ಯಲಹಂಕ(ಬೆಂಗಳೂರು) : ರಸ್ತೆಯಲ್ಲಿದ್ದ ಗುಂಡಿಯಿಂದ ಪಾರಾಗುವ ಯತ್ನದಲ್ಲಿ ನಿಯಂತ್ರಣ ತಪ್ಪಿದ ಕಾರು ಪಲ್ಟಿ ಹೊಡೆದಿದೆ. ಇದೇ ಸಮಯಕ್ಕೆ ಎದುರಿಗೆ ಬಂದ ಬೈಕ್ ಕಾರಿನಡಿ ಸಿಲುಕಿದೆ. ಇದರಿಂದ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯಲಹಂಕದ ಅಟ್ಟೂರು ಬಡಾವಣೆಯ ವಿವೇಕಾನಂದ ಕಾಲೇಜ್ ಮುಂಭಾಗ ನಿನ್ನೆ ರಾತ್ರಿ 11 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಕೇರಳ ಮೂಲದ ಬೈಕ್ ಸವಾರ ಅರ್ಷದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿವೇಕಾನಂದ ಕಾಲೇಜ್ ಮುಂಭಾಗದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮಳೆಯಿಂದಾಗಿ ರಸ್ತೆಯ ಕೆಲವು ಕಡೆ ತಗ್ಗಿನಂತಾಗಿ ನೀರು ನಿಂತಿದೆ. ಕಾರಿನ ಚಾಲಕ ರಸ್ತೆಯಲ್ಲಿದ್ದ ನೀರಿನ ಗುಂಡಿಯಿಂದ ಪಾರಾಗುವ ಯತ್ನ ನಡೆಸಿದ್ದಾರೆ. ನಿಯಂತ್ರಣ ತಪ್ಪಿದ ಕಾರು ಪಲ್ಟಿ ಹೊಡೆದಿದೆ. ಇದೇ ವೇಳೆ ಎದುರಿಗೆ ಬಂದ ಬೈಕ್ ಕಾರಿನಡಿ ಸಿಲುಕಿ ಅವಘಡಕ್ಕೆ ಕಾರಣವಾಗಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಮೊಬೈಲ್ ನೋಡ್ತಾ ನೋಡ್ತಾ ನರ್ಸ್ ಮೇಲೆ ಟ್ಯಾಂಕರ್ ಹತ್ತಿಸಿದ ಚಾಲಕ.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!