ETV Bharat / state

ಮಲ್ಲೇಶ್ವರ ವಿಧಾನಸಭೆ ಕ್ಷೇತ್ರ: ಬ್ರಾಹ್ಮಣ ಅಭ್ಯರ್ಥಿಗೆ ಕಾಂಗ್ರೆಸ್ ಮಣೆ?

author img

By

Published : Dec 12, 2022, 3:22 PM IST

ಕಾಂಗ್ರೆಸ್ ಪಕ್ಷ ಈ ಸಾರಿ ಮಲ್ಲೇಶ್ವರ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಲು ತೀರ್ಮಾನಿಸಿದೆಯೇ?. ಜನಪ್ರಿಯ ವಕೀಲ ಅಶೋಕ್ ಹಾರ್ನಳ್ಳಿ ಇಲ್ಲವೇ ಅನಂತ ಮಂಡಗಿ ಅವರಿಗೆ ಟಿಕೆಟ್ ನೀಡಲು ಬಹುತೇಕ ನಿರ್ಧಾರವಾಗಿದೆ ಎಂದು ಹೇಳಲಾಗುತ್ತಿದೆ.

Advocate Ashok Hornalli with former CM Siddaramaiah
ಮಾಜಿ ಸಿಎಂ ಸಿದ್ದರಾಮಯ್ಯನವರೊಂದಿಗೆ ವಕೀಲ ಅಶೋಕ್ ಹಾರ್ನಳ್ಳಿ

ಬೆಂಗಳೂರು: ಮಲ್ಲೇಶ್ವರ ವಿಧಾನಸಭೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ಈ ಬಾರಿ ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್ ನೀಡಲು ತೀರ್ಮಾನಿಸಿದೆ ಎನ್ನಲಾಗುತ್ತಿದೆ. ಮಲ್ಲೇಶ್ವರದಲ್ಲಿ ಸರಿಸುಮಾರು 65 ಸಾವಿರದಷ್ಟಿರುವ ಬ್ರಾಹ್ಮಣ ಸಮುದಾಯದ ಮತಗಳು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿವೆ. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಸತತವಾಗಿ ಗೆಲ್ಲುತ್ತಿರುವ ಬಿಜೆಪಿ ಅಭ್ಯರ್ಥಿ ಡಾ.ಅಶ್ವತ್ಥನಾರಾಯಣ ಹಾಗೂ ಕೇಸರಿ ಪಕ್ಷದ ನಾಗಾಲೋಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಯೋಜನೆ ರೂಪಿಸುತ್ತಿದೆ.

ಈ ಬಾರಿ ಬಿಜೆಪಿಯ ಸಾಂಪ್ರದಾಯಿಕ ಮತ ಬ್ಯಾಂಕ್ ಮೇಲೆ ಕೈ ಪಕ್ಷ ಕಣ್ಣು ಹಾಕಿದೆ. ರಾಮನಗರದಲ್ಲಿ ಡಿಕೆ ಸೋದರರ ವಿರುದ್ಧ ತೊಡೆ ತಟ್ಟಿರುವ ಅಶ್ವತ್ಥನಾರಾಯಣರನ್ನು ಸೋಲಿಸುವುದು ಕಾಂಗ್ರೆಸ್​ಗೆ ಈ ಸಾರಿ ಪ್ರತಿಷ್ಠೆಯಾಗಿದೆ. ಅತ್ಯಂತ ಸುಭದ್ರವಾಗಿ ಅಶ್ವತ್ಥನಾರಾಯಣ ಹಾಗೂ ಬಿಜೆಪಿ ಬೇರೂರಿರುವ ಸಂದರ್ಭದಲ್ಲಿ ಬಹುಸಂಖ್ಯಾತ ಮತದಾರರನ್ನು ಸೆಳೆಯುವುದು ಕಾಂಗ್ರೆಸ್​ಗೆ ಕಂಡ ಸುಲಭ ಮಾರ್ಗವಾಗಿದೆ.

