ETV Bharat / state

ಬೆಂಗಳೂರು ಯುವತಿಯನ್ನ ವರಿಸಿದ್ದ ಐವರಿಕೋಸ್ಟ್ ಪ್ರಜೆ.. ಮದುವೆ ಹಿಂದಿತ್ತು ಮಾದಕ ದಂಧೆಯ ಮಾಸ್ಟರ್ ಪ್ಲಾನ್! - Ivaricost Citizen married Bangalore Young Woman

ಬೆಂಗಳೂರಿನಲ್ಲಿ ಮಾದಕ ಸರಬರಾಜು ದಂಧೆ ನಡೆಸುವ ಸಲುವಾಗಿ ಬೆಂಗಳೂರು ಮೂಲದ ಯುವತಿಯನ್ನು ವರಿಸಿದ ಐವರಿಕೋಸ್ಟ್ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಬೆಂಗಳೂರು ಯುವತಿಯನ್ನ ವರಿಸಿದ್ದ ಐವರಿಕೋಸ್ಟ್ ಪ್ರಜೆ

author img

By

Published : Mar 6, 2022, 8:04 PM IST

ಬೆಂಗಳೂರು: ನಗರದಲ್ಲಿ ಮಾದಕ ಸರಬರಾಜು ದಂಧೆ ನಡೆಸುವುದಕ್ಕೆ ಅನುಕೂಲವಾಗಲಿ ಎಂದು ಇಲ್ಲಿಯ ಯುವತಿಯನ್ನೇ ವರಿಸಿ ಅಕ್ರಮ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನ ಸಿದ್ಧಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನ ಐವರಿಕೋಸ್ಟ್ ಮೂಲದ ಡೇನಿಯಲ್ ಜಾ ಎಂದು ಗುರುತಿಸಲಾಗಿದೆ.

ಬೆಂಗಳೂರು ಮೂಲದ ಯುವತಿಯೊಬ್ಬಳನ್ನ ಪ್ರೀತಿಸಿ ವಿವಾಹವಾಗಿ ಭೈರಸಂದ್ರದಲ್ಲಿ ವಾಸ್ತವ್ಯ ಹೂಡಿದ್ದ ಆರೋಪಿ, ವಿದೇಶದಿಂದ ಡ್ರಗ್ಸ್ ತಂದು ರಾಜಾರೋಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾರಂಭಿಸಿದ್ದ.

ಇದನ್ನೂ ಓದಿ: ಒಂದೇ ಕಡೆ 15 ವರ್ಷದಿಂದ ಮನೆಗೆಲಸ, ಚಿನ್ನ ಕದ್ದು ಸಿಕ್ಕಿಬಿದ್ದ ಮಹಿಳೆ.. ಕ್ಯಾಮರಾ ಎಗರಿಸಿದ ಚಾಲಾಕಿಯೂ ಅಂದರ್​

ಮಾರ್ಚ್ 4ರಂದು ಭೈರಸಂದ್ರ ವಾಟರ್ ಟ್ಯಾಂಕ್ ಬಳಿ ಮಾದಕ ಮಾತ್ರೆಗಳ ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನ ಸಿದ್ಧಾಪುರ ಠಾಣಾ ಪೊಲೀಸರು ಬಂಧಿಸಿದ್ದು, 10.7ಗ್ರಾಂ ತೂಕದ ಮಾತ್ರೆಗಳು, ಒಂದು ಬೈಕ್, ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಆರೋಪಿ ಕಳೆದ ವರ್ಷವೂ ಮಾದಕ ಸರಬರಾಜು, ವಿದೇಶಿ ಕಾಯ್ದೆ ಉಲ್ಲಂಘನೆ ಆರೋಪದಡಿ ರಾಮಮೂರ್ತಿ ನಗರ ಠಾಣಾ ಪೊಲೀಸರಿಂದ ಬಂಧಿತನಾಗಿರುವುದು ತಿಳಿದುಬಂದಿದೆ. ಸದ್ಯ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.