ಬೆಂಗಳೂರು : ಬಿಬಿಎಂಪಿ ಪಶ್ಚಿಮ ವಲಯದ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಕೋವಿಡ್ ಕಮಾಂಡ್ ಸೆಂಟರ್‌ಗೆ ಮೇಯರ್ ಗೌತಮ್ ಕುಮಾರ್ ಭೇಟಿ ನೀಡಿ ಪರಿಶೀಲ ನಡೆಸಿದರು. ಜಂಟಿ ಆಯುಕ್ತ ಚಿದಾನಂದ್, ಆರೋಗ್ಯಾಧಿಕಾರಿ ಮನೋರಂಜನ್ ಹೆಗ್ಡೆ ಆಯುಕ್ತರಿಗೆ ಸಾಥ್ ನೀಡಿದ್ರು.
ಈ ವೇಳೆ ಮೇಯರ್, ಹೋಂ ಐಸೋಲೇಶನ್ ಮಾಡುವ ವ್ಯವಸ್ಥೆ, ಪ್ರಥಮ ಸಂಪರ್ಕಿತರನ್ನು ಪತ್ತೆ ಹಚ್ಚುವುದು ಮತ್ತು ತಪ್ಪು ವಿಳಾಸ ನೀಡಿ ನಾಪತ್ತೆಯಾಗುವವರನ್ನು ಪತ್ತೆ ಹಚ್ಚಲು ಕ್ರಮ ವಹಿಸುವಂತೆ ಸೂಚಿಸಿದರು. ಬಳಿಕ ಯಲಹಂಕ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ, ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಸೋಂಕು ಹೆಚ್ಚಾಗದಂತೆ ಕ್ರಮವಹಿಸಲು ಸೂಚನೆ ನೀಡಿದರು. ಇದೇ ವೇಳೆ ನಗರದ ಚಾಲುಕ್ಯ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಬಸವಣ್ಣ ಅನುಭವ ಮಂಟಪದ ಪರಿಕಲ್ಪನೆಯ ಕಾಮಗಾರಿಯನ್ನು ವೀಕ್ಷಿಸಿದರು. ಅಶ್ವಾರೂಢ ಬಸವಣ್ಣ, ಅರ್ಧಚಂದ್ರಾಕೃತಿಯ ಬೃಹತ್ ಗೋಡೆ ನಿರ್ಮಾಣ, ವಿದ್ಯುತ್ ದೀಪಗಳು, ಶಿಲಾಸ್ಥಂಬಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಉದ್ಘಾಟಿಸಲಾಗುವುದು ಎಂದರು.