ETV Bharat / state

ಪ್ರೇಯಸಿ ಓಲೈಸಲು ಲಕ್ಷಾಂತರ ರೂ.ಮೌಲ್ಯದ ಮೊಬೈಲ್ ಕದ್ದಿದ್ದ ಭೂಪನ ಬಂಧನ

ಜುಲೈ 20 ರ ರಾತ್ರಿ 8.30 ಸುಮಾರಿಗೆ ಕ್ರೋಮಾ ಎಲೆಕ್ಟ್ರಾನಿಕ್ ಶೋರೂಮ್​​ಗೆ ಗ್ರಾಹಕನ ನೆಪದಲ್ಲಿ ಬಂದಿದ್ದ ಅಬ್ದುಲ್ ಮುನಾಫ್ ಲೇಡಿಸ್ ಬಾತ್ ರೂಮ್​​​ನಲ್ಲಿ ಅಡಗಿಕೊಂಡಿದ್ದ. ನಂತರ ಅಲ್ಲಿ ಮೊಬೈಲ್​ ಕಳ್ಳತನ ಮಾಡಿ ಪರಾರಿಯಾಗಿದ್ದ .

author img

By

Published : Jul 29, 2022, 10:10 PM IST

ಶೌಚಾಲಯದಲ್ಲಿ ಅಡಗಿ ಕುಳಿತು ಮೊಬೈಲ್​ ಕಳ್ಳತನ ಮಾಡಿದ್ದ ಆರೋಪಿಯ ಬಂಧನ

ಬೆಂಗಳೂರು: ಪ್ರೇಯಸಿಯನ್ನು ಓಲೈಸಿಕೊಳ್ಳಲು ಮಹಿಳಾ‌ ಶೌಚಾಲಯದಲ್ಲಿ ಅಡಗಿ ರಾತ್ರೋರಾತ್ರಿ ಲಕ್ಷಾಂತರ ರೂಪಾಯಿ ಮೌಲ್ಯದ 6 ಮೊಬೈಲ್ ಕಳ್ಳತನ ಮಾಡಿದ್ದ ಖದೀಮನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ‌.

ಅಬ್ದುಲ್ ಮುನಾಫ್ ಬಂಧಿತ ಆರೋಪಿ. ಈತನಿಂದ 5 ಲಕ್ಷ ಮೌಲ್ಯದ ಆರು ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ. ಜುಲೈ 20 ರ ರಾತ್ರಿ 8.30 ಸುಮಾರಿಗೆ ಕ್ರೋಮಾ ಎಲೆಕ್ಟ್ರಾನಿಕ್ ಶೋರೂಮ್​​ಗೆ ಗ್ರಾಹಕನ ನೆಪದಲ್ಲಿ ಬಂದಿದ್ದ ಅಬ್ದುಲ್ ಮುನಾಫ್ ಲೇಡಿಸ್ ಬಾತ್ ರೂಮ್​​​ನಲ್ಲಿ ಅಡಗಿಕೊಂಡಿದ್ದ.

ಎಂದಿನಂತೆ ರಾತ್ರಿ ಅಂಗಡಿ ಮುಚ್ಚಿ ಸಿಬ್ಬಂದಿ ತೆರಳಿದ್ದರು. ಮಾರನೇ ದಿನ ಸಿಬ್ಬಂದಿ ಬಂದು ಪರಿಶೀಲಿಸಿದಾಗ ಮೊಬೈಲ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು‌.‌ ಸಿಸಿಟಿವಿ ಪರಿಶೀಲಿಸಿದಾಗ ಖದೀಮ ಕೈಚಳಕ ತೋರಿರುವುದು ತಿಳಿದು ಬಂದಿದೆ.

ಕಳ್ಳತನ ಬಳಿಕ ಮತ್ತೆ ಮಹಿಳಾ ಶೌಚಾಯಲದಲ್ಲಿ ಆರೋಪಿ ಅಡಗಿಕೊಂಡಿದ್ದ. ನಂತರ ನೆಲಮಹಡಿ ಮುಖಾಂತರ ತಪ್ಪಿಸಿಕೊಂಡು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ‌ ನಡೆಸಿದಾಗ ಆರೋಪಿಯ ಪ್ರೇಮ್​ಕಹಾನಿ ರಿವೀಲ್ ಆಗಿದೆ.‌

ಪ್ರೇಯಸಿ ಓಲೈಸಲು ಲಕ್ಷಾಂತರ ರೂ.ಮೌಲ್ಯದ ಮೊಬೈಲ್ ಕದ್ದಿದ್ದ ಭೂಪನ ಬಂಧನ

ತಾನು ಪ್ರೀತಿಸುವ ಹುಡುಗಿಯು ಹೊಸ ಮೊಬೈಲ್ ಕೇಳಿದ್ದಳು. ಹೀಗಾಗಿ ತನ್ನ ಬಳಿ ಮೊಬೈಲ್‌ ಕೊಡಿಸುವಷ್ಟು ಹಣವಿರಲ್ಲ. ತನ್ನತ್ತ ಸೆಳೆದುಕೊಳ್ಳಲು ಯುವತಿಗಾಗಿ ಮೊಬೈಲ್‌ ಕಳ್ಳತನಕ್ಕೆ ಮುಂದಾಗಿದ್ದೆ. ಒಂದು ಮೊಬೈಲ್‌ ಆಕೆಗೆ ನೀಡಿ , ಐದು ಮೊಬೈಲ್​ಗಳನ್ನು ಮಾರಾಟ ಮಾಡಲು ಮುಂದಾಗಿದ್ದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ಇದನ್ನೂ ಓದಿ: ಸರಣಿ ಹತ್ಯೆ ಹಿನ್ನೆಲೆ: ಶುಕ್ರವಾರ ದ‌ಕ್ಷಿಣ ಕನ್ನಡ ಜಿಲ್ಲೆ ಸಂಜೆಯ ಬಳಿಕ‌ ಸಂಪೂರ್ಣ ಸ್ತಬ್ಧ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.