ETV Bharat / state

ಸಲಿಂಗಕಾಮಿಗಳ ನಡುವೆ ಸೆಕ್ಸ್ ವಿಚಾರಕ್ಕೆ ಗಲಾಟೆ, ಕೊಲೆ: ಆಟೋ ಚಾಲಕನ ಬಂಧನ - ಬೆಂಗಳೂರು ಕ್ಯಾಷಿಯರ್ ಲೇಔಟ್ ಕೊಲೆ ಪ್ರಕರಣ

ಸಲಿಂಗಕಾಮಿಗಳ ನಡುವೆ ಸಂಭೋಗದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಓರ್ವ ಕೊಲೆಗೀಡಾಗಿದ್ದು, ಆರೋಪಿಯನ್ನು ಬೆಂಗಳೂರಿನ ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

madivala-police-arrested-accused-in-murder-case
ಬೆಂಗಳೂರು: ಸಲಿಂಗಕಾಮಿಗಳ ನಡುವೆ ಸೆಕ್ಸ್ ವಿಚಾರಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ
author img

By

Published : Jun 10, 2022, 3:48 PM IST

ಬೆಂಗಳೂರು: ಲೈಂಗಿಕ ಕ್ರಿಯೆ ವಿಚಾರಕ್ಕೆ ಸಲಿಂಗಕಾಮಿಗಳ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಹತ್ಯೆ ಆರೋಪದಡಿ ಮಡಿವಾಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೂಡಲಪಾಳ್ಯ ನಿವಾಸಿ ಆಟೋ ಚಾಲಕ ರಕ್ಷಿತ್ ಗೌಡ ಬಂಧಿತ ಆರೋಪಿ.

ಮಡಿವಾಳದ ಕ್ಯಾಷಿಯರ್ ಲೇಔಟ್​​ನಲ್ಲಿ ವಾಸವಾಗಿದ್ದ ಪ್ರದೀಪ್ ಕೊಲೆಯಾದವ. ಕಳೆದ ತಿಂಗಳು ಪ್ರದೀಪ್​ನನ್ನು ಆತನ ಮನೆಯಲ್ಲಿಯೇ ಕೊಂದ ಆರೋಪಿ ಬೀಗ ಹಾಕಿ ಪರಾರಿಯಾಗಿದ್ದ‌‌. ನಾಲ್ಕು ದಿನಗಳ ಬಳಿಕ ಮನೆಯಲ್ಲಿ ಕೊಳೆತ ಶವದ ವಾಸನೆ ಬರುತ್ತಿದ್ದರಿಂದ ನೆರೆಹೊರೆಯವರು ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದರು.

ಸ್ಥಳಕ್ಕೆ ಬಂದ ಪೊಲೀಸರು ಮನೆ ಬೀಗ ಒಡೆದು ಒಳಹೋದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ‌‌‌.‌ ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ ಕೃತ್ಯದ ಹಿಂದೆ ರಕ್ಷಿತ್ ಭಾಗಿಯಾಗಿರುವುದು ಕಂಡು ಬಂದಿದ್ದು, ಆತನನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಸೆಕ್ಸ್ ವಿಚಾರಕ್ಕಾಗಿ ಪ್ರದೀಪ್​ನನ್ನು ಹತ್ಯೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರದೀಪ್ ಪುರುಷನಾದರೂ ಕೂಡ ಮಹಿಳೆಯಂತೆ ವೇಷಭೂಷಣ ಧರಿಸುತ್ತಿದ್ದ. ಸ್ಥಳೀಯರೆಲ್ಲರೂ ಈತನನ್ನು ಹೆಂಗಸು ಎಂದೇ ಭಾವಿಸಿದ್ದರು. ಕ್ಯಾಷಿಯರ್ ಲೇಔಟ್​​ನಲ್ಲಿ‌ ಬಾಡಿಗೆ ಮನೆಯಲ್ಲಿ ಒಬ್ಬಂಟಿನಾಗಿ ವಾಸವಾಗಿದ್ದ ಪ್ರದೀಪ್, ಜೀವನಕ್ಕಾಗಿ‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.‌ ಪುರುಷರೊಂದಿಗೆ ಸಂಬಂಧದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಎನ್ನಲಾಗಿದೆ.

ಈ ನಡುವೆ ಆಟೋ ಚಾಲಕ ರಕ್ಷಿತ್, ಪ್ರದೀಪ್ ಮನೆಗೆ ಎರಡ್ಮೂರು ಸಲ ಬಂದು ಹೋಗಿದ್ದನಂತೆ. ಇಬ್ಬರ ನಡುವೆ ದೈಹಿಕ‌ ಸಂಬಂಧ ಕೂಡ ಇತ್ತು. ‌ಆರಂಭದಲ್ಲಿ ಪ್ರದೀಪ್​ನನ್ನು ಹೆಂಗಸು ಎಂದೆ ಭಾವಿಸಿದ್ದ ಆರೋಪಿ, ತದನಂತರ ವಿಷಯ ಗೊತ್ತಾದರೂ ವಿರೋಧ ವ್ಯಕ್ತಪಡಿಸಲಿರಲಿಲ್ಲ.

ಮೇ 28ರಂದು ಆರೋಪಿ ರಕ್ಷಿತ್, ಪ್ರದೀಪ್ ಮನೆಗೆ ಬಂದಿದ್ದ.‌ ಕುಡಿದ ಆಮಲಿನಲ್ಲಿ ಸೆಕ್ಸ್ ಮಾಡುವಾಗ ಇಬ್ಬರ ಜಗಳ‌ವಾಗಿದೆ. ಮೊದಲು ಚಾಕುವಿನಿಂದ‌ ಪ್ರದೀಪ್, ರಕ್ಷಿತ್ ಹಲ್ಲೆ ಮಾಡಿದ್ದಾನೆ.‌ ಬಳಿಕ ಪ್ರತಿರೋಧವಾಗಿ ಅದೇ ಚಾಕುವಿನಿಂದ ಪ್ರದೀಪ್ ಹೊಟ್ಟೆಗೆ ತಿವಿದು ಹತ್ಯೆ ಮಾಡಿ ಮನೆಗೆ ಬೀಗ ಹಾಕಿಕೊಂಡು ರಕ್ಷಿತ್ ಎಸ್ಕೇಪ್ ಆಗಿದ್ದ. ಸದ್ಯ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ ಎಂದು‌ ಪೊಲೀಸರು ತಿಳಿಸಿದ್ದಾರೆ‌.

ಇದನ್ನೂ ಓದಿ: ಮಗಳ ಮೇಲೆ ಲೈಂಗಿಕ ದೌರ್ಜನ್ಯ: ಅವಮಾನ ತಾಳಲಾರದೇ ಆತ್ಮಹತ್ಯೆಗೆ ಶರಣಾದ ತಂದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.