ETV Bharat / state

Maharaja Trophy: ಹುಬ್ಬಳ್ಳಿಗೆ ಹ್ಯಾಟ್ರಿಕ್ ಜಯ, ಬೆಂಗಳೂರು ಬ್ಲಾಸ್ಟರ್ಸ್​ಗೆ ಸತತ ಸೋಲು - ETV Bharath Kannada news

Hubli Tigers: ಮಹಾರಾಜ ಟ್ರೋಫಿ ಟಿ20 ಟೂರ್ನಿಯ 7ನೇ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಹುಬ್ಬಳ್ಳಿ 5 ವಿಕೆಟ್‌ಗಳಿಂದ ಬಗ್ಗುಬಡಿಯಿತು.

Bengaluru Blasters
Bengaluru Blasters
author img

By

Published : Aug 16, 2023, 7:45 PM IST

Updated : Aug 16, 2023, 8:24 PM IST

ಬೆಂಗಳೂರು: ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 5 ವಿಕೆಟ್‌ಗಳ ಅಂತರದಲ್ಲಿ ಮಣಿಸಿದ ಹುಬ್ಬಳ್ಳಿ ಟೈಗರ್ಸ್ ಮಹಾರಾಜ ಟ್ರೋಫಿಯಲ್ಲಿ ಹ್ಯಾಟ್ರಿಕ್​ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಮನ್ವಂತ್ ಕುಮಾರ್ (4 ವಿಕೆಟ್ ಹಾಗೂ 28 ರನ್) ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಹುಬ್ಬಳ್ಳಿ ಸುಲಭ ಜಯಕಂಡಿತು. ಮತ್ತೊಂದೆಡೆ, ಹಾಲಿ ರನ್ನರ್‌ ಅಪ್ ಬೆಂಗಳೂರು ಬ್ಲಾಸ್ಟರ್ಸ್ ಟೂರ್ನಿಯಲ್ಲಿ ಸತತ ಮೂರನೇ ಸೋಲು ಅನುಭವಿಸಿತು.

ಟಾಸ್​ ಗೆದ್ದ ಹುಬ್ಬಳ್ಳಿ ಟೈಗರ್ಸ್​ ಬೌಲಿಂಗ್​ ಆಯ್ಕೆ ಮಾಡಿಕೊಂಡು ಬೆಂಗಳೂರು ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿತು. ಬೆಂಗಳೂರು ಕೇವಲ 106 ರನ್​ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಹುಬ್ಬಳ್ಳಿ ಆರಂಭಿಕ ಜೋಡಿಯಿಂದ 44 ರನ್​ ಜೊತೆಯಾಟ ಪಡೆಯಿತು. ಲವನಿತ್ ಸಿಸೋಡಿಯಾ ಚುರುಕಾದ ಇನ್ನಿಂಗ್ಸ್​ ಕಟ್ಟಿದರು. 10 ರನ್​ ಗಳಿಸಿದ್ದ ಮೊಹಮ್ಮದ್ ತಾಹಾರನ್ನು ಶುಭಾಂಗ್ ಹೆಗ್ಡೆ ಪೆವಿಲಿಯನ್​ಗೆ ಕಳಿಸಿದರು.

