ETV Bharat / state

ಸೆಲ್ಫ್ ಕೋವಿಡ್ ಟೆಸ್ಟ್ ಕಿಟ್ ಬಳಕೆ: ಐಸಿಎಂಆರ್ ಪೋರ್ಟಲ್​​ನಲ್ಲಿ ಮಾಹಿತಿ ದಾಖಲಿಸುವುದು ಕಡ್ಡಾಯ

ಈಗಾಗಲೇ ಹಲವರು ಸೆಲ್ಫ್ ಟೆಸ್ಟ್ ಕಿಟ್ ಮೊರೆಹೋಗಿದ್ದು, ಈ ಕಿಟ್‌ಗಳ ಮಾಹಿತಿಯನ್ನು ನಮೂದಿಸುತ್ತಿಲ್ಲ. ಜೊತೆಗೆ ಕಿಟ್‌ನ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುತ್ತಿಲ್ಲ ಎಂಬ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸೆಲ್ಫ್ ಕಿಟ್ ಬಳಕೆ ಕುರಿತು ಶುಕ್ರವಾರ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

mandatory-to-add-information-on-icmr-portal-after-using-self-covid-test-kit
ಸೆಲ್ಫ್ ಕೋವಿಡ್ ಟೆಸ್ಟ್ ಕಿಟ್ ಬಳಕೆ
author img

By

Published : Jan 29, 2022, 6:14 AM IST

ಬೆಂಗಳೂರು: ಸೆಲ್ಫ್ ಕೋವಿಡ್ ಟೆಸ್ಟ್ ಕಿಟ್‌ಗಳ ಮೂಲಕ ಮನೆಯಲ್ಲಿಯೇ ಸೋಂಕು ಪರೀಕ್ಷೆ ಮಾಡಿಕೊಳ್ಳುವವರು ವರದಿ ಪಾಸಿಟಿವ್ ಬಂದರೆ ಕಡ್ಡಾಯವಾಗಿ ಆರೋಗ್ಯ ಇಲಾಖೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಪೋರ್ಟಲ್​ನಲ್ಲಿ ಮಾಹಿತಿ ದಾಖಲಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈಗಾಗಲೇ ಹಲವರು ಸೆಲ್ಫ್ ಟೆಸ್ಟ್ ಕಿಟ್ ಮೊರೆಹೋಗಿದ್ದು, ಈ ಕಿಟ್‌ಗಳ ಮಾಹಿತಿಯನ್ನು ನಮೂದಿಸುತ್ತಿಲ್ಲ. ಜೊತೆಗೆ ಕಿಟ್‌ನ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುತ್ತಿಲ್ಲ ಎಂಬ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸೆಲ್ಫ್ ಕಿಟ್ ಬಳಕೆ ಕುರಿತು ಶುಕ್ರವಾರ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಪರೀಕ್ಷೆ ನಂತರ ವರದಿ ಪಾಸಿಟಿವ್ ಬಂದರೆ https://cvstatus.icmr.gov.inಗೆ ಭೇಟಿ ನೀಡಿ ಮಾಹಿತಿ ದಾಖಲಿಸಬೇಕು. ನೆಗೆಟಿವ್ ಇದ್ದರೆ ದಾಖಲಿಸುವ ಅವಶ್ಯಕತೆ ಇಲ್ಲ. ಒಂದು ವೇಳೆ ರೋಗ ಲಕ್ಷಣಗಳು ಇದ್ದು ನೆಗೆಟಿವ್ ಬಂದರೆ ಕೂಡಲೇ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವೈದ್ಯಕೀಯ ತ್ಯಾಜ್ಯ ಎಂದು ಪ್ರತ್ಯೇಕಿಸಿ: ಪರೀಕ್ಷೆಗೆ ಬಳಸಿದ ಗಂಟಲ ದ್ರವ, ಪರೀಕ್ಷಾ ಕಾರ್ಡ್, ನಳಿಕೆ ಸೇರಿದಂತೆ ಕಿಟ್‌ನ ಸಾಮಗ್ರಿಗಳನ್ನು ವೈದ್ಯಕೀಯ ತ್ಯಾಜ್ಯ ಎಂದು ಪ್ರತ್ಯೇಕಿಸಬೇಕು. ಮನೆಯ ಹಸಿ ಮತ್ತು ಒಣ ಕಸದೊಂದಿಗೆ ಮಿಶ್ರಣ ಮಾಡಬಾರದು. ತ್ಯಾಜ್ಯ ಸಂಗ್ರಹಕ್ಕೆ ಬರುವವರಿಗೆ ವೈದ್ಯಕೀಯ ತ್ಯಾಜ್ಯ ಎಂದು ತಿಳಿಸಿ ಪ್ರತ್ಯೇಕವಾಗಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.

ಇದನ್ನೂ ಓದಿ: ಕರ್ತವ್ಯನಿರತ ಪತಿ ಸಾವು.. ಮಹಿಳೆಗೆ ಎರಡೇ ದಿನದಲ್ಲಿ ನೌಕರಿ ನೀಡಿದ ಕಲಬುರಗಿ ಜಿಲ್ಲಾಧಿಕಾರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.