ಬೆಂಗಳೂರು: ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುಬಾರಿ ಬೆಲೆಯ ಡ್ಯೂಕ್ ಹಾಗೂ ಬುಲೆಟ್ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮನೋಹರ್ ಹಾಗೂ ಲೋಗನಾಥನ್ ಬಂಧಿತ ಆರೋಪಿಗಳು.
ಇವರು ಮಡಿವಾಳ, ಕೋರಮಂಗಲ,ಬೊಮ್ಮನ ಹಳ್ಳಿ, ಆಡುಗೋಡಿ ಸುತ್ತಮುತ್ತ ಮನೆಯ ಮುಂದೆ ನಿಲ್ಲಿಸಿದ ಬೈಕುಗಳನ್ನು ರಾತ್ರಿ ವೇಳೆ ಎಗರಿಸಿ ಪರಾರಿಯಾಗ್ತಿದ್ರು. ನಂತರ ಲಕ್ಷಗಟ್ಟಲೆ ಬೆಲೆ ಬಾಳುವ ಬೈಕುಗಳನ್ನು ಹತ್ತಿಪ್ಪತ್ತು ಸಾವಿರ ರೂಗೆ ಮಾರಾಟ ಮಾಡಿ ಹಣ ಸಂಪಾದಿಸ್ತಿದ್ರು ಎಂಬ ವಿಚಾರ ತನಿಖೆ ವೇಳೆ ಗೊತ್ತಾಗಿದೆ.
ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದರಿಂದ ಪೊಲೀಸರಿಗೆ ಆರೋಪಿಯನ್ನು ಹಿಡಿಯಲು ಸಹಾಯಕವಾಗಿದೆ. ಅಂದಾಜು 20 ಲಕ್ಷ ರೂ ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.