ETV Bharat / state

Maharaja Trophy: ಮಹಾರಾಜ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿದ ಶರತ್; ಮಂಗಳೂರು ಡ್ರ್ಯಾಗನ್ಸ್ ಜಯಭೇರಿ - ETV Bharath Kannada news

Mangalore Dragons: ಮಹಾರಾಜ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿಂದು ಮಂಗಳೂರು ಡ್ರ್ಯಾಗನ್ಸ್ ತಂಡವು ಮೈಸೂರು ನೀಡಿದ್ದ 202 ರನ್‌ ತಲುಪಿ ಗೆದ್ದು ಬೀಗಿತು.

maharaja-trophy-t20-2023-mangalore-dragons-won-by-5-wkts
Etv Bharatಟೂರ್ನಿಯ ಮೊದಲ ಶತಕ ದಾಖಲಿಸಿದ ಬಿ.ಆರ್.ಶರತ್
author img

By

Published : Aug 15, 2023, 7:28 PM IST

ಬೆಂಗಳೂರು: ಬಿ.ಆರ್.ಶರತ್ ದಾಖಲಿಸಿದ ಅಜೇಯ ಶತಕ (111) ಹಾಗೂ ರೋಹನ್ ಪಾಟೀಲ್ (54) ಅರ್ಧಶತಕದ ನೆರವಿನಿಂದ ಮೈಸೂರು ವಾರಿಯರ್ಸ್ ತಂಡದ ವಿರುದ್ಧ ಮಂಗಳೂರು ಡ್ರ್ಯಾಗನ್ಸ್ 5 ವಿಕೆಟ್‌ಗಳ ಜಯ ದಾಖಲಿಸಿದೆ. ಮೈಸೂರು ನೀಡಿದ 202 ರನ್​ಗಳ ಬೃಹತ್​ ಗುರಿಯನ್ನು ಮಂಗಳೂರು ತಂಡ 7 ಎಸೆತ ಬಾಕಿ​ ಇರುವಂತೆಯೇ ತಲುಪಿತು.

ಮಂಗಳೂರು ಇನ್ನಿಂಗ್ಸ್‌ ಹೀಗಿತ್ತು..: ಬೃಹತ್ ಗುರಿ ಚೇಸ್‌ ಪ್ರಾರಂಭಿಸಿದ ಮಂಗಳೂರು ತಂಡ 6 ರನ್​ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಎರಡನೇ ವಿಕೆಟ್‌ಗೆ​ ಒಂದಾದ ರೋಹನ್ ಪಾಟೀಲ್ ಹಾಗೂ ಬಿ.ಆರ್.ಶರತ್ ಮೈಸೂರು ಬೌಲರ್‌ಗಳ ಬೆವರಿಳಿಸಿದರು. ಟಿ20 ಪಂದ್ಯಕ್ಕೆ ಹೇಳಿಮಾಡಿಸಿದಂತಿರುವ ಬೆಂಗಳೂರು ಪಿಚ್​ನಲ್ಲಿ ಈ ಜೋಡಿ ಬೌಂಡರಿ, ಸಿಕ್ಸರ್​ಗಳ ಸುರಿಮಳೆಗೈದರು. 52 ಎಸೆತಗಳಲ್ಲಿ 96 ರನ್​ಗಳನ್ನು ಇಬ್ಬರು ಆಟಗಾರರು ಜಂಟಿಯಾಗಿ ಕಲೆಹಾಕಿದರು. ಇದರಿಂದಾಗಿ ಮಂಗಳೂರು ತಂಡಕ್ಕೆ ಬೃಹತ್​ ಗುರಿ ಭೇದಿಸುವ ಹಾದಿ ಸರಳವಾಯಿತು.

ಆದರೆ, 54 ರನ್ ಗಳಿಸಿದ್ದ ರೋಹನ್ ಪಾಟೀಲ್ ಜೆ.ಸುಚಿತ್​ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ವಿಕೆಟ್​ ಕೀಪರ್​ ಶರತ್​ ತಮ್ಮ ಏಕಾಂಗಿ ಆಟ ಮುಂದುವರೆಸಿದರು. ರೋಹನ್​ ನಂತರ ಮತ್ತಾರೂ ಕೂಡ ಶರತ್‌ಗೆ ಸೂಕ್ತ​ ಜೊತೆಯಾಟ ನೀಡಲಿಲ್ಲ. ಅನೀಶ್ವರ್ ಗೌತಮ್ (6), ಕೆ.ಸಿದ್ದಾರ್ಥ್ (14), ಅನಿರುದ್ಧ ಜೋಶಿ (2) ಬೇಗ ವಿಕೆಟ್​ ಕೊಟ್ಟರು.

