ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿದ್ದ ಬಾರ್ ಮಾಲೀಕನ ಶೂಟೌಟ್ ಪ್ರಕರಣದ ತನಿಖೆ ಚುರುಕುಗೊಂಡಿದೆ.
ಇಲ್ಲಿನ ಡುಯೆಟ್ ಬಾರ್ ಎದುರು ಕಳೆದ ರಾತ್ರಿ 9 ಗಂಟೆ 9 ನಿಮಿಷಕ್ಕೆ ಮನೀಶ್ ಶೆಟ್ಟಿ ಮೇಲೆ ಫೈರಿಂಗ್ ದುಷ್ಕರ್ಮಿಗಳ ತಂಡ ಫೈರಿಂಗ್ ನಡೆಸಿ ಪರಾರಿಯಾಗಿತ್ತು. ಇದೀಗ ಪೊಲೀಸರು ಆರೋಪಿಗಳ ಚಲನವಲನಗಳ ಬಗ್ಗೆ ತನಿಖೆೆ ನಡೆಸುತ್ತಿದ್ದಾರೆ. ಸಂಜೆ 7 ಗಂಟೆಯಿಂದಲೇ ಹೊಂಚು ಹಾಕಿ ಕುಳಿತಿದ್ದ ಮೂವರು ಪಾತಕಿಗಳು ಎರಡು ಬೈಕ್ನಲ್ಲಿ ಬಂದಿದ್ದರು. ಬಾರ್ ಬಳಿ ಸುಮಾರು 9 ಗಂಟೆ 9 ನಿಮಿಷಕ್ಕೆ ಬಂದ ಮನೀಶ್ ಮೇಲೆ ಈ ತಂಡ ಸಿಂಗಲ್ ಬ್ಯಾರಲ್ ಗನ್ನಿಂದ ಗುಂಡು ಹಾರಿಸಿದೆ. ಅಷ್ಟೇ ಅಲ್ಲದೆ, ಮನೀಶ್ ಮೇಲೆ ಚಾಕುವಿನಿಂದಲೂ ದಾಳಿ ನಡೆಸಿದ್ದಾರೆ.
ಈ ಘಟನೆಯಲ್ಲಿ ಮನೀಶ್ ಸಾವನ್ನಪ್ಪಿದ್ದಾನೆ ಎಂದು ಖಚಿತಪಡಿಸಿಕೊಂಡ ಬಳಿಕ ಆರೋಪಿಗಳು ಸುಜುಕಿ ಹಾಗೂ ಹೊಂಡ ಡಿಯೋ ಬೈಕ್ನಲ್ಲಿ ಎಸ್ಕೇಪ್ ಆಗಿದ್ದಾರೆ. ಇನ್ನೋರ್ವ ಬೈಕ್ ಬಿಟ್ಟು, ಪಕ್ಕದಲ್ಲೇ ಇದ್ದ ಮೈದಾನದಲ್ಲಿ ಮಾರಕಾಸ್ತ್ರಗಳನ್ನು ಬಿಸಾಕಿ ಪರಾರಿಯಾಗಿದ್ದಾನೆ.
ಸದ್ಯ ಆರೋಪಿಗಳ ಬೈಕ್ ನಂಬರ್ ಪರಿಶೀಲನೆ ಮಾಡಿದಾಗ ಫೇಕ್ ನಂಬರ್ ಬಳಕೆ ಮಾಡಿರೋದು ತಿಳಿದುಬಂದಿದೆ. ಆರೋಪಿಗಳು ಬಿಸಾಕಿ ಹೋದ ಮಾರಕಾಸ್ತ್ರ ಹಾಗೂ ಗನ್ ಪತ್ತೆ ಹಚ್ವಿದ್ದಾರೆ. ಹತ್ಯೆ ನಡೆದ ಸ್ಥಳದಲ್ಲಿ ಬೈಕ್ ಹೆಲ್ಮೆಟ್ ಕೂಡ ಸಿಕ್ಕ ಕಾರಣ ಎಫ್ಎಸ್ಎಲ್ ಪರಿಶೀಲನೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ.
ಮನೀಶ್ ಶೆಟ್ಟಿಗೆ ಭೂಗತಲೋಕದ ನಂಟು ಸಹ ಇದ್ದು, ಕೆಲವರ ಕೊಲೆ, ದರೋಡೆ ಮಾಡಿ ಜೈಲು ಪಾಲಾಗಿದ್ದನಂತೆ. ಸದ್ಯ ಮನೀಶ್ಗೆ ಕ್ರಿಮಿನಲ್ ಹಿನ್ನೆಲೆ ಇರುವ ಕಾರಣ ಎಲ್ಲಾ ಆಯಾಮದಲ್ಲಿ ಸಿಸಿಬಿ ಪೊಲೀಸರು ಹಾಗೂ ಕೇಂದ್ರ ವಿಭಾಗ ಪೊಲೀಸರು ಜಂಟಿಯಾಗಿ ತನಿಖಾ ಕಾರ್ಯ ಮಾಡುತ್ತಿದ್ದಾರೆ.