ETV Bharat / state

ರಾತ್ರಿ ಮಲಗಿದ್ದವನು ಬೆಳಗಾಗುವಷ್ಟರಲ್ಲೇ ಮರ್ಡರ್ ಆದ..! - bengaluru latest crime news

ರಾತ್ರೋರಾತ್ರಿ ಮನೆಗೆ ನುಗ್ಗಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಪ್ರಕರಣ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಜರುಗಿದೆ.

man murdered in ck acchukatte police limits
ಮರ್ಡರ್​
author img

By

Published : Mar 24, 2021, 1:59 PM IST

ಬೆಂಗಳೂರು: ರಾತ್ರಿ ಮಲಗಿದ್ದವನು ಬೆಳಗ್ಗೆ ಆಗುವಷ್ಟರಲ್ಲೇ ಹಂತಕರಿಂದ ಕೊಲೆಯಾಗಿರುವ ದುರ್ಘಟನೆ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ನಡೆದಿದೆ.

ಸಿ.ಕೆ.ಅಚ್ಚುಕಟ್ಟು ಠಾಣೆಯ ಇಟ್ಟಮಡು ನಿವಾಸಿ ಮಂಜುನಾಥ್ ಆಲಿಯಾಸ್ ದಡಿಯಾ ಮಂಜ ಕೊಲೆಯಾದವ. ಈ ಹಿಂದೆ ಕುಡಿದು ಸಣ್ಣಪುಟ್ಟ ಗಲಾಟೆಯಲ್ಲಿ ಭಾಗಿಯಾಗಿದ್ದ.. ಪೊಲೀಸರು ಮಧ್ಯೆ ಪ್ರವೇಶಿಸಿ ತಿಳಿಗೊಳಿಸಿದ್ದರು. ಕುಡಿತ ಚಟ ಹೊಂದಿದ್ದ ಮಂಜುನಾಥ್ ಪೊಲೀಸರು ಬುದ್ಧಿ ಹೇಳಿದ ಬಳಿಕ ಗಲಾಟೆಗಳಲ್ಲಿ ಭಾಗಿಯಾಗದೇ ತಾನು ಆಯ್ತು ತನ್ನ ಕೆಲಸ ಆಯ್ತು ಎಂದು ಪಾಡಿಗೆ ಸುಮ್ಮನಿದ್ದ.. ನಿನ್ನೆ ಅಕ್ಕನ ಮನೆಯಲ್ಲಿ ವಾಸ್ತವ್ಯ ಹೂಡಿದ್ದ.. ಆದರೆ, ಇಂದು ಬೆಳಗಿನ ಜಾವ ಮನೆಗೆ ನುಗ್ಗಿದ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.. ಹಳೆ ದ್ವೇಷದ ಮೇರೆಗೆ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.