Anant Mandagi
ಅನಂತ ಮಂಡಗಿ

ಆಸ್ತಿಕರ ಶ್ರದ್ಧಾ ಕೇಂದ್ರಗಳಾದ ಹಲವು ದೇಗುಲಗಳು ಇಲ್ಲಿವೆ. ಇಲ್ಲಿನ ಪ್ರಸಿದ್ಧ ದೇವಸ್ಥಾನ ಕಾಡು ಮಲ್ಲೇಶ್ವರ. ಹಾಗೆಯೇ ಗಣಪತಿ, ಗಾಯತ್ರಿ ಮಂದಿರ, ಗಂಗಮ್ಮನ ಗುಡಿಗಳೂ ಇವೆ. ಸುಂದರ ಉದ್ಯಾನಗಳಿಗೂ ಕೊರತೆಯಿಲ್ಲ. ಶುದ್ಧೀಕರಣಗೊಂಡಿರುವ ಸ್ಯಾಂಕಿ ಕೆರೆ ಮತ್ತು ಅದರ ದಡ ಪ್ರದೇಶವು ವಾಯುವಿಹಾರಿಗಳ ನೆಚ್ಚಿನ ತಾಣವೆನಿಸಿದೆ. ಒಟ್ಟಾರೆ ನಿವೃತ್ತರ ಸ್ವರ್ಗ ಎನಿಸಿಕೊಂಡಿರುವಲ್ಲಿ ಬೆಂಗಳೂರಿಗೆ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ಸಹಕಾರವೂ ದೊಡ್ಡದಿದೆ.

2008ರಲ್ಲಿ ಬಿಜೆಪಿಯಿಂದ ಅಶ್ವತ್ಥನಾರಾಯಣ ಗೆಲುವು ಸಾಧಿಸಿದ್ದಾರೆ. 2008, 2013, 2018ರಲ್ಲಿ ಸತತ ಮೂರು ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧಿಸಿರುವ ಶಾಸಕರಿಗೆ ಈ ಸಾರಿ ಗೆಲುವು ದೊಡ್ಡ ಸವಾಲಿನದ್ದಲ್ಲ ಎನ್ನಲಾಗುತ್ತಿದೆ. ಉಪಮುಖ್ಯಮಂತ್ರಿಯಾಗಿ, ಉನ್ನತ ಶಿಕ್ಷಣ ಸಚಿವರಾಗಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಇರುವ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಶತಾಯಗತಾಯ ಅಶ್ವತ್ಥನಾರಾಯಣರನ್ನು ಸೋಲಿಸಬೇಕೆಂದು ಪಣತೊಟ್ಟಿದ್ದು, ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಿದ್ಧತೆ ಕೈಗೊಂಡಿದ್ದಾರೆ.

ಕೈ ಇತಿಹಾಸ ನೋಡೋಣ: 1957ರಿಂದ ಇದುವರೆಗೂ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇಲ್ಲಿ ಗೆದ್ದಿದೆ, ಇಲ್ಲವೇ ಎರಡನೇ ಸ್ಥಾನ ಪಡೆದಿದೆ. 1957ರಲ್ಲಿ ಕುಮಾರನ್ ಕೆ.ಎಸ್. ಅವರು ಪಕ್ಷೇತರ ಅಭ್ಯರ್ಥಿ ಪಾರ್ಥಸಾರಥಿ ಟಿ. ವಿರುದ್ಧ 1,686 ಮತಗಳ ಸೋಲು ಕಂಡಿದ್ದರು. 1962ರಲ್ಲಿ ಕಾಂಗ್ರೆಸ್​ನ ಕೆ. ಶ್ರೀರಾಮುಲು ಅವರು ಪಕ್ಷೇತರ ಅಭ್ಯರ್ಥಿ ಕೆ. ದೇವಯ್ಯ ವಿರುದ್ಧ 265 ಮತಗಳ ಸೋಲು ಕಂಡಿದ್ದರು. 1967ರಲ್ಲಿ ಕಾಂಗ್ರೆಸ್ ಪಕ್ಷದ ಕೆ.ಎಚ್. ಶ್ರೀನಿವಾಸ ಅವರು ಎಸ್ಎಸ್ಪಿ ಅಭ್ಯರ್ಥಿ ವಿರುದ್ಧ 749 ಮತಗಳ ಅಂತರದ ಗೆಲುವು ಸಾಧಿಸಿ ಕಾಂಗ್ರೆಸ್ ಖಾತೆ ತೆರೆದಿದ್ದರು. 1972ರಲ್ಲಿ ಎಸ್ಒಪಿ ಪಕ್ಷದಿಂದ ಕಣಕ್ಕಿಳಿದಿದ್ದ ಕಾಗೋಡು ತಿಮ್ಮಪ್ಪ ಅವರು ಕಾಂಗ್ರೆಸ್​ನ ತಿಮ್ಮಪ್ಪ ಹೆಗಡೆ ವಿರುದ್ಧ 5,217 ಮತಗಳ ಅಂತರದ ಗೆದ್ದಿದ್ದರು.

