ಬೆಂಗಳೂರು: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರಿಕ್ ಇದೇ ತಿಂಗಳು 21ರಂದು ಬೆಂಗಳೂರಿಗೆ ಬಂದು ಹೋಗಿದ್ದ ಎಂಬುದು ಎನ್ಐಎ ತನಿಖೆ ವೇಳೆ ತಿಳಿದುಬಂದಿದೆ.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ: ಎನ್ಐಎ ತನಿಖೆಗೆ ವಹಿಸಿದ ರಾಜ್ಯ ಸರ್ಕಾರ
ನಗರದ ಅಮೃತಹಳ್ಳಿಯ ಮಾರುತಿ ಲೇಔಟ್ನ ಎಸ್ಎಸ್ಎಸ್ ಸಿಂಫೋನಿ ಅಪಾರ್ಟ್ಮೆಂಟ್ನಲ್ಲಿ ಶಾರಿಕ್ ತಂಗಿದ್ದ. ಇಲ್ಲಿ ತನ್ನ ಸೋದರಮಾವ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಎನ್ಐಎ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.
ಇದನ್ನೂ ಓದಿ: ಮಂಗಳೂರಲ್ಲಿ ಸ್ಫೋಟ ಪ್ರಕರಣ: ಘಟನಾ ಸ್ಥಳಕ್ಕೆ ಎನ್ಐಎ ಎರಡನೇ ಬಾರಿ ಭೇಟಿ, ತೀವ್ರ ಪರಿಶೀಲನೆ
ಅಲ್ಲದೇ, ಶಾರಿಕ್ ಅತ್ತೆ - ಮಾವನನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಮೋಸ್ಟ್ ವಾಂಟೆಂಟ್ ಆಗಿರುವ ಶಂಕಿತ ಉಗ್ರ ಅಬ್ದುಲ್ ಮತೀನ್ ಸಹ ಕೆಲ ದಿನಗಳ ಕಾಲ ಶಾರಿಕ್ ಜೊತೆ ಇದೇ ಅಪಾರ್ಟ್ಮೆಂಟ್ನಲ್ಲಿ ಉಳಿದುಕೊಂಡಿದ್ದ ತಿಳಿದು ಬಂದಿದೆ. ಈ ಬಗ್ಗೆ ಕೂಡ ಅಧಿಕಾರಿಗಳು ವಿಚಾರಣೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಸ್ಫೋಟದ ಆರೋಪಿಗೆ ಬೆಂಗಳೂರು ಪೊಲೀಸರು ತಲಾಶ್ ನಡೆಸುತ್ತಿರುವ ಶಂಕಿತ ಉಗ್ರನೊಂದಿಗೆ ನಂಟು