಪ‌ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ ಹಾಗೂ ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಹೇಳಿದ್ದಾರೆ. ಆದರೆ ವೀರೇಂದ್ರ ಪಾಟೀಲ್​ ಆ ಸಂದರ್ಭದಲ್ಲಿ ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ರು. ಹೀಗಾಗಿ ರಾಜ್ಯವನ್ನು ಮುನ್ನಡೆಸಿಕೊಂಡು ಹೋಗುವುದು ಸಾಧ್ಯವಾಗ್ತಾ ಇರಲಿಲ್ಲ. ಆ ದಿಸೆಯಲ್ಲಿ ಬದಲಾವಣೆ ಮಾಡಲಾಯಿತು.

ಆದ್ರೆ ಯಡಿಯೂರಪ್ಪ ಅವರಿಗೆ ಏನ್ ಆಗಿತ್ತು? ಯಡಿಯೂರಪ್ಪನವರು ಹುಷಾರಾಗಿಯೇ ಇದ್ದಾರೆ ಅಲ್ವಾ? ಯಡಿಯೂರಪ್ಪರನ್ನು ಮೋದಿ ಯಾಕೆ ಸಿಎಂ ಸ್ಥಾನದಿಂದ ತೆಗೆದ್ರು. ಮೊದಲು ಆ ಪ್ರಶ್ನೆಗೆ ಉತ್ತರ ಕೊಡ್ಲಿ. ಯಡಿಯೂರಪ್ಪ ಅವರನ್ನು ತೆಗೆದು ಇನ್ನೊಬ್ಬ ಲಿಂಗಾಯತರನ್ನು ಸಿಎಂ ಮಾಡಿದ್ರು. ಅದು ಕೂಡಾ ಅವರ ಉದ್ದೇಶ ಇರಲಿಲ್ಲ. ಅವರ ಉದ್ದೇಶ ಬೇರೆ ಇತ್ತು. ಯಾವಾಗ ಲಿಂಗಾಯತ ಸಮುದಾಯ ಸಿಡಿದೇಳುವ ಸಂದರ್ಭ ಬಂತು, ತಿರುಗು ಬಾಣ ಆಗುತ್ತೆ ಅಂತ ಹೇಳಿ ಬೊಮ್ಮಾಯಿಯನ್ನು ಸಿಎಂ ಮಾಡಿದ್ರು. ಇದು ಜಗತ್ತಿಗೆ ಗೊತ್ತಿದೆ ಎಂದರು.

ಯಡಿಯೂರಪ್ಪರನ್ನು ಮೂಲೆ ಗುಂಪು ಮಾಡಿ, ಈಗ ಅವರು ನಿವೃತ್ತಿ ಆಗ್ತೀನಿ ಅಂತ ಹೇಳಿದ್ದಾರೆ. ಈಗ ಅವರ ಮುಖಾಂತರ ಮತ ಪಡೆಯಬೇಕು ಅಂತ ಹೇಳಿ ಪ್ರಯತ್ನ ನಡೆದಿದೆ. ಆದ್ರೆ ಲಿಂಗಾಯತರಿಗೆ ಎಲ್ಲವೂ ಗೊತ್ತಿದೆ. ಬಿಎಸ್​ವೈ ಮೂಲೆ ಗುಂಪು ಆಗಿದ್ದಾರೆ. ಮತ್ತೆ ಯಡಿಯೂರಪ್ಪ ಅವರನ್ನ ಸಿಎಂ ಮಾಡ್ತೀವಿ ಅಂತ ಘೋಷಣೆ ಮಾಡ್ಲಿ. ಬಿಎಸ್ವೈ ನೇತೃತ್ವದಲ್ಲಿ ಚುನಾವಣೆಗೆ ಹೋಗ್ತೀವಿ, ಅಧಿಕಾರಕ್ಕೆ ಬಂದ್ರೆ ಸಿಎಂ ಮಾಡ್ತೀವಿ ಅಂತ ಮೋದಿ ಮತ್ತು ಅವರ ಪಕ್ಷದವರು ಹೇಳಲಿ. ದೀಪ ಆರುವ ಮುನ್ನಾ ಬಹಳ ಬೆಳಗುತ್ತೆ ಅಲ್ವಾ? ಹಾಗೇ ಇದು, ಕಡೆ ಪ್ರಯತ್ನ ಲಿಂಗಾಯತರ ಮನ ಸೆಳೆಯೋಕೆ ಮಾಡುವ ಯತ್ನ. ಲಿಂಗಾಯತರು, ಮಠ ಮಾನ್ಯಗಳು ತಿಳಿದುಕೊಂಡಿವೆ. ಲಿಂಗಾಯತರು ಶಿಕ್ಷಣ ಪಡೆದಿದ್ದಾರೆ. ಲಿಂಗಾಯತರು ಬುದ್ದಿವಂತರು ಇದ್ದಾರೆ, ತಿಳಿದುಕೊಂಡಿದ್ದಾರೆ. ಮೋದಿ ಅವರ ನಾಟಕ ನಮ್ಮೆಲ್ಲರಿಗೂ ಅರ್ಥ ಆಗುತ್ತೆ ಎಂದು ಹೇಳಿದರು.

