ETV Bharat / state

Matrimony ದೋಖಾ.. ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿದ್ದ ನಯವಂಚಕ ಅರೆಸ್ಟ್ - ನಕಲಿ ಅಕೌಂಟ್ ಸೃಷ್ಟಿಸಿ ವಂಚನೆ

ವಿಚ್ಛೇದಿತ ಹಾಗೂ ಗಂಡನಿಂದ ದೂರವಿರುವ ಮಹಿಳೆಯರನ್ನು ಮ್ಯಾಟ್ರಿಮೋನಿ(Matrimony) ಮೂಲಕ ಪರಿಚಯ ಮಾಡಿಕೊಂಡು ಮದುವೆಯಾಗಿ ನಂಬಿಸಿ ಅವರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಹೆಣ್ಣೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

man arrested for cheating divorcees and widows
ನಯವಂಚಕ ಅರೆಸ್ಟ್
author img

By

Published : Sep 1, 2021, 3:55 PM IST

ಬೆಂಗಳೂರು: ಮ್ಯಾಟ್ರಿಮೋನಿ(Matrimony) ಸೇರಿದಂತೆ ವಿವಿಧ ವೆಬ್​ಸೈಟ್​ಗಳಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ವಿಚ್ಛೇದಿತ ಮಹಿಳೆಯರನ್ನೇ ಗುರಿಯಾಗಿಸಿ, ಮದುವೆಯಾಗುವ ಸೋಗಿನಲ್ಲಿ ಹಣ ಪಡೆದು ವಂಚಿಸುತ್ತಿದ್ದ ನಯವಂಚಕನನ್ನು ಹೆಣ್ಣೂರು ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ.

ವಿಜಯಪುರದ ಮೂಲದ ಜಗನ್ನಾಥ್ ಬಂಧಿತ ಆರೋಪಿ. ಈತನಿಂದ 115 ಗ್ರಾಂ ಚಿನ್ನಾಭರಣ, 1 ಲಕ್ಷ ನಗದು ಹಾಗೂ‌ ಐದು ಫೋನ್​ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ‌.

ಜಗನ್ನಾಥ್, ಕಳೆದ ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಆರಂಭದಲ್ಲಿ ರಿಯಲ್‌ ಎಸ್ಟೇಟ್ ವ್ಯವಹಾರ ಮಾಡಿ ಕೈ ಸುಟ್ಟುಕೊಂಡಿದ್ದ. ಬಳಿಕ ಹಣ ಸಂಪಾದನೆಗಾಗಿ ವಂಚನೆ ದಾರಿ ಹಿಡಿದಿದ್ದ.

ಮ್ಯಾಟ್ರಿಮೋನಿ, ಶಾದಿ ಡಾಟ್​ಕಮ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಅಸಲಿ ಹೆಸರನ್ನು ಮರೆಮಾಚಿ ರಮೇಶ್, ವಿಜಯ್ ವಿವಿಧ ಹೆಸರುಗಳಲ್ಲಿ ನಕಲಿ ಪ್ರೊಫೈಲ್​ ಕ್ರಿಯೇಟ್ ಮಾಡುತ್ತಿದ್ದ. ಓದಿದ್ದು ಬಿಎ ಆದರೂ ಸಿವಿಲ್ ಎಂಜಿನಿಯರ್ ಓದಿಕೊಂಡಿರುವುದಾಗಿ ಹೇಳಿಕೊಂಡಿದ್ದ. ಹೆಚ್ಚಾಗಿ ವಿಚ್ಛೇದಿತ ಮಹಿಳೆ ಹಾಗೂ ಗಂಡನಿಂದ ದೂರ ಉಳಿದದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಪರಿಚಯ ಮಾಡಿಕೊಳ್ಳುತ್ತಿದ್ದ. ಬಳಿಕ ಮಹಿಳೆಯರನ್ನು ಭೇಟಿ ಮಾಡಿ ಕೆಲ ದಿನಗಳ ಬಳಿಕ ಕಾರ್​ನಲ್ಲಿ ಯುವತಿಯರನ್ನು ಪ್ರವಾಸಕ್ಕೆ ಕರೆದೊಯ್ದು ಮದುವೆಯಾಗುವುದಾಗಿ ನಂಬಿಸುತ್ತಿದ್ದ.

ಕೇಸ್​ ಬಗ್ಗೆ ಡಿಸಿಪಿ ಮಾಹಿತಿ

ಅಪಘಾತವಾಗಿದೆ, ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗಿದೆ, ಸೈಟು ಖರೀದಿ ಮಾಡುವುದಕ್ಕೆ ಹಣ ಬೇಕು ಎಂದು ವಿವಿಧ ಕಾರಣಗಳನ್ನ ನೀಡಿ ಮಹಿಳೆಯರಿಂದ ನಗ- ನಾಣ್ಯ ದೋಚುತ್ತಿದ್ದ. ಒಮ್ಮೆ ಹಣ ಕೈಗೆ ಸೇರುತ್ತಿದ್ದಂತೆ ಅವರ ಫೋನ್ ನಂಬರ್‌ ಬ್ಲಾಕ್ ಮಾಡಿ ಕಣ್ಮರೆಯಾಗುತ್ತಿದ್ದ. ಇದೇ ತಂತ್ರ ಬಳಸಿ ಹತ್ತಾರು ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾನೆ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಕದ್ದ 16 ಬೈಕ್​​​ಗಳು ಜಪ್ತಿ: ಕಳ್ಳತನದ ಬೈಕ್ ಖರೀದಿಸಿದವರ ಮೇಲೂ ಬಿತ್ತು ಕೇಸ್

ಆರೋಪಿ ಜಗನ್ನಾಥ್​ ವಿರುದ್ಧ ಬನಶಂಕರಿ, ಬಾಗಲೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ‌‌.‌ ಈ ಹಿಂದೆ ಬನಶಂಕರಿ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದ‌. ಜಾಮೀನು ಪಡೆದು ಹೊರಬಂದು ಮತ್ತೆ ಹಳೆ ಕಾಯಕವನ್ನೇ ಮುಂದುವರೆಸಿದ್ದ. ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಳ್ಳುತ್ತಿದ್ದ ಮಹಿಳೆಯರನ್ನು ಗುರುತು ಇಟ್ಟುಕೊಳ್ಳಲು ಕೋಡ್​​ ನಂಬರ್ ಸಮೇತ ಮೊಬೈಲ್​ನಲ್ಲಿ ನಮೂದು ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.