99 ರನ್​ ಗಳಿಸಿ ಆಡುತ್ತಿದ್ದಾಗ ಶರತ್​ಗೆ ಒಂದು ಜೀವದಾನ ಸಿಕ್ಕಿತು. ಸಿ.ಎ.ಕಾರ್ತಿಕ್​ ಎಸೆತದಲ್ಲಿ ಮಿಡ್​ ಪಾಯಿಂಟ್​ನಲ್ಲಿ ಕಟ್​ ಮಾಡಲು ಹೋಗಿ ಕ್ಯಾಚಿತ್ತರು. ಆದರೆ ಇದು ಎದುರಾಳಿ ಆಟಗಾರ ಕೈತಪ್ಪಿದ್ದರಿಂದ ಮಹಾರಾಜ ಟ್ರೋಫಿಯ ಮೊಟ್ಟಮೊದಲ ಶತಕವನ್ನು ಶರತ್ ದಾಖಲಿಸಿದರು. ಕೇವಲ 57 ಎಸೆತಗಳಲ್ಲಿ ಶತಕ ಮೂಡಿಬಂದಿದ್ದು ವಿಶೇಷವಾಗಿತ್ತು. ಅಂತಿಮವಾಗಿ ಶರತ್ ಹಾಗೂ ನಾಯಕ ಗೌತಮ್ ಜೋಡಿ 7 ಎಸೆತ ಬಾಕಿ‌ ಇರುವಂತೆಯೇ ಮಂಗಳೂರಿಗೆ ಗೆಲುವು ತಂದಿಟ್ಟರು. 61 ಎಸೆತಗಳಲ್ಲಿ 111 ರನ್ ಗಳಿಸಿದ ಶರತ್ ಅಜೇಯರಾಗುಳಿದರು.

ಮೈಸೂರು ಇನ್ನಿಂಗ್ಸ್‌ ವಿವರ: ಇದಕ್ಕೂ ಮೊದಲು, ಟಾಸ್​ ಸೋತ ಮೈಸೂರು ತಂಡ ಬ್ಯಾಟಿಂಗ್​ಗೆ ಇಳಿಯಿತು. ಸಿ.ಎ.ಕಾರ್ತಿಕ್ (29) ಮತ್ತು ಸಮರ್ಥ ಜೋಡಿ 42 ರನ್​ ಜೊತೆಯಾಟದ ಉತ್ತಮ ಆರಂಭ ನೀಡಿದರು. ಕಾರ್ತಿಕ್​ ವಿಕೆಟ್ ಬೆನ್ನಲ್ಲೇ ಸಮರ್ಥ ಔಟಾದರು. ನಾಯಕ ಕರಣ್​ ನಾಯರ್​ ತಮ್ಮ ಫಾರ್ಮ್​ನಲ್ಲಿ ಆಟ ಮುನ್ನಡೆಸಿದರು. ಅವರಿಗೆ ರಾಹುಲ್​ ರಾವತ್​ (24), ತುಷಾರ್ ಸಿಂಗ್​ (20) ಬೆಂಬಲ ನೀಡಿದರು.

ಇವರ ಜೊತೆ ಸೇರಿ ಕರಣ್​ ನಾಯರ್​ 39 ಎಸೆತಗಳಲ್ಲಿ 77 ರನ್​ ಗಳಿಸಿದರು. 77 ರನ್​ ಗಳಿಸಿ ಆಡುತ್ತಿದ್ದಾಗ ನಾಯರ್​ ರನೌಟ್​ಗೆ ಬಲಿಯಾದರು. ಮನೋಜ್ ಭಾಂಡಗೆ 10 ಎಸೆತಗಳಲ್ಲಿ 26* ರನ್ ಗಳಿಸಿ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ನಿಗದಿತ ಓವರ್‌ಗಳ ಅಂತ್ಯಕ್ಕೆ ಮೈಸೂರು ವಾರಿಯರ್ಸ್ 5 ವಿಕೆಟ್‌ಗಳನ್ನು ಕಳೆದುಕೊಂಡು 201 ರನ್ ದಾಖಲಿಸಿತು.

ಇದನ್ನೂ ಓದಿ: Maharaja Trophy: ಲವನಿತ್ - ಶ್ರೀಜಿತ್ ಶತಕದ ಜೊತೆಯಾಟ, ಹುಬ್ಬಳ್ಳಿ ಟೈಗರ್ಸ್​ಗೆ 7 ವಿಕೆಟ್​ ಜಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.