ETV Bharat / state

ಲಿಂಗಾಯತ ಹೋರಾಟದ ಬಗ್ಗೆ ಎಲ್ಲರಿಗೂ ತಪ್ಪು ಸಂದೇಶ ಹೋಗಿದೆ: ಎಂ.ಬಿ. ಪಾಟೀಲ್ ಸ್ಪಷ್ಟನೆ

author img

By

Published : Sep 3, 2021, 11:44 AM IST

Updated : Sep 3, 2021, 1:06 PM IST

ಬಳಿಕ ಚುನಾವಣೆ ಸಂದರ್ಭದಲ್ಲಿ ಲಿಂಗಾಯತ ಹೋರಾಟಕ್ಕೆ ರಾಜಕೀಯ ಬಣ್ಣ ಬಳಿಯಲಾಗಿತ್ತು. ಎಲ್ಲರೂ ಕೂಡಿ, ಸಮಗ್ರ ಚರ್ಚೆ ನಡೆಸಿ ಒಗ್ಗಟ್ಟಿನ ಅಭಿಪ್ರಾಯದೊಂದಿಗೆ ಮುನ್ನಡೆಯಲಾಗುವುದು ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

mb-patil-press-meet-about-lingayat-separate-religion-fight
ಎಂ.ಬಿ. ಪಾಟೀಲ್ ಸ್ಪಷ್ಟನೆ

ಬೆಂಗಳೂರು: ನಾನು ಯಾವುದೇ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಬಗ್ಗೆ ಹೇಳಿಕೆ ಕೊಟ್ಟಿಲ್ಲ, ಚುನಾವಣೆ ನಂತರ ಒಗ್ಗಟ್ಟಾಗಿ ಮುನ್ನಡೆಯೋಣ ಎಂದಷ್ಟೇ ಹೇಳಿದ್ದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು.

ಪ್ರತ್ಯೇಕ ಧರ್ಮದ ಸಂಬಂಧ ತಮ್ಮ ಹೇಳಿಕೆ ವಿವಾದದ ತಿರುವು‌‌ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಚುನಾವಣೆ ನಂತರ ಲಿಂಗಾಯತ-ವೀರಶೈವ ಸಮುದಾಯದ ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯುತ್ತೇವೆ‌ ಎಂದಿದ್ದೆ. ಹೋರಾಟ, ಕೂಗು, ಪ್ರತ್ಯೇಕತೆಯ ಭಾಷೆಯನ್ನು ಬಳಸಲೇ ಇಲ್ಲ. ಆದರೆ ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದರು.

ಈ ಹಿಂದೆ ಉಪ ಪಂಗಡವನ್ನು ಸೇರಿಸಿ ಧರ್ಮದ ಬೇಡಿಕೆ ಇಟ್ಟಿದ್ದೆವು. ಅಲ್ಲದೇ ಈ ಹಿಂದೆ ವೀರಶೈವ ಲಿಂಗಾಯತ ಬೇರೆ ಬೇರೆ ಮಾಡುವುದಾಗಿ ಅಪಪ್ರಚಾರ‌ ಮಾಡಲಾಗಿತ್ತು. ಮಾಧ್ಯಮಗಳಲ್ಲೂ ತಪ್ಪಾಗಿ ಅರ್ಥೈಸಲಾಗಿದೆ. ನಮ್ಮ ಗುರುಗಳು, ಸ್ವಾಮಿಗಳು ಎಲ್ಲರೂ ಕೂಡಿ ಚರ್ಚೆ ಮಾಡಿ ಸಮಾಜಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಮುನ್ನಡೆಯುತ್ತೇವೆ. ಆದರೆ ನಾವೆಲ್ಲರೂ ಕೂಡುತ್ತೇವೆ ಎಂಬ ನನ್ನ ಹೇಳಿಕೆ ಯಾಕೆ ಸಮಸ್ಯೆ ಸೃಷ್ಟಿಸಿದೆ ಎಂಬುದು ಗೊತ್ತಿಲ್ಲ. ಯಾವುದೇ ಪ್ರತ್ಯೇಕ ಧರ್ಮದ ಕೂಗು ಇಲ್ಲ, ಹೋರಾಟದ ಬಗ್ಗೆ ಯಾವುದೇ ಹೇಳಿಕೆ ಕೊಟ್ಟಿಲ್ಲ ಎಂದು ಎಂ.ಬಿ.ಪಾಟೀಲ್​ ಇದೇ ವೇಳೆ, ಸ್ಪಷ್ಟಪಡಿಸಿದರು.