ಕಾಂಗ್ರೆಸ್​ನಲ್ಲಿ ಬಹಳಷ್ಟು ಲಿಂಗಾಯತ ನಾಯಕರು ಇದ್ದಾರೆ. ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ರಾಜಶೇಖರ್ ಪಾಟೀಲ್, ಶಾಮನೂರು ಶಿವಶಂಕರಪ್ಪ ಇದ್ದಾರೆ. 92 ವರ್ಷ ಆದ್ರೂ ಯುವಕರ ರೀತಿ ಇದ್ದಾರೆ. ಅವರಿಗೆ ಮತ್ತೆ ಟಿಕೆಟ್ ನೀಡ್ತೀವಿ. ಅಲ್ಲಂ ವೀರಭದ್ರಪ್ಪ ಇದ್ದಾರೆ. ಶರಣು ಪ್ರಕಾಶ್ ಪಾಟೀಲ್ ಇದ್ದಾರೆ. ಕಾಂಗ್ರೆಸ್​ನಲ್ಲಿ ಸಿಎಂ ಅಭ್ಯರ್ಥಿ ಅಂತ ಘೋಷಣೆ ಮಾಡುವ ಪದ್ದತಿ ಇಲ್ಲ. ನಾವು ಚುನಾವಣೆಯಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಬೇಕು. ಶಾಸಕಾಂಗ ಸಭೆ ಇರುತ್ತೆ. ಕೇಂದ್ರದಿಂದ ವೀಕ್ಷಕರು ಬರ್ತಾರೆ. ಶಾಸಕರಿಂದ ಅಭಿಪ್ರಾಯ ಪಡೆದು ಯಾರು ಸಿಎಂ ಆಗಬೇಕು ಅಂತ. ಎಐಸಿಸಿ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡ್ತಾರೆ ಎಂದರು.

ಜನರಿಗೆ ನಮ್ಮ ಸಾಧನೆ ತಿಳಿಸಬೇಕಿದೆ: ನನ್ನ ಪದಗ್ರಹಣ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ, ಬಿಜೆಪಿ ಸರ್ಕಾರದ ವೈಫಲ್ಯಗಳ ಮಾಹಿತಿಯುಳ್ಳ ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದೆವು. ಜಿಲ್ಲಾ ಸಮಿತಿಯಿಂದ ಬೂತ್ ಸಮಿತಿವರೆಗೆ ಸದಸ್ಯರನ್ನು ಹೊಂದಾಣಿಕೆ ಮಾಡಿ ಮನೆ ಮನೆಗೆ ಇದನ್ನು ತಲುಪಿಸಲಾಗುವುದು. ಬಿಜೆಪಿಯ ಅಪಪ್ರಚಾರಗಳು, ನಾವು ಮಾಡಿರುವ ಸಾಧನೆಗಳ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ತಲುಪಿಸಬೇಕು. ನಮ್ಮೆಲ್ಲಾ ಮುಖಂಡರು ಇಂದಿನ ಸಭೆಯಲ್ಲಿ ಉತ್ತಮ ಸಲಹೆ ನೀಡಿದ್ದಾರೆ.

ನಮ್ಮ ಪದಾಧಿಕಾರಿಗಳಿಗೆ ನಾಳೆಯೊಳಗಾಗಿ ನಿರ್ದಿಷ್ಟ ಜವಾಬ್ದಾರಿ ನೀಡುತ್ತೇವೆ. ಈ ಚುನಾವಣೆಯಲ್ಲಿ ನಮ್ಮ ಪ್ರಚಾರ ಸಮಿತಿ ಬಹಳ ಸಕ್ರಿಯವಾಗಿ ಜನರಿಗೆ ನಮ್ಮ ಸಾಧನೆ, ಬಿಜೆಪಿ ವೈಫಲ್ಯದ ಬಗ್ಗೆ ಮಾಹಿತಿ ನೀಡುತ್ತೇವೆ ಎಂಬ ಮಾಹಿತಿ ಒದಗಿಸಿದರು. ನಾವು ಜನರ ಭಾವನೆ ಕೆರಳಿಸುವ ಬದಲು ಅವರ ಬದುಕು ಕಟ್ಟಿಕೊಡಬೇಕಿದೆ. ಹೀಗಾಗಿ ಅನ್ನ, ಅಕ್ಷರ, ಆರೋಗ್ಯ, ಆಶ್ರಯ ಹಾಗೂ ಅಭಿವೃದ್ಧಿ ನಮ್ಮ ಮುಖ್ಯಘೋಷಣೆಯಾಗಿವೆ. ಈ ಐದು ಅಂಶಗಳನ್ನು ಇಟ್ಟುಕೊಂಡು ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಕನಕಪುರದಲ್ಲಿ ತಯಾರಾದ ಕುಕ್ಕರ್​​ಗಳು ಡುಬ್ಲಿಕೇಟು, ಬ್ಲಾಸ್ಟ್ ಆಗುತ್ತವೆ ಎಚ್ಚರಿಕೆಯಿಂದಿರಿ: ರಮೇಶ್ ಜಾರಕಿಹೊಳಿ

Last Updated : Feb 28, 2023, 10:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.