ಈ ಎರಡು ವಿಕೆಟ್‌ಗಳ​ ಬೆನ್ನಲ್ಲೇ ಕೆ.ಶ್ರೀಜಿತ್ ಮತ್ತು ನಾಗಭರತ್ ವಿಕೆಟ್​ ಸಹ ಉರುಳಿತು. ಇದ್ದ ಅಲ್ಪ ಗುರಿ ಸಾಧಿಸುವಲ್ಲಿ ತಂಡ ಎಡವಿ ಬೀಳಲಿದೆ ಎಂಬ ಸಂದರ್ಭದಲ್ಲಿ ನಾಯಕ ಮನೀಶ್​ ಪಾಂಡೆ ಮತ್ತು ಮನ್ವಂತ್ ಕುಮಾರ್ ತಂಡಕ್ಕೆ ಆಸರೆಯಾದರು. ಇಬ್ಬರು ಆಟಗಾರರು ವೇಗವಾಗಿ ಇನ್ನಿಂಗ್ಸ್​ ಕಟ್ಟಿದರು. ಗೆಲುವಿಗೆ 9 ರನ್​ ಬಾಕಿ ಇದ್ದಾಗ ಮನ್ವಂತ್ ವಿಕೆಟ್​ ಕೊಟ್ಟರು. ನಾಯಕ ಮನೀಶ್​ ಪಾಂಡೆ ಅಜೇಯವಾಗಿ ನಿಂತು ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೊದಲ ಇನ್ನಿಂಗ್ಸ್: ಬೆಂಗಳೂರು ಬ್ಲಾಸ್ಟರ್ಸ್ ನಾಯಕ ಮಯಾಂಕ್ ಅಗರ್ವಾಲ್ ಅರ್ಧಶತಕ ದಾಖಲಿಸಿದ್ದು ಹೊರತುಪಡಿಸಿದರೆ ಯಾವೊಬ್ಬ ಆಟಗಾರನೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಮಧ್ಯಮ ಕ್ರಮಾಂಕದ ಆಟಗಾರರಾದ ಜೆಸ್ವಂತ್ ಆಚಾರ್ಯ (7), ಪವನ್ ದೇಶಪಾಂಡೆ (1) ಅನುಭವಿ ಸ್ಪಿನ್ನರ್‌ ಪ್ರವೀಣ್ ದುಬೆಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರೆ, ಕೊಂಚ ಪ್ರತಿರೋಧ ತೋರಿದ ಸೂರಜ್ ಅಹುಜಾ (14) ರನೌಟ್‌ಗೆ ಬಲಿಯಾದರು. ಈ ಹಂತದಲ್ಲಿ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮಯಾಂಕ್ ಅಗರ್ವಾಲ್ ಹದಿನಾಲ್ಕನೇ ಓವರ್‌ನಲ್ಲಿ ಯುವ ಆಟಗಾರ ಮನ್ವಂತ್ ಕುಮಾರ್ ಶಿಸ್ತಿನ ಬೌಲಿಂಗ್‌ಗೆ ಬಲಿಯಾದರು. ನಂತರ ಬಂದ ಲೋಚನ್ ಅಪ್ಪಣ್ಣ(2), ಆಶಿಶ್ ಮಹೇಶ್ (2), ರಿಷಿ ಬೋಪಣ್ಣ (0) ಮತ್ತು ಎಲ್‌.ಆರ್.ಕುಮಾರ್ (6) ಹಾಗೂ ಪ್ರದೀಪ್.ಟಿ (2) ರನ್‌ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಬೆಂಗಳೂರು ಬ್ಲಾಸ್ಟರ್ಸ್ 18.4 ಓವರ್​ಗೆ 105 ರನ್‌ಗಳಿಗೆ ಆಲ್ ಔಟ್ ಆಯಿತು.

ಸಂಕ್ಷಿಪ್ತ ಸ್ಕೋರ್​: ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ - 105/10 (18.4), (ಮಯಾಂಕ್ ಅಗರ್ವಾಲ್ - 50, ಸೂರಜ್ ಅಹುಜಾ - 14, ಮನ್ವಂತ್ ಕುಮಾರ್ ಎಲ್ - 4/15, ಪ್ರವೀಣ್ ದುಬೆ - 2/22) ಹುಬ್ಬಳ್ಳಿ ಟೈಗರ್ಸ್ - 111/5 (13.3), (ಲವನಿತ್ ಸಿಸೋಡಿಯಾ - 33, ಮನ್ವಂತ್ ಕುಮಾರ್ - 28, ಮನೀಶ್ ಪಾಂಡೆ - 23*, ಸರ್ಫರಾಜ್ ಅಶ್ರಫ್ - 2/22, ಕುಮಾರ್ ಎಲ್.ಆರ್ - 1/9) ಫಲಿತಾಂಶ: ಹುಬ್ಬಳ್ಳಿಗೆ ಐದು ವಿಕೆಟ್​ಗಳ ಗೆಲುವು.

ಇದನ್ನೂ ಓದಿ: Maharaja Trophy: ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಜಯ ಸಾಧಿಸಿದ ಶಿವಮೊಗ್ಗ ಲಯನ್ಸ್

Last Updated : Aug 16, 2023, 8:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.