ಎಂ.ಬಿ. ಪಾಟೀಲ್ ಸ್ಪಷ್ಟನೆ

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಬಣ್ಣ :

ಚುನಾವಣೆ ನಂತರ ಎಲ್ಲರೂ ಸೇರಿ ಮುಕ್ತ ಮನಸ್ಸಿನಿಂದ, ಎಲ್ಲರ ಜೊತೆ ಚರ್ಚೆ ಮಾಡಿ ಸಮಾಜಕ್ಕೆ ಒಳ್ಳೆಯದಾಗುವ ನಿರ್ಧಾರ ಕೈಗೊಳ್ಳುತ್ತೇವೆ. ಈ ನಿಟ್ಟಿನಲ್ಲಿ ತಪ್ಪು ಸಂದೇಶ ಹೋಗಿದೆ. ಲಿಂಗಾಯತ ವೀರಶೈವ ಎಲ್ಲರನ್ನೂ ಸೇರಿಸಿ ನಾವು ಮಾನ್ಯತೆ ಕೇಳುತ್ತಿದ್ದೇವೆ. ಆವತ್ತು ಗಡಿಬಿಡಿಯಿಂದ ಹೋರಾಟ ಮಾಡಿದ್ದೆವು, ಎಲ್ಲವನ್ನೂ ತರಾತುರಿಯಲ್ಲಿ ಮಾಡಲಾಗಿತ್ತು. ಚುನಾವಣೆ ಸಂದರ್ಭ ಅದಕ್ಕೆ ರಾಜಕೀಯ ಬಣ್ಣ ಬಳಿಯಲಾಗಿತ್ತು ಎಂದರು.

ನಮಗೆ ಮಾನ್ಯತೆ ಸಿಗಬೇಕು:

ಎಲ್ಲರೂ ಕೂಡಿ, ಸಮಗ್ರ ಚರ್ಚೆ ನಡೆಸಿ ಎಲ್ಲರ ಒಗ್ಗಟ್ಟಿನ ಅಭಿಪ್ರಾಯದೊಂದಿಗೆ ಮುನ್ನಡೆಯುತ್ತೇವೆ. ಪಕ್ಷಾತೀತವಾಗಿ, ರಾಜಕೀಯ ದುರೀಣರನ್ನು ಕೂರಿಸಿ ಸಮಾಲೋಚನೆ ಮೂಲಕ ನಮ್ಮಲ್ಲಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಂಡು ಮುನ್ನಡೆಯುತ್ತೇವೆ. ಶಿಕ್ಷಣ, ಉದ್ಯೋಗ ಹಾಗೂ ಮಠಗಳಿಗೆ ನೆರವು ಸಿಗುವ ನಿಟ್ಟಿನಲ್ಲಿ ಮಾನ್ಯತೆ ಸಿಗಬೇಕು. ಈಗ ನಾವು ಒಂದಾಗಲು ಮುಂದಾಗಿದ್ದೇವೆ. ಅದರಿಂದ ಯಾರಿಗಾದರೂ ಸಮಸ್ಯೆಯಾಗುತ್ತಾ? ನಮ್ಮ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಎಲ್ಲ 99 ಉಪಪಂಗಡದ ಸಮುದಾಯಕ್ಕೆ ಅನುಕೂಲ ಆಗುವ‌ ನಿಟ್ಟಿನಲ್ಲಿ ಚರ್ಚೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಲಿಂಗಾಯತ ಹೋರಾಟದ ಬಗ್ಗೆ ಸ್ಪಷ್ಟನೆ ನೀಡಿದ ಎಂ.ಬಿ. ಪಾಟೀಲ್

ಆದರೆ ಮಾಧ್ಯಮದಲ್ಲಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಚುನಾವಣೆ ಬಳಿಕ ಎಲ್ಲ ಪ್ರತಿಷ್ಠೆಯನ್ನು ಬದಿಗೊತ್ತಿ, ಪಾರದರ್ಶಕತೆಯಿಂದ ಸಮಾಲೋಚನೆ ನಡೆಸಿ ನಿರ್ಧಾರ ಮಾಡುತ್ತೇವೆ ಎಂದು ವಿವರಿಸಿದರು.

