ETV Bharat / state

ಬಿಎಸ್​ವೈ ಬದಲಿಸಿದರೆ ಬಿಜೆಪಿ ವರಿಷ್ಠರು ಲಿಂಗಾಯಿತರ ಅವಕೃಪೆಗೆ ತುತ್ತಾಗುತ್ತಾರೆ : ಎಂ ಬಿ ಪಾಟೀಲ್​

ಅವರನ್ನ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ದೆಹಲಿಗೆ ಹೋದಾಗ ಮಾಧ್ಯಮಗಳಲ್ಲಿ ಸುದ್ದಿ ಮಾಡಿಸಿ ಅವರನ್ನ ವೀಕ್ ಮಾಡಿದ್ರು. ನಿನ್ನೆ ಆಡಿಯೋ ಬಿಡುಗಡೆ ಮಾಡಿ ಅವರನ್ನ ಮತ್ತಷ್ಟು ವೀಕ್ ಮಾಡಲು ಮುಂದಾಗಿದ್ದಾರೆ. ಅವರು ನಮ್ಮ ಸಮುದಾಯದ ನಾಯಕ. ನನಗೆ ನೋವಾಗಿದೆ. ಜನತೆಗೂ ಸಹ ನೋವಾಗಿದೆ..

CM BSY and MB Patil
ಸಿ ಎಂ ಬಿಎಸ್​ವೈ ಹಾಗೂ ಎಂ ಬಿ ಪಾಟೀಲ್​
author img

By

Published : Jul 19, 2021, 8:23 PM IST

ಬೆಂಗಳೂರು : ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಂ ಬಿ ಪಾಟೀಲ್ ಅವರು ಸಿಎಂ ಬಿ ಎಸ್ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ್ದಾರೆ.

ಟ್ವೀಟ್ ಮಾಡಿರುವ ಅವರು, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಿಂಗಾಯತ ಸಮುದಾಯದ ಧೀಮಂತ ನಾಯಕರು. ಅವರನ್ನು ಪದಚ್ಯುತಗೊಳಿಸಿದರೆ, ನಿಶ್ಚಿತವಾಗಿಯೂ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ. ಯಡಿಯೂರಪ್ಪನವರ ವಯಸ್ಸು ಮತ್ತು ಕೊಡುಗೆಯನ್ನು ಪರಿಗಣಿಸಿ, ಅವರನ್ನು ಘನತೆ ಮತ್ತು ಮರ್ಯಾದೆಯಿಂದ ನಡೆಸಿಕೊಳ್ಳಬೇಕೆಂಬುದು ನನ್ನ ವೈಯಕ್ತಿಕ ಅನಿಸಿಕೆ ಎಂದಿದ್ದಾರೆ.

ಬಿಎಸ್‌ವೈ ಅವರನ್ನ ನಡೆಸಿಕೊಳ್ತಿರುವ ರೀತಿಯಿಂದ ನನಗೆ ನೋವಾಗಿದೆ.. ಮಾಜಿ ಸಚಿವ ಎಂ ಬಿ ಪಾಟೀಲ್

ಎಂ ಬಿ ಪಾಟೀಲ್ ಅವರ ಈ ಹೇಳಿಕೆ ಸಹ ದೊಡ್ಡ ಚರ್ಚೆಗೆ ಗ್ರಾಸವಾಗುತ್ತಿದೆ. ಇದೀಗ ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ನಾನು ನನ್ನ ಟ್ವೀಟ್​ಗೆ ಬದ್ಧ. ಬಿ ಎಸ್ ಯಡಿಯೂರಪ್ಪನವರನ್ನ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ.

ಬಿಜೆಪಿ ಅಧಿಕಾರಕ್ಕೆ ಬರಲು ಬಿಎಸ್​ವೈ ಕೊಡುಗೆ ಅಪಾರ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರೇ ಕಾರಣ. ಸಿಎಂ ಮುಂದುವರೆಸುವುದು, ಬದಲಾವಣೆ ಮಾಡುವುದು ಅವರ ಪಕ್ಷಕ್ಕೆ ಬಿಟ್ಟಿದ್ದು ಎಂದಿದ್ದಾರೆ.

ನಮ್ಮ ಸಮುದಾಯದ ನಾಯಕ : ಆದರೆ, ಅವರನ್ನ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ದೆಹಲಿಗೆ ಹೋದಾಗ ಮಾಧ್ಯಮಗಳಲ್ಲಿ ಸುದ್ದಿ ಮಾಡಿಸಿ ಅವರನ್ನ ವೀಕ್ ಮಾಡಿದ್ರು. ನಿನ್ನೆ ಆಡಿಯೋ ಬಿಡುಗಡೆ ಮಾಡಿ ಅವರನ್ನ ಮತ್ತಷ್ಟು ವೀಕ್ ಮಾಡಲು ಮುಂದಾಗಿದ್ದಾರೆ. ಅವರು ನಮ್ಮ ಸಮುದಾಯದ ನಾಯಕ. ನನಗೆ ನೋವಾಗಿದೆ. ಜನತೆಗೂ ಸಹ ನೋವಾಗಿದೆ ಎಂದರು.

ಅಸಮಾಧಾನ ಇದೆ : ಅವರ ಪರವಾಗಿ ಹೇಳಿಕೆ ಕೊಟ್ಟು ರಾಜಕೀಯ ಲಾಭ ಪಡೆಯುವ ಉದ್ದೇಶ ನನ್ನದಲ್ಲ. ಅವರ ಪಕ್ಷದಲ್ಲಿ ಇರೋ ಸಮುದಾಯ ನಾಯಕರು ಅವರ ಪರ ನಿಂತಿಲ್ಲ. ಅದು ಅವರ ನಿಲುವು. ಇದು ನನ್ನ ನಿಲುವು. ನನ್ನ ಪಕ್ಷದ ನಿಲುವಲ್ಲ. ಪಕ್ಷದ ವರಿಷ್ಠರು ನಡೆದುಕೊಳ್ಳುತ್ತಿರುವ ರೀತಿಗೆ ಅಸಮಾಧಾನ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಓದಿ: ಸಾಮಾನ್ಯರದ್ದಲ್ಲ, ಈ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದೇ.. : ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.