ಬೆಂಗಳೂರು: ಹೆಂಡತಿ ಜೊತೆಗೆ ಜಗಳ ಆಡಿದ ಪತಿರಾಯ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಬಸವೇಶ್ವರ ನಗರದ ಮಂಜುನಾಥ ನಗರದಲ್ಲಿ ಪ್ರಕರಣ ನಡೆದಿದೆ. 28 ವರ್ಷದ ಅನಿಲ್ ತನ್ನ ಪತ್ನಿ ಜೊತೆ ಜಗಳಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಆತ್ಮಹತ್ಯೆ ದೃಶ್ಯವನ್ನು ಮೊಬೈಲ್ನಲ್ಲಿ ಅಕ್ಕಪಕ್ಕದ ಮನೆಯವರು ಸೆರೆಹಿಡಿದಿದ್ದಾರೆ.
ಮುಂಬೈನಲ್ಲಿರುವ ಪತ್ನಿ ಜೊತೆ ಕಿರಿಕ್ ಮಾಡಿಕೊಂಡು, ಮದ್ಯ ಸೇವಿಸಿ ನೇಣಿಗೆ ಶರಣಾಗಿದ್ದಾನೆ. ಕಿಟಕಿ ಮೂಲಕ ಪಕ್ಕದ ಮನೆಯವರು ಕಿರುಚಿದರೂ ಫ್ಯಾನಿಗೆ ಹಗ್ಗ ಹಾಕಿದ ಅನೀಲ್, ನೋಡ ನೋಡ್ತಿದ್ದ ಹಾಗೆ ಕುತ್ತಿಗೆಗೆ ಹಗ್ಗ ಎಳೆದುಕೊಂಡಿದ್ದಾನೆ. ಅಕ್ಕ ಪಕ್ಕದ ಮನೆಯವರು ಸೇರಿ ಬಾಗಿಲು ಒಡೆಯುವಷ್ಟರಲ್ಲಿ ಅನೀಲ್ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗ್ತಿದೆ. ನೆರೆಮನೆಯವರು ಮೊಬೈಲ್ನಲ್ಲಿ ವಿಡಿಯೋ ಸೆರೆಯಾಗಿದೆ.
ಬಸವೇಶ್ವರನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನೆಡೆಯುತ್ತಿದೆ.
ಇದನ್ನೂ ಓದಿ: ರಾಮದುರ್ಗ: ಪುಟ್ಟ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ದಂಪತಿ!