ಬೆಂಗಳೂರು: ನಗರದಲ್ಲಿ ಬಾಯ್ತೆರೆದು ಬಲಿಗಾಗಿ ಕಾಯುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಖುದ್ದು ರಸ್ತೆಗಿಳಿದು ಕೆಲಸ ಮಾಡುತ್ತಿರುವ ನಗರ ಸಂಚಾರ ಪೊಲೀಸರ ಕಾರ್ಯವೈಖರಿ ಬಗ್ಗೆ ಮೇಯರ್ ಗಂಗಾಂಬಿಕೆ ಪ್ರತಿಕ್ರಿಯೆ ನೀಡಿದ್ದಾರೆ.
ಪೊಲೀಸರಿಗೆ ಹಲವಾರು ಒತ್ತಡ, ಇತರೆ ಕೆಲಸಗಳೇ ಹೆಚ್ಚಿರುತ್ತವೆ. ಈ ಮಧ್ಯೆ ಅವರು ರಸ್ತೆಗುಂಡಿಗಳನ್ನು ಮುಚ್ಚುವುದು ಬೇಡ. ಅದು ನಮ್ಮ ಕೆಲಸವಾಗಿದ್ದು, ನಾವೇ ಮಾಡುತ್ತೇವೆ. ಹೀಗಾಗಿ ಪೊಲೀಸರು ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಕೂಡಲೇ ಕೈ ಬಿಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.