ETV Bharat / state

ಹುತಾತ್ಮ ಅರಣ್ಯ ರಕ್ಷಕರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ: ಸಿಎಂ ಬೊಮ್ಮಾಯಿ

ಹುತಾತ್ಮ ಅರಣ್ಯ ರಕ್ಷಕರ ಕುಟುಂಬಕ್ಕೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು 30 ಲಕ್ಷದಿಂದ 50 ಲಕ್ಷ ರೂ.ಗೆ ಏರಿಕೆ ಮಾಡುವುದಾಗಿ ಹುತಾತ್ಮರಿಗೆ ಗೌರವ ಸಲ್ಲಿಕೆ‌ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

CM Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌
author img

By

Published : Sep 11, 2022, 1:34 PM IST

ಬೆಂಗಳೂರು: ಹುತಾತ್ಮ ಅರಣ್ಯ ರಕ್ಷಕರ ಕುಟುಂಬಕ್ಕೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು 50 ಲಕ್ಷ ರೂ‌ ಗೆ ಏರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಿಸಿದ್ದಾರೆ. ಇಂದು ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ 'ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ 2022' ರಲ್ಲಿ ಭಾಗವಹಿಸಿ ಮಹತ್ವದ ಘೋಷಣೆ ಮಾಡಿದ್ದಾರೆ.

ಈ ವರ್ಷ ಅರಣ್ಯ ಹೆಚ್ಚಿಸಲು ‌ವಿಶೇಷ‌ ಕಾರ್ಯಕ್ರಮಗಳನ್ನ‌ು ಇಲಾಖೆ‌ ಮಾಡಿದೆ. ಅರಣ್ಯ ಇಲಾಖೆಯ ಸೇವೆಗೆ ಅಭಿನಂದನೆ ಸಲ್ಲಿಸುತ್ತೇನೆ. ಶೇ. 21ರಷ್ಟಿರುವ ಅರಣ್ಯವನ್ನ‌ು ಶೇ.30 ಕ್ಕೆ ಹೆಚ್ಚಿಸುವುದು ನಮ್ಮ ಗುರಿ. ಬಂಜರು ಭೂಮಿ, ‌ಗುಡ್ಡ‌ಗಾಡುಗಳಲ್ಲಿ‌ ಗಿಡ‌ಮರ ಬೆಳೆಸಬೇಕು ಎಂದು ಸಿಎಂ ಮನವಿ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಮನುಷ್ಯ-ಪ್ರಾಣಿ ಸಂಘರ್ಷ ಕಡಿಮೆ ಮಾಡಬೇಕಿದೆ. ಮನುಷ್ಯ ಕಾಡಲ್ಲಿ ಹೆಚ್ಚು ಇದ್ದಷ್ಟೂ ಪ್ರಾಣಿಗಳು ಹೊರಗೆ ಬರುತ್ತವೆ. ಅರಣ್ಯ ಇಲಾಖೆ ಈ ಸಂಘರ್ಷ‌ ಕಡಿಮೆ ಮಾಡುವತ್ತ ಗಮನ ಕೊಡಬೇಕು. ಆನೆ-ಮಾನವ ಸಂಘರ್ಷ ಹೆಚ್ಚಿದೆ. ಆನೆಗಳು ಜಮೀನಿಗೆ ಬಾರದಂತೆ ತಡೆಯಲು ಹೊಸ ವಿಧಾನಗಳ ಅಳವಡಿಕೆಗೆ 100 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಉಮೇಶ್ ಕತ್ತಿಯವರನ್ನು ಸ್ಮರಿಸಿಕೊಳ್ಳುತ್ತೇನೆ ಎಂದರು.

ಬಂಡೀಪುರದಲ್ಲಿ ಕತ್ತಿಯವರು ಹೊಸ ವಿಧಾನಕ್ಕೆ ಚಾಲನೆ ಕೊಟ್ಟಿದ್ದರು. ಇತ್ತೀಚಿನ ದಿನಗಳಲ್ಲಿ ಇಡೀ ಫಾರೆಸ್ಟ್ ರೇಂಜ್ ಓಡಾಡಿದ ಸಚಿವರು ಅಂದರೆ ಅದು ಉಮೇಶ್ ಕತ್ತಿ. ಕತ್ತಿಯವರು ಅರಣ್ಯಾಧಿಕಾರಿಗಳ ಮೇಲೆ ಯಾವುದೇ ಒತ್ತಡ ಹಾಕುತ್ತಿರಲಿಲ್ಲ. ಅವರು ಇನ್ನಷ್ಟು ವರ್ಷ ನಮ್ಮ ಜತೆ ಇರಬೇಕಿತ್ತು. ಜನಸೇವೆ ಮಾಡಬೇಕಿತ್ತು ಎಂದು ಸ್ಮರಿಸಿದರು.

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ವೇಳೆ ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿಯವರಿಗೆ ಶ್ರದ್ಧಾಂಜಲಿ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಿಎಂ ಬೊಮ್ಮಾಯಿ ದಿ.ಉಮೇಶ್ ಕತ್ತಿ ಅವರ ಅವಧಿಯಲ್ಲಿ ಇಲಾಖೆಯ ಸಾಧನೆಗಳ ಕುರಿತು ಕಿರುಹೊತ್ತಿಗೆ ಬಿಡುಗಡೆ ಮಾಡಿದರು.

ಇದನ್ನೂ ಓದಿ: ತಾಕತ್ತಿದ್ದರೆ ನಮ್ಮ ಗೆಲುವು ತಡೆಯಿರಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಕಾಂಗ್ರೆಸ್​​ಗೆ ಸಿಎಂ ಸವಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.