1978ರಲ್ಲಿ ಕಾಂಗ್ರೆಸ್ (ಐ) ನಿಂದ ಸ್ಪರ್ಧಿಸಿದ್ದ ಎಚ್.ಎಂ. ಮಲ್ಲಿಕಾರ್ಜುನಪ್ಪ ಜೆಎನ್ಪಿ ಪಕ್ಷದ ಎಚ್.ಆರ್. ಬಸವರಾಜು ವಿರುದ್ಧ 7,538 ಮತಗಳ ಅಂತರದ ಗೆಲುವು ಸಾಧಿಸಿದ್ದರು. 1983ರಲ್ಲಿ ಕಾಂಗ್ರೆಸ್​ನಿಂದ ಎಚ್.ಆರ್. ರಾಜು ಅವರು ಜೆಎನ್ಪಿ ಪಕ್ಷದ ಟಿ.ವಿ. ಶಿವಶಂಕರಪ್ಪ ವಿರುದ್ಧ 16,707 ಮತಗಳಿಂದ ಗೆದ್ದಿದ್ದರು. 1985ರಲ್ಲಿ ಜೆಎನ್ಪಿಯ ಬಿ.ಆರ್.ನೀಲಕಂಠಪ್ಪ ಅವರು ಕಾಂಗ್ರೆಸ್​ನ ಎಸ್.ಎಂ. ನಾಗರಾಜಪ್ಪ ವಿರುದ್ಧ 6770 ಮತಗಳ ಅಂತರದ ಗೆಲುವು ಸಾಧಿಸಿದರು. 1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಎಚ್.ಆರ್. ರಾಜು ಮತ್ತೊಮ್ಮೆ ನೀಲಕಂಠಪ್ಪರನ್ನು 18,423 ಮತಗಳ ಅಂತರದಿಂದ ಸೋಲಿಸಿದರು. ಆ ಸಾರಿ ನೀಲಕಂಠಪ್ಪ ಜನತಾ ಪರಿವಾರದ ಅಭ್ಯರ್ಥಿ ಆಗಿದ್ದರು. 1994ರಲ್ಲಿ ಸ್ವತಂತ್ರ ಅಭ್ಯರ್ಥಿ ಎಸ್.ಎಂ. ನಾಗರಾಜು ಗೆಲುವು ಸಾಧಿಸಿದರು. ಜನತಾದಳದಿಂದ ಕಣಕ್ಕಿಳಿದಿದ್ದ ಬಿ.ಆರ್. ನೀಲಕಂಠಪ್ಪ ವಿರುದ್ಧ ಅವರು 557 ಮತಗಳ ಗೆಲುವು ಪಡೆದಿದ್ದರು. 1999ರಲ್ಲಿ ಕ್ಷೇತ್ರ ಮರಳಿ ಕಾಂಗ್ರೆಸ್ ತೆಕ್ಕೆಗೆ ಬಂತು. ಬಿ.ಆರ್. ನೀಲಕಂಠಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಜೆಡಿಯು ಅಭ್ಯರ್ಥಿ ಎಸ್.ಎಂ. ನಾಗರಾಜು ವಿರುದ್ಧ 22,435 ಮತಗಳ ಅಂತರದ ಗೆಲುವು ಸಾಧಿಸಿ ಸೇಡು ತೀರಿಸಿಕೊಂಡಿದ್ದರು.

