ETV Bharat / state

ವಿದೇಶದಿಂದ ದುಬಾರಿ ಡ್ರಗ್ಸ್ ತರಿಸಿ ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಟೆಕ್ಕಿ ಅಂದರ್ - ಸ್ಯಾಂಡಲ್​ವುಡ್ ಡ್ರಗ್ ಪೆಡ್ಲರ್

ಈತ ಸಾಫ್ಟ್​​ವೇರ್ ಎಂಜಿನಿಯರ್ ಆಗಿದ್ದು, ಫಾರಿನರ್ಸ್ ಪೋಸ್ಟ್ ಮೂಲಕ ನಗರಕ್ಕೆ ದುಬಾರಿ ಡ್ರಗ್ಸ್ ತರಿಸುತ್ತಿದ್ದ. ಫಾರಿನರ್ಸ್ ಪೋಸ್ಟ್ ಆಫೀಸ್​ನಲ್ಲಿ ಸಿಸಿಬಿ ಪರಿಶೀಲನೆ ಮಾಡಿದಾಗ ಹೆಚ್.ಎಸ್.ಆರ್ ಲೇಔಟ್​ನ ಟೆಕ್ಕಿ ಮನೆಗೆ ಡ್ರಗ್ಸ್​ ಕೊರಿಯರ್ ಬಂದಿರುವುದು ಬೆಳಕಿಗೆ ಬಂದಿದೆ.

drugs
drugs
author img

By

Published : Oct 30, 2020, 8:39 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರು ಡ್ರಗ್ಸ್​ ವಿರುದ್ಧ ಸಮರ ಸಾರಿದರೂ ಕೂಡ ಕ್ಯಾರೆ ಅನ್ನದೆ ರಾಜಾರೋಷವಾಗಿ ಡ್ರಗ್ಸ್​ ಮಾರಾಟ ಮಾಡುತ್ತಿದ್ದವನನ್ನು ಸಿಸಿಬಿ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಸಾರ್ಥಕ್ ಆರ್ಯ ಬಂಧಿತ ಆರೋಪಿ.

ಈತ ಸಾಫ್ಟ್​​​ವೇರ್ ಎಂಜಿನಿಯರ್ ಆಗಿದ್ದು, ಫಾರಿನರ್ಸ್ ಪೋಸ್ಟ್ ಮೂಲಕ ನಗರಕ್ಕೆ ದುಬಾರಿ ಡ್ರಗ್ಸ್ ತರಿಸುತ್ತಿದ್ದ. ಇತ್ತೀಚೆಗೆ ಸಿಸಿಬಿಯವರು ಫಾರಿನರ್ಸ್ ಪೋಸ್ಟ್ ಕೊರಿಯರ್ ಮೇಲೆ ನಿಗಾ ಇಟ್ಟಿದ್ದರು. ಕಳೆದ ವಾರ ಬೆಲ್ಜಿಯಂನಿಂದ ನಗರಕ್ಕೆ ಕೊರಿಯರ್ ಬಂದಿದ್ದು, ಕೊರಿಯರ್ ಟ್ರ್ಯಾಕ್ ಮಾಡಿ ಚಾಮರಾಜಪೇಟೆ ಫಾರಿನರ್ಸ್ ಪೋಸ್ಟ್ ಆಫೀಸ್​ನಲ್ಲಿ ಸಿಸಿಬಿ ಪರಿಶೀಲನೆ ಮಾಡಿದಾಗ ಹೆಚ್.ಎಸ್.ಆರ್ ಲೇಔಟ್​ನ ಟೆಕ್ಕಿ ಮನೆಗೆ ಡ್ರಗ್ಸ್​ ಕೊರಿಯರ್ ಬಂದಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಸಿಸಿಬಿ ವಿಶೇಷ ವಿಚಾರಣಾ ದಳ ಟೆಕ್ಕಿ ಮನೆಯಲ್ಲಿ ಶೋಧ ಮಾಡಿದಾಗ ವಿದೇಶಿ ಮೂಲದ 4.99 ಗ್ರಾಂ LSD, MH ಸಿರೀಸ್ ಪ್ಯಾಕೆಟ್​ ಸ್ಕೇಲ್, ಬ್ರೌನ್ ಸ್ಮೋಕ್ ಪೇಪರ್ ಪ್ಯಾಕೆಟ್​, OCB ಸ್ಲಿಮ್ ಸ್ಮೋಕ್ ಪೇಪರ್ ಪ್ಯಾಕೆಟ್​, ರಾ ಟಿಪ್ಸ್ ಸ್ಮೋಕ್ ಪೇಪರ್ ಪ್ಯಾಕೆಟ್​, 100ml ಕೆಮಿಕಲ್ ಅಯಿಲ್ ಪತ್ತೆಯಾಗಿದ್ದು, ಇದನ್ನ ಜಪ್ತಿ ಮಾಡಿ ಈ ಕುರಿತು ಹೆಚ್.ಎಸ್.ಆರ್​ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ‌ ಮುಂದುವರೆಸಿದ್ದಾರೆ.

ಈಗಾಗಲೇ ಬಂಧಿತರಾದ ಸ್ಯಾಂಡಲ್​ವುಡ್ ಡ್ರಗ್ಸ್​ ಪೆಡ್ಲರ್ ಜೊತೆ ಏನಾದ್ರು ಸಂಪರ್ಕ ಹೊಂದಿದ್ದಾನೋ ಎಂಬ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ಈತ ನಗರದ ಕಂಪನಿಯೊಂದರಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿದ್ದು, ಹಲವಾರು ಮಂದಿಗೆ ಡ್ರಗ್ಸ್​ ಸಪ್ಲೈ ಮಾಡಿದ್ದಾನೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.