ETV Bharat / state

ನಗರದ ಮಹತ್ವದ ಸಭೆ-ಕಾರ್ಯಕ್ರಮಗಳಿಗೆ ಮೇಯರ್ ಗೈರು: ಪ್ರತಿಪಕ್ಷಗಳ ಟೀಕೆ

author img

By

Published : Jun 22, 2020, 11:31 PM IST

ಕೊರೊನಾ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ನಡೆಸಲಾಯಿತು. ಆದ್ರೆ ಈ ಸಭೆಗಳಿಗೆ ಮೇಯರ್ ಗೌತಮ್ ಕುಮಾರ್ ಗೈರಾಗಿರುವುದಕ್ಕೆ ಪ್ರತಿಪಕ್ಷದ ನಾಯಕ ಅಬ್ದುಲ್ ವಾಜಿದ್ ಟೀಕಿಸಿದ್ದಾರೆ.

ಬೆಂಗಳೂರು ಮೇಯರ್ ಗೌತಮ್ ಕುಮಾರ್
ಬೆಂಗಳೂರು ಮೇಯರ್ ಗೌತಮ್ ಕುಮಾರ್

ಬೆಂಗಳೂರು: ನಗರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿವೆ. ಈ ವೇಳೆ ಸಿಎಂ ಎಲ್ಲಾ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ಆದರೆ‌ ಮಹತ್ವದ ಸಭೆಗೆ ಬೆಂಗಳೂರು ಮೇಯರ್ ಗೌತಮ್ ಕುಮಾರ್ ಗೈರಾಗಿರುವುದಕ್ಕೆ ಪ್ರತಿಪಕ್ಷದ ನಾಯಕ ಅಬ್ದುಲ್ ವಾಜಿದ್ ಟೀಕಿಸಿದ್ದಾರೆ.

ಬೆಂಗಳೂರು ಮೇಯರ್ ಗೌತಮ್ ಕುಮಾರ್
ಬೆಂಗಳೂರು ಮೇಯರ್ ಗೌತಮ್ ಕುಮಾರ್

ಬಿಬಿಎಂಪಿ ಮೇಯರ್ ಆಗಿ, ನಗರದ ಕೋವಿಡ್ ಪರಿಸ್ಥಿತಿ ಬಗ್ಗೆ ಅರಿವಿರಬೇಕು.‌ ಸಮರ್ಥವಾಗಿ ನಿಭಾಯಿಸಲು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆದ್ರೆ ಮೇಯರ್ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಬಿಜೆಪಿ ಪಕ್ಷವೇ ಮೇಯರ್​​ರನ್ನು ಸಭೆಗೆ ಕರೆಯದೇ ಬಿಬಿಎಂಪಿ ಆಡಳಿತವನ್ನು ಕಡೆಗಣಿಸಿರಬೇಕು.

ಇಲ್ಲವೇ ಸಭೆಗೆ ಹಾಜರಾಗದೇ ಮೇಯರ್ ಗೌತಮ್ ಕುಮಾರ್ ಅವರೇ ಬೇಜವಾಬ್ದಾರಿ ತೋರಿಸಿರಬೇಕು. ಮಾಸ್ಕ್ ಡೇ ದಿನದ ಆಚರಣೆಗೂ ಗೈರಾಗಿದ್ದರು. ಅಲ್ಲದೇ ಬಜೆಟ್ ಅನುಮೋದನೆಯಾಗಿ ಒಂದು ತಿಂಗಳಾದರೂ ಬಜೆಟ್ ಪುಸ್ತಕ ಬಿಡುಗಡೆಯಾಗಿಲ್ಲ ಎಂದು ದೂರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.