2004ರಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದ ಶಿವಶಂಕರಪ್ಪ ಟಿ.ಎಚ್. ಅವರು ಬಿಜೆಪಿ ಅಭ್ಯರ್ಥಿ ಓಂಕಾರಪ್ಪ ಎಚ್ ವಿರುದ್ಧ 19674 ಮತಗಳ ಅಂತರದ ಗೆಲುವು ಸಾಧಿಸಿದರು. ಅದಾದ ಬಳಿಕ ನಿರಂತರವಾಗಿ 3 ಅವಧಿಗೆ ಬಿಜೆಪಿಯ ಅಶ್ವತ್ಥನಾರಾಯಣ ಗೆಲ್ಲುತ್ತಾ ಬಂದಿದ್ದಾರೆ. 2008ರಲ್ಲಿ ಮಾಜಿ ಸಚಿವ ಎಂ.ಆರ್. ಸೀತಾರಾಂ ವಿರುದ್ಧ 8118 ಮತಗಳ ಅಂತರದಿಂದ, 2013ರಲ್ಲಿ ಕಾಂಗ್ರೆಸ್​ನ ಬಿ.ಕೆ. ಶಿವರಾಂ ವಿರುದ್ಧ 21,066 ಮತಗಳ ಅಂತರ ಹಾಗೂ 2018ರಲ್ಲಿ ಕೆಂಗಲ್ ಶ್ರೀಪಾದರೇಣು ವಿರುದ್ಧ 54,000 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

ವಕೀಲ ಅಶೋಕ್ ಹಾರ್ನಳ್ಳಿ
ವಕೀಲ ಅಶೋಕ್ ಹಾರ್ನಳ್ಳಿ

ಬ್ರಾಹ್ಮಣ ಅಭ್ಯರ್ಥಿ: ಈ ಎಲ್ಲಾ ಅಂಶವನ್ನು ಗಮನಿಸಿ ಕಾಂಗ್ರೆಸ್ ಪಕ್ಷ ಈ ಸಾರಿ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಲು ತೀರ್ಮಾನಿಸಿದೆ. ಜನಪ್ರಿಯ ವಕೀಲರಾಗಿರುವ ಅಶೋಕ್ ಹಾರ್ನಳ್ಳಿ ಇಲ್ಲವೇ ಅನಂತ ಮಂಡಗಿ ಅವರಿಗೆ ಟಿಕೆಟ್ ನೀಡಲು ಬಹುತೇಕ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಇವರ ಜತೆ ಸಾಕಷ್ಟು ಸುತ್ತಿನ ಸಭೆ ಸಹ ನಡೆಸಿದ್ದಾರೆ. ಕಣಕ್ಕಿಳಿಯಲು ಇವರು ಸಹ ಸಮ್ಮತಿ ಸೂಚಿಸಿದ್ದಾರೆ ಎಂಬ ಮಾಹಿತಿ ಇದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರೂ ಆಗಿರುವ ಅಶೋಕ್ ಹಾರ್ನಳ್ಳಿ ಬಹುತೇಕ ಈ ಸಾರಿ ಕೈ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಭ್ಯರ್ಥಿ ವಿಚಾರ ಚರ್ಚೆ ಆಗಿಲ್ಲ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿರುವ ಅಶೋಕ್ ಹಾರ್ನಳ್ಳಿ ಮಾತನಾಡಿದ್ದು, ಕಾಂಗ್ರೆಸ್ ಪಕ್ಷದಿಂದ ಮಲ್ಲೇಶ್ವರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಂಬಂಧ ಕಾಂಗ್ರೆಸ್ ನಾಯಕರ ಜತೆ ಇದುವರೆಗೂ ಅಧಿಕೃತ ಮಾತುಕತೆ ಆಗಿಲ್ಲ. ಬೇರೆ ವಿಚಾರಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದೇನೆ. ಆದರೆ ರಾಜಕೀಯಕ್ಕೆ ಪ್ರವೇಶ ಮಾಡುವ ಸಂಬಂಧ ಯಾವುದೇ ನಿರ್ಧಾರ ಮಾಡಿಲ್ಲ. ಮಾಡುವುದಿದ್ದರೆ ವಕೀಲ ವಲಯ ಹಾಗೂ ಬ್ರಾಹ್ಮಣ ಮಹಾಸಭಾ ಪ್ರತಿನಿಧಿಗಳ ಜತೆ ಚರ್ಚಿಸಿಯೇ ನಿರ್ಧರಿಸುತ್ತೇನೆ. ಮಲ್ಲೇಶ್ವರದಲ್ಲಿ ಬ್ರಾಹ್ಮಣ ಮತದಾರರ ಸಂಖ್ಯೆ ದೊಡ್ಡದಿದೆ. ಕಾಂಗ್ರೆಸ್ ಪಕ್ಷ ಬ್ರಾಹ್ಮಣ ಸಮುದಾಯಕ್ಕೆ ಮಣೆ ಹಾಕುವುದರಿಂದ ಅವರಿಗೆ ಅನುಕೂಲವೇ ಹೆಚ್ಚು ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.