ETV Bharat / state

ಮೋದಿ ದೇಶ ಒಗ್ಗೂಡಿಸುವ ಬದಲು ವಿಭಜನೆ ಮಾಡುತ್ತಿದ್ದಾರೆ : ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ

ಪ್ರಜಾಪ್ರಭುತ್ವವನ್ನೂ ಇವರು ಒಪ್ಪಲ್ಲ. ಹಿಂದೆಯೂ ಅದನ್ನೇ ಹೇಳಿದ್ದೆ, ಈಗಲೂ ಅದನ್ನೇ ಹೇಳ್ತೇನೆ. ಇವರು ದೇಶ ಒಡೆಯುವ ಕೆಲಸ ಮಾಡ್ತಿದ್ದಾರೆ. ನಾವು ದೇಶ ಒಗ್ಗೂಡಿಸುವ ಪ್ರಯತ್ನ ಮಾಡ್ತೇವೆ ಎಂದರು. ಬಿಜೆಪಿಯವರು ದೇಶವನ್ನ ಛಿದ್ರ ಛಿದ್ರ ಮಾಡುತ್ತಿದ್ದಾರೆ. ನಾವು ಬಹಳಷ್ಟು ದಿನ ಅಧಿಕಾರ ಮಾಡ್ತೇವೆ ಅಂದುಕೊಂಡಿದ್ದಾರೆ..

Mallikarjun kharge
ಮಲ್ಲಿಕಾರ್ಜುನ್ ಖರ್ಗೆ
author img

By

Published : Apr 5, 2021, 5:36 PM IST

ಬೆಂಗಳೂರು : ಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ದೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದು ಬರೀ ಸುಳ್ಳು ಸುದ್ದಿ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಡಾ.ಬಾಬು ಜಗಜೀವನರಾಂ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.

ಬಾಂಗ್ಲಾ ಹೋರಾಟದಲ್ಲೇ ಅವರು ಭಾಗವಹಿಸಿರಲಿಲ್ಲ. ಬರೀ ಸುಳ್ಳು ಹೇಳಿಕೊಂಡೇ ಹೊರಟಿದ್ದಾರೆ. ಪಾಪ ಅವರು ಇನ್ನೊಂದು ಹೇಳಬೇಕಿತ್ತು. ದೇಶದ ಸ್ವಾತಂತ್ರ್ಯದಲ್ಲಿ ಪಾಲ್ಗೊಂಡಿದ್ದೆ ಅಂತ. ಆದರೆ, ಹಾಗೇ ಹೇಳಲಿಲ್ಲವಷ್ಟೇ.. ಜಾತಿ ಜಾತಿಗಳ ನಡುವೆ ಧ್ವೇಷ ಮೂಡಿಸುತ್ತಿದ್ದಾರೆ. ಧರ್ಮ ಮುಂದಿಟ್ಟುಕೊಂಡೇ ಅಧಿಕಾರಕ್ಕೆ ಬಂದವರು. ದೇಶದ ಅಭಿವೃದ್ಧಿಯ ಬಗ್ಗೆ ಎಲ್ಲೂ ಮಾತನಾಡಲಿಲ್ಲ. ದೇಶವನ್ನ ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗ್ತಿದ್ದಾರೆ ಎಂದರು.

ಕೆಪಿಸಿಸಿ ಕಚೇರಿಯಲ್ಲಿ ಡಾ.ಬಾಬು ಜಗಜೀವನರಾಂ ಜನ್ಮ ದಿನಾಚರಣೆ

ಕೇರಳ, ಬಸವಕಲ್ಯಾಣದಲ್ಲಿ ಆರ್​ಎಸ್​ಎಸ್ ಐಡಿಯಾಲಜಿ ಮಾಡ್ತಿದ್ದಾರೆ. ಇದೊಂದು ವಿಷ ವಿದ್ದಂತೆ. ವಿಷವನ್ನು ಎಲ್ಲಾದ್ರೂ ಟೇಸ್ಟ್ ಮಾಡೋಕೆ ಸಾಧ್ಯವಾಗುತ್ತಾ? ಒಂದು ತೊಟ್ಟು ಕುಡಿದರೆ ಸಾಕು ಸಾಯುತ್ತಾರೆ. ಹೋಗಲಿ ಅಂತ ಒಮ್ಮೆ ಅವಕಾಶ ಕೊಟ್ಟರೆ ಮುಗೀತು. ಎಲ್ಲವೂ ಮುಗಿದಂತೆಯೇ ಸರಿ. ಸಂವಿಧಾನವನ್ನು ಇವರು ಒಪ್ಪಲ್ಲ.

ಪ್ರಜಾಪ್ರಭುತ್ವವನ್ನೂ ಇವರು ಒಪ್ಪಲ್ಲ. ಹಿಂದೆಯೂ ಅದನ್ನೇ ಹೇಳಿದ್ದೆ, ಈಗಲೂ ಅದನ್ನೇ ಹೇಳ್ತೇನೆ. ಇವರು ದೇಶ ಒಡೆಯುವ ಕೆಲಸ ಮಾಡ್ತಿದ್ದಾರೆ. ನಾವು ದೇಶ ಒಗ್ಗೂಡಿಸುವ ಪ್ರಯತ್ನ ಮಾಡ್ತೇವೆ ಎಂದರು. ಬಿಜೆಪಿಯವರು ದೇಶವನ್ನ ಛಿದ್ರ ಛಿದ್ರ ಮಾಡುತ್ತಿದ್ದಾರೆ. ನಾವು ಬಹಳಷ್ಟು ದಿನ ಅಧಿಕಾರ ಮಾಡ್ತೇವೆ ಅಂದುಕೊಂಡಿದ್ದಾರೆ.

ಆದರೆ, ಜನ ಎಷ್ಟು ದಿನ ಅಂತ ಸುಮ್ಮನೆ ಬಿಡ್ತಾರೆ. ಇಂದಲ್ಲ ನಾಳೆ ಅವರಿಗೆ ಬುದ್ಧಿ ಕಲಿಸ್ತಾರೆ. ಹೋದ ಕಡೆಯೆಲ್ಲ ಭ್ರಷ್ಟ ಸರ್ಕಾರ ಇವೆ ಅಂತಾರೆ. ಇವರ ಪಕ್ಷದಲ್ಲೇ ಭ್ರಷ್ಟರು ತುಂಬಿಕೊಂಡಿದ್ದಾರೆ. ಇವರೇನು ಹರಿಶ್ಚಂದ್ರರ ಮಕ್ಕಳೇ? ಎಂದು ಬಿಜೆಪಿ ರಾಷ್ಟ್ರೀಯ ನಾಯಕರ ವಿರುದ್ಧ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಿಜೆಪಿಯಲ್ಲಿ ವಂಶಪಾರಂಪರ್ಯ ಇಲ್ಲ, ಬಿಎಸ್​ವೈ ಪಕ್ಷದ ನಾಯಕರೇ ಹೊರತು ಮಾಲೀಕರಲ್ಲ : ಸಿ ಟಿ ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.