ಬೆಂಗಳೂರು: ಕೂಲಿ ಕಾರ್ಮಿಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಕೆ.ಆರ್. ಮಾರ್ಕೆಟ್ ಬಳಿಯ ಈಸ್ಟ್ ಗೇಟ್ನಲ್ಲಿ ನಡೆದಿದೆ.
ರಮೇಶ್ (24) ಮೃತ ಕಾರ್ಮಿಕ. ಈತ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾರ್ಕೆಟ್ನಲ್ಲಿ ಮೂಟೆ ಹೊರುತ್ತಿದ್ದ. ಮೂಟೆ ಹೊರುತ್ತಿದ್ದ ವೇಳೆ ಕೆಲ ಪುಢಾರಿಗಳು ಹಾಗೂ ರಮೇಶ್ ಮಧ್ಯೆ ಆಗಾಗ ಗಲಾಟೆಯಾಗ್ತಿತ್ತಂತೆ. ನಿನ್ನೆ ರಾತ್ರಿ ಮಾರ್ಕೆಟ್ ಬಳಿ ನಿಂತಿರುವಾಗ ಏಕಾಏಕಿ ಬಂದ ಪುಢಾರಿಗಳ ಗುಂಪು ಎದೆ ಭಾಗ ಮತ್ತು ಕತ್ತಿನ ಭಾಗವನ್ನು ಕೊಯ್ದು ಎಸ್ಕೇಪ್ ಆಗಿದೆ. ರಮೇಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಘಟನೆ ನಡೆಯುವಾಗ ಮಾರ್ಕೆಟ್ ಬಳಿಯೇ ಇದ್ದ ಜನ ಈ ಕೃತ್ಯ ನೋಡಿ ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಮಾರ್ಕೆಟ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಿದ್ದು, ಶೋಧ ಕಾರ್ಯ ಮುಂದುವರೆದಿದೆ.