ಬೆಂಗಳೂರು: ನಾನು ರಾಜಕೀಯವಾಗಿ ಚಿಕ್ಕವನು. ಅವರ ಮನೆ ಅನ್ನ ತಿಂದಿದ್ದೇನೆ. ಅವರು ಏನೇ ಹೇಳಿದರು ಅದನ್ನು ಆರ್ಶಿವಾದ ಅಂತ ತಿಳಿದುಕೊಂಡಿದ್ದೇನೆ ಎಂದು ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ತಿಳಿಸಿದರು.
ನಾನು ನಮ್ಮ ಪಕ್ಷ ಇಲ್ಲದೇ ಇದ್ದಿದ್ದರೆ, ಪೊಲೀಸರು- ರೌಡಿಗಳು ಎನ್ಕೌಂಟರ್ ಮಾಡುತ್ತಿದ್ದರು ಎಂಬ ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ, ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸೋಕೆ ನಾನು ರಾಜಕೀಯವಾಗಿ ಚಿಕ್ಕವನು. ಅವರ ಮನೆ ಅನ್ನ ತಿಂದಿದ್ದೇನೆ. ಅವರು ಏನೇ ಹೇಳಿದರೂ ಅದನ್ನು ಆಶೀರ್ವಾದ ಅಂತ ತಿಳಿದುಕೊಂಡಿದ್ದೇನೆ. ಅವರ ಬಗ್ಗೆ ಯಾವುದೇ ಮಾತನಾಡುವುದಿಲ್ಲ ಅಂತ ಪ್ರತಿಕ್ರಿಯಿಸಿದರು.
ಇತ್ತ ನಾಳೆ ಸಿಎಂ ಯಡಿಯೂರಪ್ಪ ಮತ್ತೊಮ್ಮ ಕ್ಷೇತ್ರಕ್ಕೆ ಬರಲಿದ್ದು, ಸಮಾವೇಶದಲ್ಲಿ ಭಾಗಿಯಾಗುತ್ತಾರೆ. 7 ವಾರ್ಡ್ ಗಳಿಂದ ಜನ ಸೇರುತ್ತಾರೆ. ಕುರುಬರಹಳ್ಳಿ ಸರ್ಕಲ್ನಲ್ಲಿ ಸಮಾವೇಶ ನಡೆಯಲಿದ್ದು, ಸಕಲ ಸಿದ್ಧತೆ ನಡೆಸಲಾಗುತ್ತಿದೆ ಅಂತ ತಿಳಿಸಿದರು.