ಯಾವುದೇ ರಾಜಕೀಯ ಉದ್ದೇಶ ಇಲ್ಲ:

ನಮ್ಮ ಒಗ್ಗೂಡುವಿಕೆಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ನನ್ನದು ಯಾವುದೇ ರಾಜಕೀಯ ಅಜೆಂಡಾ ಕೂಡ ಇಲ್ಲ. ನಾವೆಲ್ಲರೂ ಸಾಮೂಹಿಕವಾಗಿ ಹೋರಾಟಕ್ಕೆ ತೆರಳುತ್ತೇವೆ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟು ಈ ಹೇಳಿಕೆಯನ್ನೂ ಕೊಟ್ಟಿಲ್ಲ. ನಮ್ಮ ಪಕ್ಷದಲ್ಲಿ ಸಿಎಂ ಹುದ್ದೆಯನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಕಾಂಗ್ರೆಸ್ ಪಕ್ಷಕ್ಕೂ ಈ ಹೋರಾಟಕ್ಕೂ ಯಾವುದೇ ಸಂಬಂಧವೂ ಇಲ್ಲ, ಪಕ್ಷಕ್ಕೆ ಯಾವುದೇ ಹಾನಿಯೂ ಆಗಿಲ್ಲ. ಸಾಮೂಹಿಕ ನಾಯಕತ್ವದಲ್ಲಿ, ನಾನೊಬ್ಬ ಕಾರ್ಯಕರ್ತನಾಗಿ ಈ ಸಂಬಂಧ ಮುನ್ನಡೆಯುತ್ತೇನೆ ಎಂದು ತಿಳಿಸಿದರು.

ಬಿಎಸ್​ವೈಗೂ ನಮಗೂ ಹೋಲಿಕೆ ಸಲ್ಲದು:

ಯಡಿಯೂರಪ್ಪರಿಗೆ ಪರ್ಯಾಯವಾಗಿ ಲಿಂಗಾಯತ ನಾಯಕನಾಗಿ ಬಿಂಬಿಸಲು ಹೊರಟಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರು ದೊಡ್ಡ ನಾಯಕರು. ಅವರನ್ನೂ ನಮ್ಮನ್ನೂ ಹೋಲಿಕೆ ಮಾಡಲು ಆಗುವುದಿಲ್ಲ. ನಾವು ಸೆಕೆಂಡ್ ಲೈನ್ ನಾಯಕರು, ಅವರು ಹಿರಿಯರಾಗಿದ್ದಾರೆ ಎಂದರು.

ನನ್ನ ಹೇಳಿಕೆ ಸಂಬಂಧ ಸಿದ್ದರಾಮಯ್ಯರಿಗೆ, ಡಿಕೆಶಿ ಅವರಲ್ಲಿ ಮಾತನಾಡಿದ್ದೇನೆ. ಅವರಿಗೆ ಈ ಹೇಳಿಕೆ ಬಗ್ಗೆ ಏನೂ ಗೊತ್ತೇ ಇಲ್ಲ. ಸಿದ್ದರಾಮಯ್ಯ ಅವರಿಗೆ ನನ್ನ ಹೇಳಿಕೆಯನ್ನು ಕಳುಹಿಸಿಕೊಟ್ಟಿದ್ದೇನೆ ಎಂದು ಇದೇ ವೇಳೆ ಪಾಟೀಲ್​ ಸ್ಪಷ್ಟಪಡಿಸಿದರು.

ಆವತ್ತು ತಾಂತ್ರಿಕ ಕಾರಣದಿಂದ ಲಿಂಗಾಯತ ಪದವನ್ನು ಮಾತ್ರ ಬಳಸಿ ಮುಂದೆ ಹೋದೆವು. ನಾವು ಲಿಂಗಾಯತ ಹಾಗೂ ವೀರಶೈವವು ಪ್ರತ್ಯೇಕ ಎಂದು ಬಿಂಬಿಸಿಲ್ಲ. ಪ್ರತ್ಯೇಕತೆಯ ಹೋರಾಟ ಸ್ವಾತಂತ್ರ್ಯ ಪೂರ್ವದಲ್ಲೂ ಇದೆ. ಇದು ಈಗಿನ ಕೂಗಲ್ಲ. ಈ ಹೋರಾಟದಿಂದ ಕಾಂಗ್ರೆಸ್​ಗೆ ಯಾವ ಸ್ಥಾನವೂ ಬಂದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಬೆಳಗಾವಿ: ಮನೆ ಮುಂದೆ ಭಗವಾಧ್ವಜ ಏರಿಸಿ MES ಪುಂಡರ ಕಿರಿಕ್

Last Updated : Sep 3, 2021, 1:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.