ETV Bharat / state

ಬಿ.ಎಲ್ ಸಂತೋಷ್ ಭೇಟಿ ಮಾಡಿದ ಮಸ್ಕಿ, ಬಸವಕಲ್ಯಾಣ ಟಿಕೆಟ್ ಆಕಾಂಕ್ಷಿಗಳು - ಬಸವಕಲ್ಯಾಣ ಟಿಕೆಟ್ ಆಕಾಂಕ್ಷಿ ಶರಣು ಸಲಗರ್

ನಗರದ ಖಾಸಗಿ ಹೋಟೆಲ್​ನಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಸಿದ್ದತೆ ಕುರಿತು ಸಭೆ ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಪ್ರಮುಖರು ಹಾಜರಿದ್ದರು. ಈ ಸಭೆಯಲ್ಲಿ ಮಸ್ಕಿ ಟಿಕೆಟ್ ಆಕಾಂಕ್ಷಿಯಾದ ಪ್ರತಾಪ್ ಗೌಡ ಪಾಟೀಲ್ ಮತ್ತು ಬಸವಕಲ್ಯಾಣ ಡಿಕೆಟ್ ಆಕಾಂಕ್ಷಿ ಶರಣು ಸಲಗರ್ ಕಾಣಿಸಿಕೊಂಡರು.

ಮಸ್ಕಿ, ಬಸವಕಲ್ಯಾಣ ಟಿಕೆಟ್ ಆಕಾಂಕ್ಷಿಗಳು
ಮಸ್ಕಿ,ಬಸವಕಲ್ಯಾಣ ಟಿಕೆಟ್ ಆಕಾಂಕ್ಷಿಗಳು
author img

By

Published : Nov 24, 2020, 1:48 AM IST

Updated : Nov 24, 2020, 2:20 AM IST

ಬೆಂಗಳೂರು: ಮಸ್ಕಿ ಹಾಗೂ ಬಸವಕಲ್ಯಾಣ ಉಪ ಚುನಾವಣಾ ಟಿಕೆಟ್ ಆಕಾಂಕ್ಷಿಗಳು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸಮ್ಮುಖದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಸಿದ್ದತೆ ಕುರಿತು ಸಭೆ ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಪ್ರಮುಖರು ಹಾಜರಿದ್ದರು. ಈ ಸಭೆಯಲ್ಲಿ ಮಸ್ಕಿ ಟಿಕೆಟ್ ಆಕಾಂಕ್ಷಿಯಾದ ಪ್ರತಾಪ್ ಗೌಡ ಪಾಟೀಲ್ ಮತ್ತು ಬಸವಕಲ್ಯಾಣ ಟಿಕೆಟ್ ಆಕಾಂಕ್ಷಿ ಶರಣು ಸಲಗರ್ ಕಾಣಿಸಿಕೊಂಡರು.

ಮಸ್ಕಿ, ಬಸವಕಲ್ಯಾಣ ಟಿಕೆಟ್ ಆಕಾಂಕ್ಷಿಗಳು
ಈಗಾಗಲೇ ಮಸ್ಕಿ ಕ್ಷೇತ್ರಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಪ್ರತಾಪ್ ಗೌಡ ಪಾಟೀಲ್​ಗೆ ನೀಡಬೇಕು ಎಂದು ಪಕ್ಷದ ರಾಜ್ಯ ಕೋರ್ ಕಮಿಟಿ ನಿರ್ಧರಿಸಿದ್ದು, ಅವರೊಬ್ಬರ ಹೆಸರನ್ನು ಮಾತ್ರ ಕೇಂದ್ರ ಸಮಿತಿಗೆ ಶಿಫಾರಸ್ಸು ಮಾಡಲು ನಿರ್ಧರಿಸಿದೆ. ಇನ್ನು ಬಸವ ಕಲ್ಯಾಣ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಅದರಲ್ಲಿ ಪ್ರಮುಖವಾಗಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಹಾಗೂ ಯುವ ಮುಖಂಡ ಶರಣು ಸಲಗರ್ ಪ್ರಮುಖರಾಗಿದ್ದಾರೆ.

ಬಸವಕಲ್ಯಾಣಕ್ಕೆ ಶಿರಾ ಕ್ಷೇತ್ರದ ತಂತ್ರ ಅನುಸರಿಸಲು ಮುಂದಾಗಿರುವ ಕಾರಣ ಯುವ ನಾಯಕ ಶರಣು ಸಲಗರ್ ಪರ ನಾಯಕರ ಒಲವಿದೆ. ಲಾಕ್ ಡೌನ್ ಸಮಯದಲ್ಲಿ ಅವರು ಜನರ ನೆರವಿಗೆ ಧಾವಿಸಿದ್ದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಕೆಲ ನಾಯಕರ ಸೂಚನೆ ಮೇರೆಗೆ ಈ ಇಬ್ಬರು ಟಿಕೆಟ್ ಆಕಾಂಕ್ಷೆಗಳು ಸಭೆ ನಡೆದ ಸ್ಥಳಕ್ಕೆ ಬಂದಿದ್ದರು ಎನ್ನಲಾಗಿದೆ.

ಈ ಇಬ್ಬರು ಆಕಾಂಕ್ಷಿಗಳ ಬಗ್ಗೆ ಬಿ.ಎಲ್ ಸಂತೋಷ್ ಗಮನಕ್ಕೂ ತರಲಾಗಿದ್ದು, ಮಸ್ಕಿ ಕ್ಷೇತ್ರದಲ್ಲಿ ಅನಿವಾರ್ಯ ಆಯ್ಕೆ ಇದೆ. ಹಾಗಾಗಿ ಅಲ್ಲಿನ ಅಭ್ಯರ್ಥಿ ಆಯ್ಕೆ ಬಗ್ಗೆ ಹೆಚ್ಚು ಸಮಾಲೋಚನೆ ನಡೆಯಲಿಲ್ಲ. ಆದರೆ ಶರಣು ಸಲಗರ್ ಬಗ್ಗೆ ಪ್ರಸ್ತಾಪಿಸಿ ಅವರನ್ನು ಪರಿಚಯ ಮಾಡಿಕೊಡಲಾಯಿತು ಎನ್ನಲಾಗುತ್ತಿದೆ. ಸಂತೋಷ್ ಭೇಟಿಗಾಗಿಯೇ ಈ ಇಬ್ಬರು ಆಕಾಂಕ್ಷಿಗಳು ಸಭೆ ನಡೆದ ಸ್ಥಳಕ್ಕೆ ಆಗಮಿಸಿದ್ದರು ಎನ್ನಲಾಗುತ್ತಿದೆ.

Last Updated : Nov 24, 2020, 2:20 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.