ETV Bharat / state

ಬೆಂಗಳೂರು: ಪಾನಮತ್ತ ಸ್ನೇಹಿತರ ಗಲಾಟೆ; ಓರ್ವನ ಹತ್ಯೆ - ಬೆಂಗಳೂರು

ಹೊಸ ವರ್ಷಾಚರಣೆ ಮುಗಿಸಿ ಮನೆಗೆ ಹಿಂದಿರುಗುವಾಗ ಸ್ನೇಹಿತರ ನಡುವೆ ಜಗಳ ನಡೆದು ಓರ್ವನನ್ನು ಹತ್ಯೆ ಮಾಡಲಾಗಿದೆ.

murder
ಮೃತ ದೇಹ ದೊರಕಿದ ಸ್ಥಳ
author img

By ETV Bharat Karnataka Team

Published : Jan 1, 2024, 9:36 AM IST

Updated : Jan 1, 2024, 12:05 PM IST

ಬೆಂಗಳೂರು: ಹೊಸ ವರ್ಷಾಚರಣೆ ಬಳಿಕ ಪಾನಮತ್ತ ಸ್ನೇಹಿತರ ನಡುವೆ ಶುರುವಾದ ಗಲಾಟೆ ವ್ಯಕ್ತಿಯೊಬ್ಬನ ಹತ್ಯೆಯಲ್ಲಿ ಕೊನೆಗೊಂಡ ಘಟನೆ ಹನುಮಂತನಗರ ಠಾಣಾ ವ್ಯಾಪ್ತಿಯ ಶ್ರೀನಿವಾಸ ನಗರ ಬಸ್​ ನಿಲ್ದಾಣದ ಬಳಿ ಕಳೆದ ತಡರಾತ್ರಿ ನಡೆದಿದೆ. ಮೃತರನ್ನು ವಿಜಯ್​​ (21) ಎಂದು ಗುರುತಿಸಲಾಗಿದೆ.

ಸಂಪೂರ್ಣ ವಿವರ: ವಿಜಯ್​ ಹಾಗೂ ಆತನ ಗೆಳೆಯರು ಹೊಸ ವರ್ಷಾಚರಣೆ ಮಾಡಿದ್ದಾರೆ. ಮನೆಗೆ ತೆರಳುವಾಗ ವಿಜಯ್ ಹಾಗೂ ಆತನ ಗೆಳೆಯರ ನಡುವೆ ಗಲಾಟೆ ಆರಂಭವಾಗಿದೆ. ಆಟೋದಲ್ಲಿ ತೆರಳುತ್ತಿದ್ದಾಗ ಈ ಗಲಾಟೆ ಅತಿರೇಕಕ್ಕೆ ಹೋಗಿದ್ದು, ವಿಜಯ್​ನ ಎದೆಗೆ ಚಾಕುವಿನಿಂದ ಇರಿಯಲಾಗಿದೆ. ಬಳಿಕ ಶ್ರೀನಿವಾಸನಗರ ಬಸ್​ ನಿಲ್ದಾಣದೆದುರು ಆತನನ್ನು ಆಟೋದಿಂದ ಹೊರತಳ್ಳಿ ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ವಿಜಯ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹನುಮಂತನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಗೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ : ಹೊಸ ವರ್ಷಾಚರಣೆಗೆ ಕೇಕ್​ ತರಲು ಬಂದಿದ್ದ ಯುವಕನ ಹತ್ಯೆ

ಇತ್ತೀಚಿನ ಪ್ರಕರಣಗಳು: ಬಳ್ಳಾರಿಯಲ್ಲೂ ಭಾನುವಾರ ರಾತ್ರಿ ಚಾಕುವಿನಿಂದ ಇರಿದು ಯುವಕನನ್ನು ಹತ್ಯೆ ಮಾಡಲಾಗಿದೆ. ಮೃತ ಯುವಕ ಹೊಸ ವರ್ಷಾಚರಣೆಗೆ ಕೇಕ್ ತರಲು ಹೋಗಿದ್ದ. ಈ ವೇಳೆ ಬೇಕರಿ ಸಮೀಪ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಘಟನೆಯಲ್ಲಿ ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದು ವಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನದಲ್ಲಿ ಕೌಟುಂಬಿಕ ಕಲಹಕ್ಕೆ ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಪತಿ ಹತ್ಯೆಗೈದಿರುವ ಘಟನೆ ನಡೆದಿತ್ತು. ಮೃತ ಮಹಿಳೆ ಮತ್ತು ಆಕೆಯ ಪತಿ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ 6 ತಿಂಗಳ ಹಿಂದೆ ಇಬ್ಬರು ಒಪ್ಪಿಯೇ ವಿವಾಹವಾಗಿದ್ದರು. ಆದರೆ ಇತ್ತೀಚಿಗೆ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗುತ್ತಿತ್ತು. ಪತ್ನಿ ಆಧುನಿಕ​ ಉಡುಪು ಧರಿಸುತ್ತಾಳೆ ಎಂಬ ವಿಚಾರಕ್ಕೆ ಆರೋಪಿ ಪತಿಗೆ ಅಸಮಾಧಾನವಿದ್ದು ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇದೇ ಕಾರಣಕ್ಕೆ ಡಿಸೆಂಬರ್​ 30ರಂದು ಪತ್ನಿಯನ್ನು ಡ್ರಾಪ್​ ನೀಡುವ ನೆಪದಲ್ಲಿ ಜೆ.ಸಿ.ಪುರ ಸಮೀಪದ ರಾಂಪುರ ಅರಣ್ಯ ಪ್ರದೇಶದಲ್ಲಿ ಕರೆತಂದು ಹತ್ಯೆಗೈದು ಪರಾರಿಯಾಗಿದ್ದ. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jan 1, 2024, 12:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.