ETV Bharat / state

ಸಿಗರೇಟ್ ಸೇದುವ ವಿಚಾರಕ್ಕೆ ಗೆಳೆಯರ‌ ಗಲಾಟೆ, ಓರ್ವನ ಕೊಲೆ - ಈಟಿವಿ ಭಾರತ ಕನ್ನಡ

ಸಿಗರೇಟ್​ ಸೇದುವ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ ನಡೆದು ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದ್ದು ಓರ್ವ ಸಾವಿಗೀಡಾಗಿದ್ದಾನೆ.

ಚಾಕುವಿನಿಂದ ಇರಿದು ಕೊಲೆ
ಚಾಕುವಿನಿಂದ ಇರಿದು ಕೊಲೆ
author img

By

Published : Mar 24, 2023, 7:08 AM IST

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮೂವರು ಗೆಳೆಯರ ನಡುವೆ ನಡೆದ ಜಗಳದಲ್ಲಿ ಓರ್ವ ಕೊಲೆಯಾಗಿದ್ದಾನೆ. ಉಪ್ಪಾರಪೇಟೆಯ ಗಣೇಶ ದೇವಾಲಯದ ಸಮೀಪ ಗುರುವಾರ ರಾತ್ರಿ ಘಟನೆ ನಡೆದಿದೆ. ಕಲಬುರಗಿ ಮೂಲದ ಮಲ್ಲಿನಾಥ್ ಬಿರಾದರ್(36)ಕೊಲೆಯಾಗಿದ್ದಾರೆ. ಮಂಜುನಾಥ್ ಮತ್ತು ಕೃತ್ಯ ಎಸಗಿದ ಆರೋಪಿ ಚಿಕ್ಕಮಗಳೂರಿನ ಗಣೇಶ್ ಎಂಬಾತ ಕೂಡ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವರ: ಉತ್ತರ ಕರ್ನಾಟಕ ಮೂಲದ ಮಲ್ಲಿನಾಥ್ ಬಿರಾದರ್, ಮಂಜುನಾಥ್ ಮತ್ತು ಚಿಕ್ಕಮಗಳೂರಿನ ಗಣೇಶ್ ಗೆಳೆಯರು. ಕೆಲವು ತಿಂಗಳಿಂದ ಮೆಜೆಸ್ಟಿಕ್ ಸುತ್ತಮುತ್ತ ವಾಸವಾಗಿದ್ದಾರೆ. ಅಡುಗೆ, ಇತರೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಕೈಗೆ ಬಂದ ಹಣದಲ್ಲಿ ರಾತ್ರಿ ಮದ್ಯ ಸೇವಿಸಿ ಮೆಜೆಸ್ಟಿಕ್ ಸುತ್ತಲ ಪ್ರದೇಶಗಳಲ್ಲಿ ಮಲಗುತ್ತಿದ್ದರು.

ಬುಧವಾರ ರಾತ್ರಿ ಮೂವರ ನಡುವೆ ಸಿಗರೇಟ್ ಸೇದುವ ವಿಚಾರಕ್ಕೆ ಗಲಾಟೆಯಾಗಿದೆ. ಮಂಜುನಾಥ್ ಮತ್ತು ಮಲ್ಲಿನಾಥ್ ಬಿರಾದರ್, ಆರೋಪಿ ಗಣೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಮೂವರು ಸಮಾಧಾನಗೊಂಡಿದ್ದರು. ಗುರುವಾರ ಬೆಳಗ್ಗೆ ಮೂವರು ಎಂದಿನಂತೆ ಕೆಲಸಕ್ಕೆ ಹೋಗಿದ್ದಾರೆ. ಸಂಜೆ ಮತ್ತೆ ಒಟ್ಟಿಗೆ ಮದ್ಯ ಸೇವಿಸಿದ್ದು, ಗಣೇಶ್ ದೇವಾಲಯದ ಬಳಿ ಹೋಗಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಗಣೇಶ್, ಬುಧವಾರ ನಡೆದ ಗಲಾಟೆ ಬಗ್ಗೆ ಕೆದಕಿದ್ದಾನೆ. ಈ ಸಂದರ್ಭದಲ್ಲಿ ಮಾರಾಮಾರಿ ನಡೆದಿದೆ. ಕೋಪಗೊಂಡ ಗಣೇಶ್, ತನ್ನ ಬಳಿಯಿದ್ದ ಚಾಕುವಿನಿಂದ ಮಂಜುನಾಥ್ ಮತ್ತು ಮಲ್ಲಿನಾಥ್‌ ಬಿರಾದರ್ ಹೊಟ್ಟೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಲ್ಲಿನಾಥ್ ಬಿರಾದಾರ್ ಮೃತಪಟ್ಟಿದ್ದು, ಮಂಜುನಾಥ್‌ಗೆ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಣೇಶ್‌ಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾರದ ಪುಡಿ ಎರಚಿ ಕೊಲೆ: ದಾವಣಗೆರೆಯಲ್ಲಿ ಗುರುವಾರ ನಡೆದ ಘಟನೆಯೊಂದರಲ್ಲಿ ಯುವಕನಿಗೆ ಖಾರದ ಪುಡಿ ಎರಚಿ ಕೊಲೆ ಮಾಡಲಾಗಿದೆ. ಸುಮಾರು 25 ರಿಂದ 30 ವರ್ಷದೊಳಗಿನ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ ನಡೆದಿದೆ. ಕೊಲೆಯಾದಾತನ ಬಳಿ ಬೆಂಗಳೂರಿನಿಂದ ದಾವಣಗೆರೆಗೆ ಬಂದ ರೈಲು ಟಿಕೆಟ್ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳು ಮೊದಲಿಗೆ ಖಾರದ ಪುಡಿ ಎರಚಿ ಬಳಿಕ ಕತ್ತು ಕೊಯ್ದಿದ್ದಾರೆ. ಆ ಬಳಿಕ ವ್ಯಕ್ತಿಯ ಗುರುತು ಸಿಗದಂತೆ ಮಾಡಲು ತಲೆಯ ಭಾಗಕ್ಕೆ ಕಲ್ಲು ಎತ್ತಿ ಹಾಕಿದ್ದಾರೆ. ಮೃತ ದೇಹವನ್ನು ನಗರದ ಶಾಮನೂರ ರಸ್ತೆಯ ಇಕ್ಕೆಲದಲ್ಲಿಯೇ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಬರ್ಬರ ಕೊಲೆ: ಖಾರದ ಪುಡಿ ಎರಚಿ ಯುವಕನ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.