ಬೆಂಗಳೂರು : ಮೇಕ್ ಇನ್ ಇಂಡಿಯಾ ಅಭಿಯಾನದ ಸಿಂಹದ ಗುರುತಿನ ಲಾಂಛನವನ್ನು ವಿಂಡ್ಸರ್ ಮ್ಯಾನರ್ ವೃತ್ತದಲ್ಲಿ ಬಿಬಿಎಂಪಿ ಇದೇ ವಾರದಲ್ಲಿ ಪ್ರತಿಷ್ಠಾಪಿಸಲಿದೆ.
ಮೇಕ್ ಇನ್ ಇಂಡಿಯಾಗೆ ಕರ್ನಾಟಕ ಅತಿ ಹೆಚ್ಚು ಕೊಡುಗೆ ನೀಡುತ್ತಿದ್ದು, ಇದರ ಲಾಂಛನವನ್ನು ಇಲ್ಲಿ ಪ್ರತಿಷ್ಠಾಪಿಸುತ್ತಿರುವುದು ಹೆಮ್ಮೆಯ ವಿಷಯ. ಒಟ್ಟು ₹7.56 ಲಕ್ಷ ವೆಚ್ಚದಲ್ಲಿ 1140 ಕೆಜಿ ತೂಕದ, 23 ಫೀಟ್ ಉದ್ದ, 4.5 ಫೀಟ್ ಅಗಲ, 10 ಫೀಟ್ ಎತ್ತರದ ಘರ್ಜಿಸುತ್ತಿರುವ ಸಿಂಹದ ಲಾಂಛನ ಇದಾಗಿದೆ.
ದೆಹಲಿಯ ಗಾಝಿಯಾಬಾದ್‌ನಲ್ಲಿ ಲಾಂಛನ ಸಿದ್ಧವಾಗಿದ್ದು, ನಗರಕ್ಕೆ ಸದ್ಯದಲ್ಲೇ ಬರಲಿದೆ. ಸಿಎಂ ನಿವಾಸದ ಬಳಿಯೇ ಇರುವ ವಿಂಡ್ಸರ್ ಮ್ಯಾನರ್‌ನಲ್ಲಿ ಪೂರ್ವ ಸಿದ್ಧತೆಗಳು, ಸೌಂದರ್ಯೀಕರಣ ಈಗಲೇ ಪ್ರಗತಿಯಲ್ಲಿದೆ.
ಲಾಂಛನ ಎಲ್ಲಾ ಸುತ್ತಲೂ ತಿರುಗುವಂತದ್ದಾಗಿದೆ. ಲಾಂಛನದ ಸುತ್ತಲೂ ದೀಪಗಳ ಅಲಂಕಾರವೂ ಇರಲಿದೆ.